Skip to the content
ಲೋಹಗಳು ಮತ್ತು ಅಲೋಹಗಳು
1. ಈ ಕೆಳಗಿನ ಯಾವ ಲೋಹಗಳು ಮೃದುವಾಗಿದ್ದು, ಇವುಗಳನ್ನು ಚಾಕುವಿನಿಂದ ಕತ್ತರಿಸಬಹುದು
A] ಕಬ್ಬಿಣ , ತಾಮ್ರ , ಅಲ್ಯುಮಿನಿಯಂ
B] ಲೀಥಿಯಂ, ಸೋಡಿಯಂ, ಪೊಟ್ಯಾಸಿಯಂ
C] ಪಾದರಸ ,ಸೀಸಿಯಂ
D] ಚಿನ್ನ , ಬೆಳ್ಳಿ , ಪ್ಲಾಟಿನಂ
2. ಕೆಳಗಿನ ಲೋಹಗಳಲ್ಲಿ ತಂಪು ಅಥವಾ ಬಿಸಿ ನೀರಿನೊಂದಿಗೆ ವರ್ತಿಸದ ಲೋಹ
A] Na
B] Ca
C] Mg
D] Fe
3. ಕಬ್ಬಿಣದೊಂದಿಗೆ ಅಲ್ಯುಮಿನಿಯಂ ಬಳಸಿ ರೈಲ್ವೆ ಹಳಿಗಳನ್ನು ಜೋಡಿಸುವಲ್ಲಿ ಕೈಗೊಳ್ಳುವ ಕ್ರಿಯೆ
A] ಅಪಕರ್ಷಣ ಕ್ರಿಯೆ
B] ಥರ್ಮೈಟ್ ಕ್ರಿಯೆ
C] ಪುಷ್ಟೀಕರಣ ಕ್ರಿಯೆ
D] ವಿದ್ಯುದ್ವಿಭಜನ ಕ್ರಿಯೆ
4. ಗ್ಯಾಲ್ವನೀಕರಣ ಕ್ರಿಯೆಯು ಕಬ್ಬಿಣ ತುಕ್ಕು ಹಿಡಿಯುವದನ್ನು ತಡೆಗಟ್ಟುವ ವಿಧಾನವಾಗಿದೆ. ಇಲ್ಲಿ ಕಬ್ಬಿಣದ ಮೇಲ್ಮೈಗೆ ಈ ಲೋಹದ ಹೊದಿಕೆ ಉಂಟಾಗುತ್ತದೆ.
A] Zn
B] Cu
C] Al
D] Mg
5. X ಎಂಬ ಲೋಹವು ಮೃದುವಾಗಿದ್ದು ಇದನ್ನು ಚಾಕುವಿನಿಂದ ಕತ್ತರಿಸಬಹುದು. ಇದು ಗಾಳಿಯೊಂದಿಗೆ ಶಿಘ್ರವಾಗಿ ವರ್ತಿಸುತ್ತದೆ ಅದ್ದರಿಂದ ಇದನ್ನು ಗಾಳಿಯಲ್ಲಿ ತೆರೆದಿಡುವದಿಲ್ಲ ಹಾಗೂ ನೀರಿನೊಂದಿಗೆಯೂ ಸಹ ತೀವ್ರವಾಗಿ ವರ್ತಿಸುತ್ತದೆ. ಆ ಲೋಹವನ್ನು ಗುರುತಿಸಿ
A] Ca
B] Zn
C] Na
D] Mg
6. ಪಾದರಸವನ್ನು ಘಟಕವಾಗಿ ಹೊಂದಿರುವ ಮಿಶ್ರಲೋಹ
A] ಕಲೆರಹಿತ ಉಕ್ಕು
B] ಅಮಾಲ್ಗಂ
C] ಹಿತ್ತಾಳೆ
D] ಕಂಚು
7. ಲೋಹಗಳನ್ನು ಸುಲಭವಾಗಿ ಎಳೆದು ತಂತಿಗಳನ್ನಾಗಿ ಮಾಡಬಹುದು. ಇದಕ್ಕೆ ಕಾರಣವಾದ ಲೋಹೀಯ ಗುಣ
A] ವಾಹಕ ಗುಣ
B] ಕುಟ್ಯತೆ ಗುಣ
C] ತನ್ಯತೆ ಗುಣ
D] ಶಾಬ್ದನ ಗುಣ
8. ಕಬ್ಬಿಣದ ಕಾವಲಿ ತುಕ್ಕು ಹಿಡಿಯದಂತೆ ತಡೆಗಟ್ಟಲು ಸೂಕ್ತವಾದ ವಿಧಾನ
A] ಗ್ರೀಸ್ ಹಚ್ಚುವುದು
B] ಬಣ್ಣ ಹಚ್ಚುವುದು
C] ಸತುವಿನ ಲೇಪನ ಮಾಡುವುದು
D] ಮೇಲಿನ ಎಲ್ಲವು
9. ಆಹಾರ ಪದಾರ್ಥಗಳ ಡಬ್ಬಗಳನ್ನು ತವರದಿಂದ ಲೇಪನ ಮಾಡಿರುತ್ತಾರೆ ಹೊರತು ಸತುವಿನಿಂದಲ್ಲ ಕಾರಣ,
A] ಸತುವು ಹೆಚ್ಚು ದುಬಾರಿ
B] ಸತುವಿನ ಕ್ರಿಯಾ ಪಟುತ್ವ ಕಡಿಮೆ
C] ಸತುವಿನ ಕ್ರಿಯಾ ಪಟುತ್ವ ಹೆಚ್ಚು
D] ಸತುವಿನ ಕರಗುವ ಬಿಂದು ತವರಕ್ಕಿಂತ ಹೆಚ್ಚು.
10. ಹೊಸದಾದ ಕಬ್ಬಿಣದ ಮೊಳೆಯನ್ನು ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಹಾಕಿ ಸ್ವಲ್ಪ ಸಮಯದ ನಂತರ ನೀವು ಗಮನಿಸುವುದು.
A] ದ್ರಾವಣದ ಬಣ್ಣ ನೀಲಿಯಾಗೆ ಇದ್ದು ಮೊಳೆಯ ಸುತ್ತ ಹೊದಿಕೆ ಉಂಟಾಗುವುದು
B] ದ್ರಾವಣ ಹಸಿರು ಬಣ್ಣಕ್ಕೆ ತಿರುಗಿ ಮೊಳೆಯ ಸುತ್ತ ಹೊದಿಕೆ ಉಂಟಾಗುವುದು
C] ದ್ರಾವಣದ ಬಣ್ಣ ನೀಲಿಯಾಗೆ ಇದ್ದು ಮೊಳೆಯ ಸುತ್ತ ಹೊದಿಕೆ ಉಂಟಾಗುವುದಿಲ್ಲ
D] ದ್ರಾವಣ ಹಸಿರು ಬಣ್ಣಕ್ಕೆ ತಿರುಗುತ್ತದೆ & ಮೊಳೆಯ ಸುತ್ತ ಹೊದಿಕೆ ಉಂಟಾಗುವುದಿಲ್ಲ
Ready to send