Skip to the content
ಶಕ್ತಿಯ ಆಕರಗಳು
1. ಉತ್ಪಾದನೆ ಹಾಗೂ ಬಳಕೆಯ ದೃಷ್ಟಿಕೋನದಿಂದ ಪರಿಸರಕ್ಕೆ ಅತಿ ಕಡಿಮೆ ಹಾನಿ ಉಂಟುಮಾಡುವ ಶಕ್ತಿಯ ಆಕರ
A] ನ್ಯೂಕ್ಲೀಯರ್ ಶಕ್ತಿ
B] ಉಷ್ಣ ವಿದ್ಯುತ್ ಶಕ್ತಿ
C] ಸೌರಶಕ್ತಿ
D] ಭೂಗರ್ಭ ಉಷ್ಣಶಕ್ತಿ
2. ಸೌಕುಕ್ಕರ್ ನ ಯಾವ ಭಾಗದ ಕಾರ್ಯವು ಹಸಿರುಮನೆ ಪರಿಣಾಮಕ್ಕೆ ಹೋಲಿಕೆಯಾಗುತ್ತದೆ ?
A] ಕುಕ್ಕರ್ ಒಳಗೆ ಬಳಿಯಲಾದ ಕಪ್ಪು ಬಣ್ಣ
B] ಕುಕ್ಕರ್ ಮೇಲೆ ಮುಚ್ಚಲಾದ ಗಾಜು
C] ಬೆಳಕನ್ನು ಕೇಂದ್ರೀಕರಿಸುವ ಕನ್ನಡಿ
D] ಕುಕ್ಕರ್ ನ ಹೊರ ಕವಚ
3. ನ್ಯೂಕ್ಲೀಯ ಶಕ್ತಿಯ ಉತ್ಪಾದನೆಯಲ್ಲಿರುವ ಅತಿ ದೊಡ್ಡ ಸಮಸ್ಯೆ ಎಂದರೆ -
A] ನ್ಯೂಕ್ಲೀಯಸ್ ಒಡೆಯುದು
B] ಕ್ರಿಯೆಯನ್ನು ನಿಯಂತ್ರಿಸುವುದು
C] ನ್ಯೂಕ್ಲೀಯ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವುದು
D] ಉಳಿದ ತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು
4. ನಾವು ಬಳಸುವ ಶಕ್ತಿಯ ಆಕರಗಳೆಲ್ಲವೂ ಪರೋಕ್ಷವಾಗಿ ಸೌರಶಕ್ತಿಯ ಸಂಗ್ರಹಿತ ಆಕರಗಾಗಿವೆ. ಕೆಳಗಿನವುಗಳಲ್ಲಿ ಯಾವ ಆಕರವು ಸೂರ್ಯನಿಂದ ಪ್ರಭಾವಿತಗೊಂಡಿರುವುದಿಲ್ಲ
A] ಪವನ ಶಕ್ತಿ
B] ಭೂಗರ್ಭ ಉಷ್ಣ ಶಕ್ತಿ
C] ಫಾಸಿಲ್ ಇಂಧನಗಳಲ್ಲಿನ ಶಕ್ತಿ
D] ಜೈವಿಕ ಅನಿಲದಲ್ಲಿನ ಶಕ್ತಿ
5. ಟರ್ಬೈನ್ ಚಲಾಯಿಸದೆ ಪರಿಣಾಮಕಾರಿಯಾಗಿ ವಿದ್ಯುತ್ ಉತ್ಪಾದಿಸುವ ಘಟಕ
A] ಉಷ್ಣ ವಿದ್ಯುತ್ ಸ್ಥಾವರ
B] ಜಲ ವಿದ್ಯುತ್ ಸ್ಥಾವರ
C] ಸೌರ ವಿದ್ಯುತ್ ಸ್ಥಾವರ
D] ಪವನ ವಿದ್ಯುತ್ ಸ್ಥಾವರ
6. ಜೈವಿಕ ಅನಿಲದ ಪ್ರಧಾನ ಘಟಕ
A] ಮೀಥೇನ
B] ಕಾರ್ಬನ್ ಡೈ ಆಕ್ಸೈಡ್
C] ಹೈಡ್ರೋಜನ್
D] ಹೈಡ್ರೋಜನ್ ಸಲ್ಪೈಡ್
7. ಮಾನವನ ಬಳಕೆಗೆ ಅತಿ ಸೀಮಿತ ಅವಧಿಗೆ ಲಭ್ಯವಿರುವ ಅಥವಾ ಶೀಘ್ರದಲ್ಲಿಯೆ ಮುಗಿದುಹೋಗುವ ಇಂಧನ
A] ಭೂಗರ್ಭ ಉಷ್ಣ ಶಕ್ತಿ
B] ಯುರೇನಿಯಂ
C] ಪೆಟ್ರೋಲಿಯಂ
D] ಪವನ ಶಕ್ತಿ
8. ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಯನ್ನು ಗುರುತಿಸಿ.
A] ಭೂಪದರಿನಲ್ಲಿ ಮುಗಿದು ಹೋಗದಷ್ಟು ಫಾಸಿಲ್ ಇಂಧನದ ಸಂಗ್ರಹವಿದೆ
B] ಸೌರಶಕ್ತಿಯು ನವೀಕರಿಸಬಹುದಾದ ಶಕ್ತಿಯ ಆಕರ
C] ಪವನಶಕ್ತಿಯಿಂದ ವಿದ್ಯುತ್ ಉತ್ಪಾದನೆಯು ಮಾಲಿನ್ಯ ಉಂಟುಮಾಡುತ್ತದೆ.
D] ನ್ಯೂಕ್ಲೀಯ ತ್ಯಾಜ್ಯಗಳನ್ನು ಸುಲಭವಾಗಿ ವಿಲೆವಾರಿ ಮಾಡಬಹುದು
9. ಈ ಕೆಳಗಿನವುಗಳಲ್ಲಿ ಯಾವುದು ಫಾಸಿಲ್ ಇಂಧನವಲ್ಲ
A] ಜೈವಿಕ ಅನಿಲ
B] ನೈಸರ್ಗಿಕ ಅನಿಲ
C] LPG
D] ಕಲ್ಲಿದ್ದಿಲು
10. ಕೇವಲ ಕಾರ್ಬನ್ ಹಾಗೂ ಹೈಡ್ರೋಜನ್ ಗಳಿಂದಾದ ನಾಲ್ಕು ಇಂಧನಗಳಿವೆ, ಇವುಗಳಲ್ಲಿ ಇಂಧನಮೌಲ್ಯ ಹೆಚ್ಚಿರು ಇಂಧನವು -
A] ಅಧಿಕ ಕಾರ್ಬನ, ಕಡಿಮೆ ಹೈಡ್ರೋಜನ್ ಹೊಂದಿರುತ್ತದೆ
B] ಕಾರ್ಬನ್ & ಹೈಡ್ರೋಜನ್ ಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುತ್ತದೆ
C] ಕಾರ್ಬನ್ & ಹೈಡ್ರೋಜನ್ ಗಳನ್ನು ಸಮ ಪ್ರಮಾಣದಲ್ಲಿ ಹೊಂದಿರುತ್ತದೆ
D] ಕಾರ್ಬನ್ & ಹೈಡ್ರೋಜನ್ ಗಳನ್ನು ಅತಿ ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತದೆ
Ready to send