Skip to the content
ಸಂಶ್ಲೇಷಿತ ಎಳೆಗಳು ಮತ್ತು ಪ್ಲಾಸ್ಟಿಕ್ ಗಳು
1. ಕೆಳಗಿನವುಗಳಲ್ಲಿ ಯಾವುದು ಸಂಶ್ಲೇಷಿತ ಎಳೆ
A] ಹತ್ತಿ
B] ಸೆಣಬು
C] ನೈಲಾನ್
D] ಉಣ್ಣೆ
2. ರೆಯಾನ್ ಎಳೆಗಳನ್ನು ಪಡೆಯಲು ಬಳಸುವ ಕಚ್ಚಾ ವಸ್ತು
A] ಪ್ರಾಣಿ ಕೊಬ್ಬು
B] ಮರದ ತಿರುಳು
C] ಮೇಣ
D] ಅರಗು
3. ಕೊಟ್ಟಿರುವ ಎಳೆಗಳು ಸಂಶ್ಲೇಷಿತವೋ ಅಥವಾ ನೈರ್ಗಿಕವೋ ಎಂಬುದನ್ನು ಪರೀಕ್ಷಿಸುವ ಬಗೆ -
A] ಬಿಸಿ ಮಾಡಿದಾಗ ಸಂಶ್ಲೇಷಿತ ಎಳೆಗಳು ದ್ರವಿಸುತ್ತವೆ
B] ಬಿಸಿ ಮಾಡಿದಾಗ ನೈರ್ಗಿಕ ಎಳೆಗಳು ದ್ರವಿಸುತ್ತವೆ
C] ಬಿಸಿ ಮಾಡಿದಾಗ ಸಂಶ್ಲೇಷಿತ ಎಳೆಗಳು ದ್ರವಿಸುವುದಿಲ್ಲ
D] ಬಿಸಿ ಮಾಡುವಿಕೆಯಿಂದ ಪರೀಕ್ಷಿಸಲು ಸಾಧ್ಯವಿಲ್ಲ
4. ಕೆಳಗಿನ ಯಾವ ಸಂಶ್ಲೇಷಿತ ಎಳೆಗಳನ್ನು ‘ಕೃತಕ ರೇಷ್ಮೆ’ ಎಂದೂ ಸಹ ಕರೆಯುವರು -
A] ನೈಲಾನ್
B] ಪೆಟ್
C] ಪಾಲಿಎಸ್ಟರ್
D] ರೇಯಾನ್
5. ಕೆಳಗಿನ ಯಾವ ಸಂಶ್ಲೇಷಿತ ಎಳೆಗಳು ಅತಿ ಹೆಚ್ಚು ಬಲಯುತ ಹಾಗೂ ಸ್ಥಿತಿಸ್ಥಾಪಕ ಗುಣ ಹೊಂದಿವೆ
A] ಪಾಲಿಎಸ್ಟರ್
B] ನೈಲಾನ್
C] ರೇಯಾನ್
D] ಅಕ್ರಿಲಿಕ್
6. ಬೇಕಲೈಟ್ ಎಂಬುದು ಇವುಗಳಿಗೆ ಉದಾಹರಣೆಯಾಗಿದೆ -
A] ಥರ್ಮೋಪ್ಲಾಸ್ಟಿಕ್
B] ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್
C] ಪಾಲಿಎಸ್ಟರ್
D] ಪೆಟ್
7. ಅಗ್ನಿಶಾಮಕ ದಳದ ಸಿಬ್ಬಂದಿ ಧರಿಸುವ ಬೆಂಕಿ ನಿರೋಧಕ ಜಾಕೆಟ್ ಗಳ ತಯಾರಿಕೆಯಲ್ಲಿ ಬಳಕೆಯಾಗುವ ಪ್ಲಾಸ್ಟಿಕ್ ನ ವಿಧ
A] PVC
B] ಪಾಲಿಥೀನ್
C] ನೈಲಾನ್
D] ಮೆಲಮೈನ್
8. ಜಾಮ್ ಮತ್ತು ಉಪ್ಪಿನ ಕಾಯಿಗಳಂತಹ ಪದಾರ್ಥಗಳನ್ನು ಸಂಗ್ರಹಿಸಿಡಲು ಪ್ಲಾಸ್ಟಿಕ್ ಜಾರ್ ಗಳನ್ನು ಬಳಸಲಾಗುತ್ತಿದೆ , ಕಾರಣ
A] ಪ್ಲಾಸ್ಟಿಕ್ ಕ್ರಿಯಾಪಟುವಲ್ಲ
B] ಪ್ಲಾಸ್ಟಿಕ್ ಗಳು ಹಗುರ
C] ಪ್ಲಾಸ್ಟಿಕ್ ಗಳು ದುರ್ಬಲವಾಹಕಗಳು
D] ಪ್ಲಾಸ್ಟಿಕ್ ಗಳ ಬೆಲೆ ಕಡಿಮೆ
9. ಕೆಳಗಿನ ಯಾವ ವಸ್ತು ಜೈವಿಕ ವಿಘಟನೆ ಹೊಂದುವುದಿಲ್ಲ
A] ಹತ್ತಿ
B] ಸೆಣಬು
C] ಪ್ಲಾಸ್ಟಿಕ್
D] ಉಣ್ಣೆ
10. ಕೆಳಗಿನ ಯಾವ ಪ್ಲಾಸ್ಟಿಕ್ ವಸ್ತುಗಳನ್ನು ಮರುಚಕ್ರೀಕರಣಕ್ಕೆ ಒಳಪಡಿಸಲು ಸಾಧ್ಯವಿಲ್ಲ
A] ಪ್ಲಾಸ್ಟಿಕ್ ಆಟಿಕೆಗಳು
B] ಕುಕ್ಕರ್ ಹಿಡಿಕೆ
C] ಪ್ಲಾಸ್ಟಿಕ್ ಚೀಲಗಳು
D] ಪ್ಲಾಸ್ಟಿಕ್ ಕುರ್ಚಿಗಳು
Ready to send