Skip to the content
ಜೀವದ ಮೂಲ ಘಟಕ
1. ಈ ಕೆಳಗಿನ ಸಂದರ್ಭದಲ್ಲಿ ಜೀವಕೋಶಗಳು ಉಬ್ಬಿಕೊಳ್ಳುತ್ತವೆ
a] ನೀರಿನ ಅಣುಗಳ ಸಾರತೆಯು ಕೋಶದ ಒಳಗಿನಕ್ಕಿಂತ ಹೊರಗೆ ಹೆಚ್ಚಾದಾಗ
b] ನೀರಿನ ಅಣುಗಳ ಸಾರತೆಯು ಕೋಶದ ಹೊರಗಿನಕ್ಕಿಂತ ಒಳಗೆ ಹೆಚ್ಚಾದಾಗ
c] ನೀರಿನ ಅಣುಗಳ ಸಾರತೆಯು ಕೋಶದ ಒಳಗೆ ಮತ್ತು ಹೊರಗೆ ಸಮನಾದಾಗ
d] ನೀರಿನ ಅಣುಗಳ ಸಾರತೆಯು ಪ್ರಭಾವ ಬೀರುವದಿಲ್ಲ
2. ವರ್ಣತಂತುಗಳು ಇವುಗಳಿಂದ ಮಾಡಲ್ಲಟ್ಟಿರುತ್ತವೆ.
a] ಡಿ.ಎನ್.ಎ
b] ಪ್ರೋಟೀನ್
c] ಡಿ.ಎನ್.ಎ & ಪ್ರೋಟೀನ್
d] ಆರ್.ಎನ್.ಎ
3. ಕೆಳಗಿನ ಕಣದಂಗವು ದೇಹದಲ್ಲಿನ ಹಾನಿಕಾರಕ ವಿಷವಸ್ತುಗಳನ್ನು ನಾಶಪಡಿಸುತ್ತದೆ
a] ಗಾಲ್ಗಿ ಸಂಕೀರ್ಣ
b] ಲೈಸೋಸೋಮ್
c] ನಯ ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್
d] ರಸದಾನಿಗಳು
4. ಪ್ರೋಕ್ಯಾರಿಯೋಟ್ ಜೀವಕೋಶಗಳಲ್ಲಿ ಮಾತ್ರ ಕಂಡುಬರುವ ಕಣದಂಗ
a] ಮೈಟೋಕಾಂಡ್ರಿಯಾ
b] ರೈಬೋಸೋಮ್
c] ಪ್ಲಾಸ್ಟಿಡ್ಸ್
d] ಲೈಸೋಸೋಮ್
5. ಇವುಗಳಲ್ಲಿ ಪೊರೆಯಿಂದ ಆವೃತವಾಗಿರದ ಕಣದಂಗ
a] ರೈಬೋಸೋಮ್
b] ಮೈಟೋಕಾಂಡ್ರಿಯಾ
c] ನ್ಯೂಕ್ಲಿಯಸ್
d] ಕ್ಲೋರೋಪ್ಲಾಸ್ಟ್
6. ನ್ಯೂಕ್ಲಿಯಸ್ ಜೊತೆಗೆ ಡಿ.ಎನ್.ಎ ಅಣು ಹೊಂದಿರುವ ಮತ್ತೊಂದು ಕಣದಂಗ
a] ಗಾಲ್ಗಿ ಸಂಕೀರ್ಣ
b] ಲೈಸೋಸೋಮ್
c] ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್
d] ಮೈಟೋಕಾಂಡ್ರಿಯಾ
7. ಸರಳ ಶರ್ಕರಗಳನ್ನು ಸಂಕೀರ್ಣ ಶರ್ಕರಗಳಾಗಿ ಪರಿವರ್ತಿಸುವ ಕಣದಂಗ
a] ಗಾಲ್ಗಿ ಸಂಕೀರ್ಣ
b] ರೈಬೋಸೋಮ್
c] ಪ್ಲಾಸ್ಟಿಡ್ಸ್
d] ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್
8. ಕೆಳಗಿನ ಯಾವುದನ್ನು ಜೀವಕೋಶದೊಳಗೆ ‘ಚಲಾವಣೆಯಲ್ಲಿರುವ ಶಕ್ತಿಯ ನಾಣ್ಯ’ ಎಂದು ಕರೆಯಲಾಗುತ್ತದೆ.
a] ಪ್ರೋಟೀನ್
b] DNA
c] ATP
d] RNA
9. ಸಸ್ಯ ಜೀವಕೋಶದಲ್ಲಿ , ಜೀವಕೋಶ ಗಾತ್ರದ 50% ಕ್ಕಿಂತ ಹೆಚ್ಚು ಆವರಿಸಿರುವ ಕಣದಂಗ
a] ನ್ಯೂಕ್ಲೀಯಸ್
b] ರಸದಾನಿ
c] ಕ್ಲೋರೋಪ್ಲಾಸ್ಟ್
d] ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್
10. ‘ ಮೆಂಬ್ರೇನ್ ಬಯೋಜೆನೆಸಿಸ್ ‘ ಎಂಬುದು ಈ ಪ್ರಕ್ರಿಯೆಯಾಗಿದೆ -
a] ಜೀವಕೋಶ ವಿಭಜನೆಗೊಳ್ಳುವುದು
b] ಜೀವಕೋಶ ಉಬ್ಬಿಕೊಳ್ಳುವುದು
c] ಕೋಶಪೊರೆಯ ನಿರ್ಮಾಣಗೊಳ್ಳುವುದು
d] ಜೀವಕೋಶ ನಾಶಗೊಳ್ಳುವುದು
Ready to send