Skip to the content
ಜೀವಕ್ರಿಯೆಗಳು
1. ಪೈರುವೇಟ್ ನ ವಿಭಜನೆಯಿಂದ ಕಾರ್ಬನ್ ಡೈಆಕ್ಸೈಡ್, ನೀರು ಮತ್ತು ಶಕ್ತಿಯು ಬಿಡುಗಡೆಯಾಗುವ ಸ್ಥಳ
A] ಕೋಶದ್ರವ್ಯ
B] ಮೈಟೋಕಾಂಡ್ರಿಯಾ
C] ಕ್ಲೋರೋಪ್ಲಾಸ್ಟ್
D] ನ್ಯೂಕ್ಲಿಯಸ್
2. ಆಹಾರ ವಸ್ತುಗಳನ್ನು ದೇಹದ ಹೊರಗೆ ವಿಭಜಿಸಿ ನಂತರ ಹೀರಿಕೊಳ್ಳುವ ಜೀವಿಗಳ ಗುಂಪು
A] ನಾಯಿಕೊಡೆ, ಹಸಿರು ಸಸ್ಯಗಳು , ಅಮೀಬ
B] ಬ್ರೆಡ್ ಮೋಲ್ಡ್ , ಯೀಸ್ಟ್ , ನಾಯಿಕೊಡೆ
C] ಪ್ಯಾರಾಮೇಸಿಯಂ , ಅಮೀಬ , ಕಸ್ಕುಟಾ
D] ಕಸ್ಕುಟಾ , ಹೇನು , ಲಾಡಿಹುಳು
3. ಜೊಲ್ಲುರಸ ಗ್ರಂಥಿಗಳಿಂದ ಲಾಲಾರಸವು ಕಡಿಮೆ ಸ್ರವಿಕೆಯಾದರೆ ಯಾವ ಕ್ರಿಯೆಯ ಮೇಲೆ ಇದು ಪರಿಣಾಮ ಬೀರುತ್ತದೆ ?
A] ಪ್ರೋಟೀನ್ ಗಳು ಅಮೈನೋಆಮ್ಲಗಳಾಗಿ ವಿಭಜನೆಗೊಳ್ಳುವಿಕೆ
B] ಜೀವಸತ್ವಗಳ ಹೀರಿಕೆ
C] ಕೊಬ್ಬು ಕೊಬ್ಬಿನ ಆಮ್ಲಗಳು & ಗ್ಲಿಸರಾಲ ಆಗಿ ಪರಿವರ್ತನೆಗೊಳ್ಳುವಿಕೆ
D] ಪಿಷ್ಠವು ಶರ್ಕರವಾಗಿ ವಿಭಜನೆಗೊಳ್ಳುವಿಕೆ
4. ಮಾನವನ ಜೀರ್ಣನಾಳದ ಯಾವ ಭಾಗವು ಪಿತ್ತಕೋಶದಿಂದ ಸ್ರವಿಸಲ್ಪಡುವ ಪಿತ್ತರಸವನ್ನು ಸ್ವೀಕರಿಸುತ್ತದೆ ?
A] ಅನ್ನನಾಳ
B] ಜಠರ
C] ಸಣ್ಣ ಕರಳು
D] ದೊಡ್ಡ ಕರಳು
5. ಯೀಸ್ಟ್ ಕೋಶಗಳಲ್ಲಿ ಉಸಿರಾಟವು ಆಕ್ಸಿಜನ್ ಅನುಪಸ್ಥಿತಿಯಲ್ಲಿ ಜರಗುತ್ತದೆ. ಇಲ್ಲಿ ಒಂದು ಗ್ಲುಕೋಸ್ ಅಣು ವಿಭಜನೆಗೊಂಡಾಗ ದೊರೆಯುವ ಉತ್ಪನ್ನುಗಳು
A] ಕಾರ್ಬನ್ ಡೈ ಆಕ್ಸೈಡ್ + ನೀರು + ಶಕ್ತಿ
B] ಲ್ಯಾಕ್ಟಿಕ್ ಆಮ್ಲ + ಶಕ್ತಿ
C] ಎಥನಾಲ್ + ಕಾರ್ಬನ್ ಡೈ ಆಕ್ಸೈಡ್ + ಶಕ್ತಿ
D] ಕಾರ್ಬನ್ ಡೈ ಆಕ್ಸೈಡ್ ಮಾತ್ರ
6. ಮಾನವನ ಪಚನಕ್ರಿಯೆಯಲ್ಲಿ ಆಹಾರದೊಂದಿಗೆ ಬೆರೆಯುವ ಮೊದಲ ಕಿಣ್ವ
A] ಪೆಪ್ಸಿನ್
B] ಲಿಪೇಸ್
C] ಟ್ರಿಪ್ಸಿನ್
D] ಅಮೈಲೇಸ್
7. ಸ್ವಪೋಷಕ ಪೋಷಣಾ ವಿಧಾನದಲ್ಲಿ ಯಾವುದರ ಅವಶ್ಯಕತೆ ಇಲ್ಲ
A] ಕಾರ್ಬನ್ ಡೈ ಆಕ್ಸೈಡ್
B] ಆಕ್ಸಿಜನ್
C] ಕ್ಲೋರೋಫಿಲ್
D] ಸೂರ್ಯನ ಬೆಳಕು
8. ಕೆಳಗಿನ ಪ್ರಾಣಿ ಗುಂಪುಗಳಲ್ಲಿ ಆಕ್ಸಿಜನ್ಯು ಕ್ತ ಹಾಗೂ ಆಕ್ಸಿಜನ್ ರಿಕ್ತ ರಕ್ತವು ಪ್ರತ್ಯೇಕವಾಗಿ ಸಾಗಿಸಲ್ಪಡುತ್ತದೆ.
A] ಮೀನುಗಳು , ಉಭಯವಾಸಿಗಳು
B] ಉಭಯವಾಸಿಗಳು , ಸರಿಸೃಪಗಳು
C] ಸರಿಸೃಪಗಳು , ಹಕ್ಕಿಗಳು
D] ಹಕ್ಕಿಗಳು , ಸ್ತನಿಗಳು
9. ಕ್ರಿಕೆಟ್ ಆಟಗಾರರಲ್ಲಿ ಆಕ್ಸಿಜನ್ ಕೊರತೆಯಿಂದ ಸಾಮಾನ್ಯವಾಗಿ ಸ್ನಾಯು ಸೆಳೆತ ಉಂಟಾಗುತ್ತದೆ. ಈ ಪರಿಣಾಮ ಉಂಟಾಗಲು ಕಾರಣ
A] ಪೈರುವೇಟ್ ಎಥನಾಲ್ ಆಗಿ ಪರಿವರ್ತನೆಗೊಳ್ಳುವದರಿಂದ
B] ಪೈರುವೇಟ್ ಲ್ಯಾಕ್ಟಿಕ್ ಆಮ್ಲವಾಗಿ ಪರಿವರ್ತನೆಗೊಳ್ಳುವದರಿಂದ
C] ಪೈರುವೇಟ್ ಗ್ಲುಕೋಸ್ ಆಗಿ ಪರಿವರ್ತನೆಗೊಳ್ಳುವದರಿಂದ
D] ಗ್ಲುಕೋಸ್ ಪೈರುವೇಟ್ ಆಗಿ ಪರಿವರ್ತನೆಗೊಳ್ಳದೆ ಇರುವದರಿಂದ
10. ಕೆಳಗೆ ಕೊಡಲಾದ ಹೃದಯದ ನೀಳಛೇದದ ಚಿತ್ರದಲ್ಲಿ A ಎಂದು ಗುರುತಿಸಿದ ಭಾಗದ ಕಾರ್ಯ
A] ಆಮ್ಲಜನಕ ರಹಿತ ರಕ್ತವನ್ನು ಶ್ವಾಸಕೋಶಗಳಿಗೆ ಸಾಗಿಸುವುದು
B] ಆಮ್ಲಜನಕ ಸಹಿತ ರಕ್ತವನ್ನು ದೇಹದ ಎಲ್ಲ ಭಾಗಗಳಿಗೆ ಸಾಗಿಸುವುದು
C] ಆಮ್ಲಜನಕ ರಹಿತ ರಕ್ತವನ್ನು ದೇಹದ ಎಲ್ಲ ಭಾಗಗಳಿಂದ ಪಡೆಯುವುದು
D] ಆಮ್ಲಜನಕ ಸಹಿತ ರಕ್ತವನ್ನು ಶ್ವಾಸಕೋಶಗಳಿಂದ ಪಡೆಯುವುದು
Ready to send