Skip to the content
ಆನುವಂಶೀಯತೆ & ಜೀವ ವಿಕಾಸ
1. ಗುಲಾಬಿ ಬಣ್ಣದ ಹೂ ಬಿಡುವ ಸಸ್ಯಗಳನ್ನು ಸ್ವಕೀಯ ಪರಾಗಸ್ಪರ್ಶ ಕ್ರಿಯೆಗೆ ಒಳಪಡಿಸಿದಾಗ ಅದರ ಮುಂದಿನ ಸಂತತಿಯಲ್ಲಿ 1 ಕೆಂಪು , 2 ಗುಲಾಬಿ ಹಾಗೂ 1 ಬಿಳಿ ಬಣ್ಣದ ಹೂ ಬಿಡುವ ಸಸ್ಯಗಳು ದೊರೆಯುತ್ತವೆ. ಇಲ್ಲಿ ಹೂವಿನ ಬಣ್ಣಕ್ಕೆ ಕಾರಣವಾದ ಪ್ರಬಲ ಹಾಗೂ ದುರ್ಬಲ ಗುಣಗಳು
A] ಕೆಂಪು - ಪ್ರಬಲ , ಗುಲಾಬಿ - ದುರ್ಬಲ
B] ಕೆಂಪು - ಪ್ರಬಲ , ಬಿಳಿ - ದುರ್ಬಲ
C] ಬಿಳಿ - ಪ್ರಬಲ , ಗುಲಾಬಿ - ದುರ್ಬಲ
D] ಬಿಳಿ - ಪ್ರಬಲ , ಕೆಂಪು - ದುರ್ಬಲ
2. ಎತ್ತರದ [TT] ಬಟಾಣಿ ಸಸ್ಯವನ್ನು ಗಿಡ್ಡ [tt] ಬಟಾಣಿ ಸಸ್ಯದೊಂದಿಗೆ ಅಡ್ಡಹಾಯಸಿದಾಗ F1 ಸಂತತಿಯಲ್ಲಿ ದೊರೆಯುವ ಎಲ್ಲ ಸಸ್ಯಗಳು ಎತ್ತರವಾಗಿರುತ್ತವೆ. ಇದಕ್ಕೆ ಕಾರಣ
A] ಎತ್ತರದ ಗುಣವು ಆನುವಂಶೀಯ ಅಲ್ಲ
B] ಎತ್ತರದ ಗುಣ ದುರ್ಬಲವಾಗಿದೆ
C] ಎತ್ತರದ ಗುಣ ಪ್ರಬಲವಾಗಿದೆ
D] ಗಿಡ್ಡ ಗುಣಪ್ರಬಲವಾಗಿದೆ.
3. ಜೀವಿಯೊಂದರ ಪಳೆಯುಳಿಕೆಯು ಆಳವಾದ ಮಣ್ಣಿನ ಪದರಿನಲ್ಲಿ ದೊರೆತಿದೆ. ಇದರಿಂದ ನಾವು ಊಹಿಸಬಹುದಾಗಿರುವುದು ,
A] ಜೀವಿಯು ಇತ್ತೀಚೆಗೆ ವಿನಾಶಗೊಂಡಿದೆ
B] ಜೀವಿಯು ಸಾವಿರಾರು ವರ್ಷಗಳ ಹಿಂದೆ ವಿನಾಶಗೊಂಡಿದೆ
C] ಭೂಮಿಯ ಪದರಿನಲ್ಲಿನ ಪಳೆಯುಳಿಕೆ ಸ್ಥಾನದಿಂದ ಕಾಲವನ್ನು ಊಹಿಸಲು ಸಾಧ್ಯವಿಲ್ಲ
D] ಪಳೆಯುಳಿಕೆಗಳ ಕಾಲವನ್ನು ತಿಳಿಯಲು ಸಾಧ್ಯವಿಲ್ಲ.
4. ಅನುವಂಶೀಯವಲ್ಲದ ಆದರೆ ಜೀವಿಗಳಿಸಿದ ಲಕ್ಷಣವನ್ನು ಗುರುತಿಸಿ
A] ಕಣ್ಣಿನ ಬಣ್ಣ
B] ಚರ್ಮದ ರಚನೆ
C] ದೇಹದ ಗಾತ್ರ
D] ಕೂದಲಿನ ರಚನೆ
5. ದುಂಡನೆಯ, ಹಸಿರು [RR yy] ಬೀಜದ ಬಟಾಣಿ ಸಸ್ಯವನ್ನು ಸುಕ್ಕಾದ , ಹಳದಿ [rr YY] ಬೀಜದ ಬಟಾಣಿ ಸಸ್ಯದೊಂದಿಗೆ ಸಂಕರಗೊಳಿಸಿದಾಗ F1 ಸಂತತಿಯಲ್ಲಿ ದೊರೆಯುವ ಸಸ್ಯಗಳಲ್ಲಿ ಕಂಡುಬರುವ ಗುಣ
A] ದುಂಡನೆಯ ಹಳದಿ ಬೀಜ
B] ದುಂಡನೆಯ ಹಳದಿ ಬೀಜ
C] ಸುಕ್ಕಾದ ಹಸಿರು ಬೀಜ
D] ಸುಕ್ಕಾದ ಹಳದಿ ಬೀಜ
6. ಡೈನೋಸಾರಗಳಿಗೆ ರೆಕ್ಕೆಗಳಿದ್ದರೂ ಅವು ಹಾರಲಿಲ್ಲ, ಆದರೆ ಹಕ್ಕಿಗಳು ರೆಕ್ಕೆಗಳಿಂದ ಹಾರಬಲ್ಲವು. ಜೀವ ವಿಕಾಸಕ್ಕೆ ಸಂಬಂದಿಸಿದಂತೆ ಈ ಹೇಳಿಕೆಯ ಅರ್ಥ
A] ಹಕ್ಕಿಗಳಿಗೂ ಸರಿಸೃಪಗಳಿಗೂ ಸಂಬಂಧವಿಲ್ಲ
B] ಹಕ್ಕಿಗಳಿಂದ ಸರಿಸೃಪಗಳು ವಿಕಸಿತಗೊಂಡಿವೆ
C] ಸರಿಸೃಪಗಳಿಂದ ಹಕ್ಕಿಗಳು ವಿಕಸಿತಗೊಂಡಿವೆ
D] ರೆಕ್ಕೆಗಳು ಕೇವಲ ರಚನಾನುರೂಪಿ ಅಂಗಗಳಾಗಿವೆ
7. ಶುದ್ಧ ಎತ್ತರದ ಬಟಾಣಿ ಸಸ್ಯಗಳನ್ನು ಶುದ್ಧ ಗಿಡ್ಡ ಬಟಾಣಿ ಸಸ್ಯಗಳೊಂದಿಗೆ ಸಂಕರಿಸಿದಾಗ F2 ಸಂತತಿಯಲ್ಲಿ ಮೆಂಡಲನು ಪಡೆದ ಶುದ್ಧ ಗಿಡ್ಡ ಸಸ್ಯಗಳ ಶೇಕಡಾ ಪ್ರಮಾಣ
A] 25%
B] 40%
C] 75%
D] 100%
8. ರಚನಾನೂರೂಪಿ ಅಂಗಗಳೆಂದರೆ -
A] ರಚನೆಯಲ್ಲಿ ಭಿನ್ನತೆ , ಕಾರ್ಯದಲ್ಲಿ ಸಾಮ್ಯತೆ ಹೊಂದಿವೆ
B] ರಚನೆಯಲ್ಲಿ ಸಾಮ್ಯತೆ , ಕಾರ್ಯದಲ್ಲಿ ಭಿನ್ನತೆ ಹೊಂದಿವೆ
C] ರಚನೆ , ಕಾರ್ಯ ಎರಡೂ ಭಿನವಾಗಿವೆ
D] ರಚನೆ , ಕಾರ್ಯ ಎರಡೂ ಒಂದೇ ಆಗಿವೆ
9. ತಂದೆಯಿಂದ X - ವರ್ಣತಂತುವನ್ನು ಪಡೆದ ಭ್ರೂಣವು
A] X - ವರ್ಣತಂತುವು ಲಿಂಗವನ್ನು ನಿರ್ಧರಿಸುವುದಿಲ್ಲ
B] ಗಂಡು ಮಗುವಾಗಿ ಬೆಳೆಯುತ್ತದೆ
C] ಹೆಣ್ಣು ಮಗುವಾಗಿ ಬೆಳೆಯುತ್ತದೆ
D] ಸಾಧ್ಯತೆ ಅನುಸಾರ ಗಂಡು ಅಥವಾ ಹೆಣ್ಣು ಮಗುವಾಗಿ ಬೆಳೆಯುತ್ತದೆ
10. ಕೆಳಗಿನ ಯಾವ ಲಕ್ಷಣ/ಗಳು ವಂಶವಾಹಿ [ಜೀನ್] ಗಳಿಂದ ನಿಯಂತ್ರಿಸಲ್ಪಡುತ್ತವೆ. i. ವ್ಯಕ್ತಿಯ ತೂಕ ii. ವ್ಯಕ್ತಿಯ ಎತ್ತರ iii . ಚರ್ಮದ ಬಣ್ಣ
A] i ಮತ್ತು ii
B] i ಮತ್ತು iii
C] i , ii ಮತ್ತು iii
D] ii ಮತ್ತು iii
Ready to send