Skip to the content
ಚಲನೆ
1. ತ್ರೀಜ್ಯ r ಇರುವ ಒಂದು ವೃತ್ತಾಕಾರ ಪಥದಲ್ಲಿ ಚಲಿಸುತ್ತಿರುವ ಕಾಯವು ಅರ್ಧ ಸುತ್ತು ಕ್ರಮಿಸಿದಾಗ ಅದರ ಸ್ಥಾನಪಲ್ಲಟವು -
A] 0
B] r
C] 2r
D] 2 πr
2. ಕೆಳಗೆ ನೀಡಲಾದ ವೇಗ-ಕಾಲ ನಕ್ಷೆ ಕಾಯದ ಈ ಚಲನೆಯನ್ನು ಪ್ರತಿನಿಧಿಸುತ್ತದೆ
A] ಏಕ ರೂಪ ಚಲನೆ
B] ಏಕ ರೂಪವಲ್ಲದ ಚಲನೆ
C] ನಿಶ್ಚಲ ಸ್ಥಿತಿ
D] ಏಕ ರೂಪ ವೇಗೋತ್ಕರ್ಷ
3. ನೇರ ರಸ್ತೆಯಲ್ಲಿ ಚಲಿಸುತ್ತಿರುವ A , B , C ಮತ್ತು D ಎಂಬ ನಾಲ್ಕು ಕಾರುಗಳ ದೂರ-ಕಾಲ ನಕ್ಷೆಯನ್ನು ನೀಡಲಾಗಿದೆ . ಕಾರುಗಳಚಲನೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ
A] A ಕಾರು D ಕಾರಿಗಿಂತ ವೇಗವಾಗಿ ಚಲಿಸುತ್ತಿದೆ
B] ಕಾರು B ತುಂಬಾ ನಿಧಾನವಾಗಿ ಚಲಿಸುತ್ತಿದೆ
C] D ಕಾರು C ಕಾರಿಗಿಂತ ವೇಗವಾಗಿ ಚಲಿಸುತ್ತಿದೆ
D] C ಕಾರು ತುಂಬಾ ನಿಧಾನವಾಗಿ ಚಲಿಸುತ್ತಿದೆ
4. ಕೆಳಗಿನ ಯಾವ ಸಂದರ್ಭದಲ್ಲಿ ಕಾಯ ಚಲಿಸಿದ ದೂರ ಹಾಗೂ ಅದರ ಸ್ಥಾನಪಲ್ಲಟ ಸಮನಾಗಿರುತ್ತದೆ .
A] ನೇರ ರಸ್ತೆಯಲ್ಲಿ ಚಲಿಸುತ್ತಿರುವ ಕಾರು
B] ಸೂರ್ಯನ ಸುತ್ತ ಭೂಮಿಯ ಚಲನೆ
C] ಗಡಿಯಾರದ ಲೋಲಕದ ಚಲನೆ
D] ವೃತ್ತೀಯ ಪಥದಲ್ಲಿ ಓಡುತ್ತಿರುವ ವ್ಯಕ್ತಿ
5. ಕೆಳಗಿನ ಯಾವ ಹೇಳಿಕೆಯು ಏಕರೂಪ ಚಲನೆಯ ವಿವರಣೆಯಾಗಿದೆ
A] ಸಮಾನ ಕಾಲದಲ್ಲಿ ಅಸಮಾನ ದೂರ ಕ್ರಮಿಸುವುದು
B] ಅಸಮಾನ ಕಾಲದಲ್ಲಿ ಸಮಾನ ದೂರ ಕ್ರಮಿಸುವುದು
C] ಸಮಾನ ಕಾಲದಲ್ಲಿ ಸಮಾನ ದೂರ ಕ್ರಮಿಸುವುದು
D] ಅಸಮಾನ ಕಾಲದಲ್ಲಿ ಅಸಮಾನ ದೂರ ಕ್ರಮಿಸುವುದು
6. ಒಂದು ಏಕಮಾನಕಾಲದಲ್ಲಿ ಕಾಯ ಚಲಿಸಿದ ದೂರ
A] ಜವ
B] ವೇಗ
C] ವೇಗೋತ್ಕರ್ಷ
D] ವೇಗಾಪಕರ್ಷ
7. ಒಂದು ಬದಿ 10 ಮೀಟರ್ ಇರುವ ಚೌಕಾಕಾರದ ಹೊಲವನ್ನು ಒಬ್ಬ ರೈತನು ಅರ್ಧ ಸುತ್ತು ಹಾಕಿದಾಗ ಅವನ ಸ್ಥಾನಪಲ್ಲಟ
A] 10 ಮೀಟರ್
B] 20 ಮೀಟರ್
C] 10√2 ಮೀಟರ್
D] 40 ಮೀಟರ್
8. ಕೆಳಗಿನ ಯಾವ ಸಂದರ್ಭದಲ್ಲಿ ವೇಗೋತ್ಕರ್ಷವು ಸೊನ್ನೆಯಾಗಿರುತ್ತದೆ .
A] ಕಾಯವು ಸ್ವತಂತ್ರವಾಗಿ ಬೀಳುತ್ತಿರುವಾಗ
B] ಕಾಯವು ವೃತ್ತೀಯ ಪಥದಲ್ಲಿ ಚಲಿಸುತ್ತಿರುವಾಗ
C] ಕಾಯವು ಏಕರೂಪ ವೇಗದಲ್ಲಿ ಚಲಿಸುತ್ತಿರುವಾಗ
D] ಕಾಯವು ಆಂದೋಲನ ಚಲನೆಯಲ್ಲಿರುವಾಗ
9. ಕಾಯವೊಂದರ ಜವ 18 km/hr ಆಗಿದೆ , m/s ಗಳಲ್ಲಿ ಅದರ ಜವ =
A] 5 m/s
B] 10 m/s
C] 16.8 m/s
D] 1.68 m/s
10. ವೃತ್ತೀಯ ಪಥದಲ್ಲಿ ಚಲಿಸುತ್ತಿರುವ ಕಾಯವು
A] ಸ್ಥಿರವೇಗದೊಂದಿಗೆ ಚಲಿಸುತ್ತಿರುತ್ತದೆ
B] ಸೊನ್ನೆ ವೇಗೋತ್ಕರ್ಷ ಹೊಂದಿರುತ್ತದೆ
C] ನಿರತಂತರವಾಗಿ ವೇಗೋತ್ಕರ್ಷಿತಗೊಳ್ಳುತ್ತದೆ
D] ಸೊನ್ನೆ ವೇಗ ಹೊಂದಿರುತ್ತದೆ
Ready to send