Skip to the content
ಜೀವಿಗಳಲ್ಲಿ ವೈವಿಧ್ಯತೆ
1. ವಿಕಾಸದ ದೃಷ್ಟಿಯಲ್ಲಿ ಈ ಕೆಳಗಿನ ಯಾವ ಜೀವಿಗಳು ‘ಪ್ರಾಚೀನಜೀವಿಗಳು’
A] ಹುಲ್ಲು
B] ಶಿಲೀಂದ್ರ
C] ಬೆಕ್ಟೀರಿಯಾ
D] ಅಮೀಬ
2. ಈ ಜೀವಿಗಳು ತಮ್ಮ ಲಕ್ಷಣಗಳಲ್ಲಿ ಹೆಚ್ಚು ಸಾಮ್ಯತೆಯನ್ನು ಹೊಂದಿರುತ್ತವೆ
A] ಒಂದೇ ಪ್ರಭೇದಕ್ಕೆ ಸೇರಿದ ಜೀವಿಗಳು
B] ಒಂದೇ ಜಾತಿಗೆ ಸೇರಿದ ಜೀವಿಗಳು
C] ಒಂದೇ ಕುಟುಂಬಕ್ಕೆ ಸೇರಿದ ಜೀವಿಗಳು
D] ಒಂದೇ ಗಣಕ್ಕೆ ಸೇರಿದ ಜೀವಿಗಳು
3. ಜೀವಿಗಳವರ್ಗೀಕರಣದ ಮಜಲುಗಳಲ್ಲಿ ‘ಕುಟುಂಬ’ದ ಸ್ಥಾನವು ಇವುಗಳ ನಡುವೆ ಇರುತ್ತದೆ
A] ವರ್ಗ ಮತ್ತು ಗಣ
B] ಜಾತಿ ಮತ್ತು ಪ್ರಭೇದ
C] ಗಣ ಮತ್ತು ಜಾತಿ
D] ವಂಶ ಮತ್ತು ವರ್ಗ
4. ಜೀವಿಗಳನ್ನು ಪ್ರೋಕ್ಯಾರಿಯೋಟ್ ಗಳು ಹಾಗೂ ಯೂಕ್ಯಾರಿಯೋಟ್ ಗಳೆಂದು ವರ್ಗೀಕರಿಸಲು ಈ ಲಕ್ಷಣವು ಆಧಾರವಾಗಿದೆ -
A] ಜೀವಕೋಶದ ಗಾತ್ರ
B] ಜೀವಕೋಶದ ಆಕಾರ
C] ನ್ಯೂಕ್ಲೀಯಸ್ ನ ರಚನೆ
D] ಪೋಷಣಾ ವಿಧಾನ
5. ಕೊಳೆಯುತ್ತಿರುವ ಸಾವಯವ ವಸ್ತುಗಳನ್ನು ಆಹಾರವಾಗಿ ಬಳಸಿಕೊಳ್ಳುವ ಜೀವಿಗಳನ್ನು ಈ ಸಾಮ್ರಾಜ್ಯಕ್ಕೆ ಸೇರಿಸಲಾಗಿದೆ -
A] ಮೊನೆರಾ ಸಾಮ್ರಾಜ್ಯ
B] ಪ್ರೊಟಿಸ್ಟಾ ಸಾಮ್ರಾಜ್ಯ
C] ಸಸ್ಯ ಸಾಮ್ರಾಜ್ಯ
D] ಶಿಲೀಂದ್ರಗಳ ಸಾಮ್ರಾಜ್ಯ
6. ಇವುಗಳನ್ನು ಸಸ್ಯ ಸಾಮ್ರಾಜ್ಯದ ‘ಉಭಯವಾಸಿಗಳು’ ಎಂದು ಕರೆಯಲಾಗುತ್ತದೆ -
A] ಥ್ಯಾಲೋಫೈಟಾಗಳು
B] ಹಾವಸೆ ಸಸ್ಯಗಳು
C] ಪುಚ್ಛ ಸಸ್ಯಗಳು
D] ಅನಾವೃತ ಬೀಜ ಸಸ್ಯಗಳು
7. ‘ಫೆನೆರೋಗ್ಯಾಮ್ ಗಳು’ ಎಂದು ಕರೆಯಲ್ಪಡುವ ಸಸ್ಯಗಳು -
A] ನಿರ್ಧಿಷ್ಟ ಭಾಗಗಳನ್ನು ಹೊಂದಿಲ್ಲದ ಸಸ್ಯಗಳು
B] ವಾಹಕನಾಳ ರಹಿತ ಸಸ್ಯಗಳು
C] ಬೀಜಗಳನ್ನು ಉತ್ಪಾದಿಸದ ಸಸ್ಯಗಳು
D] ಬೀಜಗಳನ್ನು ಉತ್ಪಾದಿಸುವ ಸಸ್ಯಗಳು
8. ಪೈನ್ , ಸೈಕಾಸ್ ನಂತಹ ಬಹುವಾರ್ಷಿಕ ,ನಿತ್ಯ ಹರಿದ್ವರ್ಣ ಸಸ್ಯಗಳ ಪ್ರಮುಖ ಲಕ್ಷಣ
A] ನಗ್ನ ಬೀಜಗಳನ್ನು ಉತ್ಪತ್ತಿ ಮಾಡುತ್ತವೆ
B] ವಾಹಕನಾಳ ರಹಿತ ಸಸ್ಯಗಳು
C] ಹೂ ಬಿಡುವ ಸಸ್ಯಗಳು
D] ಆವೃತ ಬೀಜಗಳನ್ನು ಉತ್ಪಾದಿಸುವ ಸಸ್ಯಗಳು
9. ಏಕದಳ ಮತ್ತು ದ್ವಿದಳ ಸಸ್ಯಗಳ ವಿಂಗಡಣೆಗೆ ಆಧಾರವಾಗಿರುವ ರಚನೆಗಳು -
A] ಬೀಜದಳಗಳ ಸಂಖ್ಯೆ
B] ಎಲೆಗಳಲ್ಲಿನ ನಾಳಗಳ ವಿನ್ಯಾಸ
C] ಬೇರಿನ ರಚನೆ
D] ಮೇಲಿನ ಎಲ್ಲವು
10. ಪ್ರಾಣಿಸಾಮ್ರಾಜ್ಯದ ಮೊದಲ ಗುಂಪು - ‘ಪೋರಿಫೆರಾ’ , ಇವುಗಳನ್ನು ಹೀಗೆ ಕರೆಯಲು ಕಾರಣ
A] ದೇಹದ ಮೇಲೆ ಅಸಂಖ್ಯಾತ ರಂಧ್ರಗಳನ್ನು ಹೊಂದಿವೆ
B] ಮಿಥ್ಯ ದೇಹಾಂತರಾವಕಾಶ ಹೊಂದಿವೆ
C] ಇವು ಚಲಿಸಬಲ್ಲ ಪ್ರಾಣಿಗಳಾಗಿವೆ
D] ಇವು ಅಂಗಾಂಶ ಮಟ್ಟದ ವ್ಯವಸ್ಥೆ ಹೊಂದಿವೆ
11. ಆನೆಕಾಲು ರೋಗಕ್ಕೆ ಕಾರಣವಾದ ಹುಳು -
A] ಕಾರಲು ಹುಳು
B] ಫೈಲೇರಿಯಾ ಹುಳು
C] ಲಾಡಿ ಹುಳು
D] ಜಂತುಹುಳು
12. ರೈತನಮಿತ್ರ ಎಂದು ಕರೆಯಲ್ಪಡುವ ಎರೆ ಹುಳಗಳು ಈ ವಂಶಕ್ಕೆ ಸೇರಿದವುಗಳಾಗಿವೆ -
A] ಚಪ್ಪಟೆ ಹುಳಗಳು
B] ದುಂಡು ಹುಳಗಳು
C] ವಲಯವಂತಗಳು
D] ಮೃದ್ವಂಗಿಗಳು
13. ಪ್ರಾಣಿ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಪ್ರಾಣಿವಂಶ -
A] ಸಂದಿಪದಿಗಳು
B] ಮೃದ್ವಂಗಿಗಳು
C] ಕಠಿಣ ಚರ್ಮಿಗಳು
D] ಕುಟುಕು ಕಣವಂತಗಳು
14. ಬೆಲೆ ಬಾಳುವ ಮುತ್ತುಗಳನ್ನು ನೀಡುವ ‘ಪರ್ಲ ಆಯಿಸ್ಟರ್ ‘ ಪ್ರಾಣಿಯು ಈ ವಂಶಕ್ಕೆ ಸೇರಿದೆ
A] ಕಠಿಣ ಚರ್ಮಿಗಳು
B] ಸಂದಿಪದಿಗಳು
C] ವಲಯವಂತಗಳು
D] ಮೃದ್ವಂಗಿಗಳು
15. ರಿಷಿ ತನ್ನ ಮನೆಯ ಗಾರ್ಡನ್ ನಲ್ಲಿಕಂಡು ಬಂದ ಪ್ರಾಣಿಯನ್ನು ಸಂದಿಪದಿ ಎಂದು ತನ್ನ ಸ್ನೇಹಿತನಿಗೆ ಹೇಳುತ್ತಾನೆ . ತನ್ನ ಹೇಳಿಕೆಯನ್ನು ಸಮರ್ಥಿಸಲು ಸ್ನೇಹಿತನಿಗೆ ತಿಳಿಸ ಬೇಕಾದ ಲಕ್ಷಣ-
A] ಅದು ನಯವಾದ ಚರ್ಮವನ್ನು ಹೊಂದಿದೆ
B] ಚರ್ಮದ ಮೇಲೆ ಮುಳ್ಳಿನಂತಹ ರಚನೆಗಳು ಆವರಿಸಿವೆ
C] ಅದು ಕೀಲುಕಾಲುಗಳನ್ನು ಹೊಂದಿದೆ
D] ದೇಹವು ವತೃಲಾಕಾರದ ಖಂಡಗಳಾಗಿ ವಿಂಗಡನೆಯಾಗಿದೆ
16. ಎರಡು ಕೋಣೆಗಳುಳ್ಳ ಹೃದಯವಿರುವ ಕಶೇರುಕ ಪ್ರಾಣಿ ವರ್ಗ -
A] ಮೀನುಗಳು
B] ಉಭಯವಾಸಿಗಳು
C] ಸರಿಸೃಪಗಳು
D] ಪಕ್ಷಿಗಳು
17 . ಭಿನ್ನ ಉಸಿರಾಟದ ಅಂಗಗಳನ್ನು ಹೊಂದಿರುವ ಪ್ರಾಣಿ -
A] ಮೀನು
B] ಕೊಕ್ಕರೆ
C] ಹಾವು
D] ಕಪ್ಪೆ
18. ವಾತವಾರಣಕ್ಕೆ ಅನುಗುಣವಾಗಿ ತನ್ನ ದೇಹದ ತಾಪವನ್ನು ಬದಲಾಯಿಸಿಕೊಳ್ಳದೆ , ಸ್ಥಿರ ದೇಹತಾಪವನ್ನು ಹೊಂದಿರುವ ಪ್ರಾಣಿ -
A] ಹಲ್ಲಿ
B] ಹಾವು
C] ಪಾರಿವಾಳ
D] ಕಪ್ಪೆ
19. ಸ್ತನಿಗಳು ಇತರ ಕಶೇರುಕಗಳಿಗಿಂತ ಭಿನ್ನವಾಗಿರಲು ಕಾರಣವಾದ ಲಕ್ಷಣ
A] ಸ್ತನ್ಯ ಗ್ರಂಥಿಗಳನ್ನು ಹೊಂದಿವೆ
B] ಮರಿ ಹಾಕುವ ಪ್ರಾಣಿಗಳಾಗಿವೆ
C] ಬೆವರು ಗ್ರಂಥಿಗಳನ್ನು ಹೊಂದಿವೆ
D] ಮೇಲಿನ ಎಲ್ಲವೂ ಸರಿ
20. ಜೀವಿಗಳನ್ನು ವೈಜ್ಞಾನಿಕವಾಗಿ ಹೆಸರಿಸುವ ‘ದ್ವಿನಾಮಕರಣ’ಪದ್ಧತಿಯನ್ನು ಬಳಕೆಗೆ ತಂದವರು -
A] ಅರ್ನೆಸ್ಟ್ ಹೆಕಲ್
B] ಕರೋಲಸ್ ಲಿನೇಯಸ್
C] ಕಾರ್ಲ್ ವೂಸ್
D] ರಾಬರ್ಟ್ ವ್ಹಿಟೇಕರ್
Ready to send