Skip to the content
ಬೆಳಕು , ಪ್ರತಿಫಲನ & ವಕ್ರೀಭವನ
1. ನಿಮ್ನದರ್ಪಣವು ವಸ್ತುವಿನ ಗಾತ್ರದಷ್ಟೆ ಇರುವ ಪ್ರತಿಬಿಂಬವನ್ನು ಉಂಟುಮಾಡಬೇಕಾದರೆ ವಸ್ತುವನ್ನು
A] C ನಲ್ಲಿ ಇಡಬೇಕು
B] C ಮತ್ತು F ಗಳ ನಡುವೆ ಇಡಬೇಕು
C] F ನಲ್ಲಿ ಇಡಬೇಕು
D] ಅನಂತದಲ್ಲಿ ಇಡಬೇಕು
2. P , Q , R ಮತ್ತು S ಎಂಬ ನಾಲ್ಕು ವಸ್ತುಗಳ ವಕ್ರೀಭವನ ಸೂಚ್ಯಂಕವು ಕ್ರಮವಾಗಿ 1.50 , 1.36 , 1.77 ಮತ್ತು 1.31 ಇರುತ್ತದೆ. ಯಾವ ವಸ್ತುವಿನಲ್ಲಿ ಬೆಳಕಿನ ವೇಗ ಗರಿಷ್ಟವಾಗಿರುತ್ತದೆ.
A] P
B] Q
C] R
D] S
3. ಮಸೂರದ ಸಾಮರ್ಥ್ಯ +2.0 D ಎಂದಾದರೆ, ಅದರ ಸಂಗಮ ದೂರ
A] 0.25m
B] 0.5m
C] 1m
D] 2m
4. ನಿಮ್ನ ದರ್ಪಣದ ಮೇಲೆ ಬೀಳುವ ಸೂರ್ಯನ ಕಿರಣಗಳು ದರ್ಪಣದ ಮುಂದೆ 15cm ಅಂತರದಲ್ಲಿ ಕೇಂದ್ರೀಕರಣಗೊಳ್ಳುತ್ತವೆ. ವಸ್ತುವಿನಷ್ಟೇ ಗಾತ್ರದ ಪ್ರತಿಬಿಂಬವನ್ನು ಪಡೆಯಲು ಮಸೂರವನ್ನು ಎಲ್ಲಿ ಇಡಬೇಕು ?
A] ದರ್ಪಣದಿಂದ 15 cm ದೂರದಲ್ಲಿ
B] ದರ್ಪಣದಿಂದ 30 cm ದೂರದಲ್ಲಿ
C] 15 cm ಮತ್ತು 30 cm ನಡುವೆ
D] 30 cm ನಿಂದ ಆಚೆಗೆ
5. ವಾಹನದಲ್ಲಿ ಅಳವಡಿಸಿದ ಹಿನ್ನೋಟದ ಕನ್ನಡಿಯಿಂದ ಉಂಟಾದ ಪ್ರತಿಬಿಂಬದ ವರ್ಧನೆಯು ಯಾವಾಗಲೂ
A] 1 ಕ್ಕೆ ಸಮನಾಗಿರುತ್ತದೆ
B] 1 ಕ್ಕಿಂತ ಹೆಚ್ಚಾಗಿರುತ್ತದೆ
C] 1 ಕ್ಕಿಂತ ಕಡಿಮೆ ಇರುತ್ತದೆ
D] 1 ಕ್ಕಿಂತ ಹೆಚ್ಚು ಅಥವಾ ಕಡಿಮೆ ಆಗಬಹುದು
6. ಗಾಳಿಯಿಂದ ಆಯತಾಕಾರದ ಗಾಜಿನ ಚಪ್ಪಡಿಯ ಮೂಲಕ ಹಾದು ಹೋಗುವ ಬೆಳಕಿನ ಪಥದ ಚಿತ್ರವನ್ನು ನಾಲ್ಕು ವಿದ್ಯಾರ್ಥಿಗಳು ಕೆಳಗಿನಂತೆ ಚಿತ್ರಿಸಿದ್ದಾರೆ. ಇವರಲ್ಲಿ ಸರಿಯಾಗಿ ಚಟುವಟಿಕೆ ಕೈಗೊಂಡ ವಿದ್ಯಾರ್ಥಿ
A] A
B] B
C] C
D] D
7. ಪೀನಮಸೂರವೊಂದರ F ಮತ್ತು 2F ಗಳ ನಡುವೆ ವಸ್ತುವನ್ನು ಇರಿಸಲಾಗಿದೆ. ಇಲ್ಲಿ ಉಂಟಾಗುವ ವಸ್ತುವಿನ ಪ್ರತಿಬಿಂಬದ ಕುರಿತು ಸರಿಯಾದ ಹೇಳಿಕೆ -
A] ವಸ್ತುವಿಗಿಂತ ದೊಡ್ಡದಾದ ಸತ್ಯ ಪ್ರತಿಬಿಂಬ
B] ವಸ್ತುವಿಗಿಂತ ಚಿಕ್ಕದಾದ ನೇರ ಪ್ರತಿಬಿಂಬ
C] ವಸ್ತುವಿನಷ್ಟೇ ಗಾತ್ರದ ತಲೆಕೆಳಗಾದ ಪ್ರತಿಬಿಂಬ
D] ವಸ್ತುವಿಗಿಂತ ದೊಡ್ಡದಾದ ಮಿಥ್ಯ ಪ್ರತಿಬಿಂಬ
8. P , Q , R ಮತ್ತು S ಎಂಬ ನಾಲ್ಕು ಪೀನಮಸೂರುಗಳ ಸಂಗಮದೂರವು ಕ್ರಮವಾಗಿ 20 cm , 15 cm , 5 cm ಹಾಗೂ 10 cm ಇದೆ. ಇವುಗಳಲ್ಲಿ ಯಾವ ಮಸೂರದ ಸಾಮರ್ಥ್ಯ ಹೆಚ್ಚು ?
A] P
B] Q
C] R
D] S
9. ನಿಮ್ನ ದರ್ಪಣದಿಂದ ಉಂಟಾದ ಪ್ರತಿಬಿಂಬವು ಮಿಥ್ಯ, ನೇರ ಮತ್ತು ವಸ್ತುವಿಗಿಂತ ದೊಡ್ಡದಾಗಿದೆ. ಹಾಗಾದರೆ ವಸ್ತುವಿನ ಸ್ಥಾನ ಎಲ್ಲಿರಬೇಕು ?
A] ಪ್ರಧಾನ ಸಂಗಮ ಮತ್ತು ವಕ್ರತಾ ಕೇಂದ್ರಗಳ ನಡುವೆ.
B] ವಕ್ರತಾ ಕೇಂದ್ರದಲ್ಲಿ
C] ವಕ್ರತಾ ಕೇಂದ್ರದಿಂದ ದೂರದಲ್ಲಿ
D] ಧ್ರುವ ಮತ್ತು ಪ್ರಧಾನ ಸಂಗಮದ ನಡುವೆ
10. ಶಬ್ದಕೋಶದಲ್ಲಿ ಇರುವ ಚಿಕ್ಕ ಅಕ್ಷರಗಳನ್ನು ಓದಲು ಈ ಕೆಳಗೆ ನಮೂದಿಸಿದ ಮಸೂರಗಳಲ್ಲಿ ನೀವು ಯಾವುದಕ್ಕೆ ಆದ್ಯತೆಯನ್ನು ನೀಡುತ್ತೀರಿ?
A] 50 cm ಸಂಗಮ ದೂರವನ್ನು ಹೊಂದಿರುವ ಪೀನ ಮಸೂರ
B] 50 cm ಸಂಗಮ ದೂರವನ್ನು ಹೊಂದಿರುವ ನಿಮ್ನ ಮಸೂರ
C] 5 cm ಸಂಗಮ ದೂರವನ್ನು ಹೊಂದಿರುವ ಪೀನ ಮಸೂರ
D] 5 cm ಸಂಗಮ ದೂರವನ್ನು ಹೊಂದಿರುವ ನಿಮ್ನ ಮಸೂರ
Ready to send