Skip to the content
ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ
1. ಖಾರಿಫ್ ಬೆಳೆಗಳನ್ನು ಈ ಅವಧಿಯಲ್ಲಿ ಬೆಳೆಯುತ್ತಾರೆ
A] ಜನೇವರಿ ಯಿಂದ ಎಪ್ರಿಲ್ ತಿಂಗಳು
B] ಮಾರ್ಚ ನಿಂದ ಜೂನ್ ತಿಂಗಳು
C] ಜೂನ್ ನಿಂದ ಸೆಪ್ಟೆಂಬರ್ ತಿಂಗಳು
D] ಅಕ್ಟೋಬರ್ ನಿಂದ ಮಾರ್ಚ ತಿಂಗಳು
2. ಬೆಳೆಯ ಉತ್ಪಾದನೆಯಲ್ಲಿ ಕೈಗೊಳ್ಳುವ ಮೊದಲ ಚಟುವಟಿಕೆ
A] ಬಿತ್ತನೆ
B] ಮಣ್ಣನ್ನು ಹದಗೊಳಿಸುವುದು
C] ಕೊಯ್ಲು
D] ಕಳೆಯ ನಿರ್ಮೂಲನೆ
3. ಬಿತ್ತನೆಗಾಗಿ ಬಳಸುವ ಕೃಷಿ ಉಪಕರಣ
A] ಕೂರಿಗೆ
B] ರೆಂಟೆ
C] ನೇಗಿಲು
D] ಎಡೆ ಕುಂಟೆ
4. ಸಾವಯವ ಗೊಬ್ಬರಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ
A] ಇವು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ
B] ನಿರ್ಧಿಷ್ಟ ಪೋಷಕಾಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ
C] ಮಣ್ಣಿನ ಫಲವತ್ತತೆಯನ್ನು ಉತ್ತಮ ಪಡಿಸುತ್ತವೆ
D] ಮಣ್ಣಿನಲ್ಲಿನ ಸೂಕ್ಷ್ಮಜೀವಿಗಳನ್ನು ಪೋಷಿಸುತ್ತವೆ
5. ನೀರನ್ನು ನೇರವಾಗಿ ಸಸ್ಯಗಳ ಬೇರುಗಳಿಗೆ ತಲುಪಿಸಲು ಬಳಸುವ ನೀರಾವರಿ ವಿಧಾನ
A] ಹನಿ ನಿರಾವರಿ
B] ತುಂತುರು ನೀರಾವರಿ
C] ಏತ ನೀರಾವರಿ
D] ಅಗಳು (ರಾಟೆ)ವಿಧಾನ
6. ಉತ್ತಮ ಹಾಗೂ ಆರೋಗ್ಯಕರ ಬೀಜಗಳನ್ನು ಪರೀಕ್ಷಿಸಲು ಬೀಜಗಳನ್ನು
A] ಎಣ್ಣೆಯಲ್ಲಿ ತೇಲಿಬಿಡುವರು
B] ಉಪ್ಪಿನ ದ್ರಾವಣದಲ್ಲಿ ತೇಲಿ ಬಿಡುವರು
C] ನೀರಿನಲ್ಲಿ ತೇಲಿಬಿಡುವರು
D] ಗಾಳಿಯಲ್ಲಿ ತೂರುವರು
7. ಕಳೆ ನಿಯಂತ್ರಣ ವಿಧಾನಗಳಲ್ಲಿ ಕೆಳಗಿನ ಯಾವ ವಿಧಾನವು ಪರಿಸರಕ್ಕೆ ಹಾನಿ ಉಂಟುಮಾಡುತ್ತದೆ
A] ಕೈಗಳಿಂದ ಕೀಳುವುದು
B] ಸಾಧನಗಳನ್ನು ಬಳಸಿ ತಗೆದು ಹಾಕುವುದು
C] ಕಳೆನಾಶಕಗಳನ್ನು ಬಳಸುವುದು
D] ಸರದಿ ಬೇಸಾಯ ವಿಧಾನ ಅನುಸರಿಸುವುದು
8. ಕೊಯ್ಲಿನ ನಂತರ ಹುಲ್ಲುಗಳಿಂದ ಕಾಳುಗಳನ್ನು ಬೇರ್ಪಡಿಸುವ ವಿಧಾನ
A] ಬಿತ್ತನೆ
B] ಒಕ್ಕಣೆ
C] ಸಂಗ್ರಹಣೆ
D] ಉಳುಮೆ
9. ಕೃಷಿ ಕಾರ್ಯಗಳಿಗೆ ಬಳಸುವ ‘ಕಂಬೈನ್’ ಎಂಬ ಯಂತ್ರವು
A] ಬಿತ್ತನೆಯ ಸಾಧನ
B] ಕಳೆ ನಿರ್ಮೂಲನ ಮಾಡುವ ಸಾಧನ
C] ಕೊಯ್ಲಿನ ಸಾಧನ
D] ಕೊಯ್ಲು ಮತ್ತು ಒಕ್ಕುವ ಯಂತ್ರ
10. ಬೆಳೆದ ಧಾನ್ಯಗಳನ್ನು ದೀರ್ಘಕಾಲದವರೆಗೆ ಕೆಡದಂತೆ ಇಡಲು ಧಾನ್ಯಗಳನ್ನು ಇವುಗಳಿಂದ ರಕ್ಷಿಸಬೇಕು -
A] ತೇವಾಂಶದಿಂದ
B] ಕೀಟಗಳಿಂದ
C] ಶಿಲೀಂದ್ರಗಳಿಂದ
D] ಮೇಲಿನ ಎಲ್ಲವುಗಳಿಂದ
Ready to send