Skip to the content
ನಮ್ಮ ಸುತ್ತಲಿನ ದ್ರವ್ಯಗಳು
1. ಈ ಕೆಳಗಿನ ಯಾವುದು ದ್ರವ್ಯ ಅಲ್ಲ -
a] ಗಾಳಿ
b] ಧೂಳು
c] ತೇವಾಂಶ
d] ತಂಪು
2. ಕೆಲವು ವಸ್ತುಗಳನ್ನು ಅವುಗಳ ಕಣಗಳ ನಡುವಿನ ‘ಆಕರ್ಷಣೆಯ ಬಲ ’ ಹೆಚ್ಚುತ್ತಿರುವ ಕ್ರಮದಲ್ಲಿ ಜೋಡಿಸಲಾಗಿದೆ. ಈ ಕೆಳಗಿನವುಗಳಲ್ಲಿ ಯಾವುದು ಸರಿಯಾದ ಕ್ರಮದಲ್ಲಿದೆ ?
a] ನೀರು, ಗಾಳಿ, ಕಲ್ಲು
b] ಗಾಳಿ, ಸಕ್ಕರೆ, ತೈಲ
c] ಆಮ್ಲಜನಕ, ನೀರು, ಸಕ್ಕರೆ
d] ಉಪ್ಪು, ಹಣ್ಣಿನ ರಸ , ಗಾಳಿ
3. ಘನವಸ್ತುವು ದ್ರವಸ್ಥಿತಿಗೆ ಬರದೆ ನೇರವಾಗಿ ಅನಿಲ ಸ್ಥಿತಿಗೆ ಬದಲಾಗುವುದನ್ನು ಹೀಗೆ ಕರೆಯುವರು
a] ಆವೀಕರಣ
b] ಭಾಷ್ಪೀಕರಣ
c] ಸಾಂದ್ರೀಕರಣ
d] ಉತ್ಪತನ
4. ಈ ಕೆಳಗಿನ ಯಾವ ಸಂದರ್ಭದಲ್ಲಿ ಭಾಷ್ಪೀಕರಣದ ದರವು ಹೆಚ್ಚಾಗಿರುತ್ತದೆ ?
a] ಮೇಲ್ಮೈ ವಿಸ್ತೀರ್ಣ ಹೆಚ್ಚಾದಾಗ
b] ತಾಪ ಕಡಿಮೆ ಇದ್ದಾಗ
c] ಆರ್ದ್ರತೆ ಹೆಚ್ಚಾದಾಗ
d] ಗಾಳಿಯ ವೇಗ ಕಡಿಮೆ ಇದ್ದಾಗ
5. ಈ ಚಿತ್ರದಲ್ಲಿ ಯಾವ ಸಂಗ್ರಾಹಕದಲ್ಲಿನ ನೀರು ವೇಗವಾಗಿ ಭಾಷ್ಪೀಕರಣಗೊಳ್ಳತ್ತದೆ.
a] ಸಂಗ್ರಾಹಕ a
b] ಸಂಗ್ರಾಹಕ b
c] ಸಂಗ್ರಾಹಕ c
d] ಸಂಗ್ರಾಹಕ d
6. . ಒಂದು kg ಘನವನ್ನು ಅದರ ದ್ರವನ ಬಿಂದುವಿನಲ್ಲಿ ದ್ರವವಾಗಿ ಪರಿವರ್ತಿಸಲು ಬೇಕಾಗುವ ಉಷ್ಣ ಶಕ್ತಿಯ ಪರಿಮಾಣವನ್ನು ಹೀಗೆ ಕರೆಯುವರು -
a] ಆವೀಕರಣ ಗುಪ್ತೋಷ್ಣ
b] ದ್ರವನ ಗುಪ್ತೋಷ್ಣ
c] ಭಾಷ್ಪೀಕರಣ
d] ಸಾಂದ್ರೀಕರಣ
7. ಅನಿಲಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ -
a] ಅವು ಅತಿ ಹೆಚ್ಚು ಸಂಪೀಡಣೆಗೊಳ್ಳುತ್ತವೆ
b] ಇಲ್ಲಿ ಕಣಗಳ ನಡುವಿನ ಸ್ಥಳಾವಕಾಶ ಅತಿ ಕಡಿಮೆ
c] ಅವು ಹರಿಯುವ ಗುಣ ಹೊಂದಿವೆ
d] ಇವು ನಿರ್ಧಿಷ್ಟ ಗಾತ್ರ & ಆಕಾರ ಹೊಂದಿವೆ.
8. ಸೀಮಾ ನೈಸರ್ಗಿಕ ಅನಿಲ ಸಂಕುಚಿತ ಘಟಕಕ್ಕೆ ಭೇಟಿ ನೀಡಿದಾಗ ತಾಪಮಾನ ಮತ್ತು ಒತ್ತಡದ ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಅನಿಲವನ್ನು ದ್ರವೀಕರಿಸಬಹುದು ಎಂದು ಕಂಡುಕೊಂಡಳು . ಇಲ್ಲಿ ಅನಿಲವನ್ನು ಸಂಕುಚಿತಗೊಳಿಸಲು ಒದಗಿಸಿದ ಸರಿಯಾದ ಪರಿಸ್ಥಿತಿಗಳನ್ನು ಗುರುತಿಸಲು ಅವಳಿಗೆ ಸಹಾಯ ಮಾಡಿ.
a] ಕಡಿಮೆ ತಾಪಮಾನ, ಕಡಿಮೆ ಒತ್ತಡ
b] ಅಧಿಕ ತಾಪಮಾನ, ಕಡಿಮೆ ಒತ್ತಡ
c] ಕಡಿಮೆ ತಾಪಮಾನ, ಅಧಿಕ ಒತ್ತಡ
d] ಅಧಿಕ ತಾಪಮಾನ, ಅಧಿಕ ಒತ್ತಡ
9. ಬೇಸಿಗೆಯ ದಿನಗಳಲ್ಲಿ ಧರಿಸಲು ಈ ಬಟ್ಟೆಗಳು ಸೂಕ್ತವಾಗಿವೆ -
a] ಗಾಢ ಬಣ್ಣದ ನೈಲಾನ್ ಬಟ್ಟೆಗಳು
b] ಬಿಳಿ ಬಣ್ಣದ ಹತ್ತಿ ಬಟ್ಟೆಗಳು
c] ಬಿಳಿ ಬಣ್ಣದ ರೇಷ್ಮೆ ಬಟ್ಟೆಗಳು
d] ಗಾಢ ಬಣ್ಣದ ಉಣ್ಣೆ ಬಟ್ಟೆಗಳು
10. ಬೇಸಿಗೆಯಲ್ಲಿ, ಮಣ್ಣಿನ ಪಾತ್ರೆಯಲ್ಲಿ ಇರಿಸಲಾದ ನೀರು ತಂಪಾಗಿರುತ್ತದೆ ಏಕೆಂದರೆ ಈ ವಿದ್ಯಮಾನ
a] ಭಾಷ್ಪೀಕರಣ
b] ಆವೀಕರಣ
c]ವಿಸರಣೆ
d] ಸಾಂದ್ರೀಕರಣ
Ready to send