Skip to the content
ಕಲ್ಲಿದ್ದಲು ಮತ್ತು ಪೆಟ್ರೋಲಿಯಂ
1. ಈ ಕೆಳಗಿನವುಗಳಲ್ಲಿ ಕೇವಲ ಮುಗಿದು ಹೋಗುವ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವ ಗುಂಪನ್ನು ಗುರುತಿಸಿ
A] ಅರಣ್ಯಗಳು , ಖನಿಜಗಳು , ಗಾಳಿ
B] ಗಾಳಿ , ನೀರು , ಸೂರ್ಯನ ಬೆಳಕು
C] ಖನಿಜಗಳು , ಕಲ್ಲಿದ್ದಲು , ಪೆಟ್ರೋಲಿಯಂ
D] ಸೂರ್ಯನ ಬೆಳಕು , ಅರಣ್ಯಗಳು , ನೀರು
2. ಸತ್ತ ಸಸ್ಯವರ್ಗ ಕಾರ್ಬನೀಕರಣ ಕ್ರಿಯೆಯಿಂದ ನಿಧಾನವಾಗಿ ಪರಿವರ್ತನೆಗೊಂಡು ತಯಾರಾದ ವಸ್ತು
A] ಕಲ್ಲಿದ್ದಲು
B] ಕೋಕ್
C] ಕಲ್ಲಿದ್ದಿಲಿನ ಡಾಂಬರ
D] ಕಲ್ಲಿದ್ದಿಲಿನ ಅನಿಲ
3. ಈ ಕೆಳಗಿನ ಯಾವ ವಸ್ತುವಿನಿಂದ ಅತಿ ಹೆಚ್ಚು ಉತ್ಪನ್ನಗಳನ್ನು ಪಡೆಯಲಾಗುತ್ತದೆ
A] ಬಿಟುಮಿನ
B] ಕೋಕ್
C] ಕಲ್ಲಿದ್ದಿಲಿನ ಡಾಂಬರ
D] ಕಲ್ಲಿದ್ದಿಲಿನ ಅನಿಲ
4. ಈ ಕೆಳಗಿನ ಯಾವ ವಸ್ತುವನ್ನು ಇಂಧನವಾಗಿ ಬಳಸುವುದಿಲ್ಲ
A] ಕಲ್ಲಿದ್ದಲು
B] ಕೋಕ್
C] ಕಲ್ಲಿದ್ದಿಲಿನ ಡಾಂಬರ
D] ಕಲ್ಲಿದ್ದಿಲಿನ ಅನಿಲ
5. ಕಲ್ಲಿದ್ದಿಲಿನ ಡಾಂಬರನಿಂದ ತಯಾರಿಸುವ ನ್ಯಾಫ್ತಲಿನ ಗುಳಿಗೆಗಳ ಉಪಯೋಗ
A] ಸೋಂಕು ನಿವಾರಕವಾಗಿ ಬಳಸುತ್ತಾರೆ
B] ಕೀಟ ವಿಕರ್ಷಕವಾಗಿ ಬಳಸುತ್ತಾರೆ
C] ಬಣ್ಣಗಳತಯಾರಿಕೆಯಲ್ಲಿ ಬಳಸುತ್ತಾರೆ
D] ಸ್ಫೋಟಕ ವಸ್ತುವಾಗಿ ಬಳಸುತ್ತಾರೆ
6. ಕೆಳಗಿನಯಾವುದು ಪೆಟ್ರೋಲಿಯಂ ನ ಘಟಕವಲ್ಲ
A] ಪೆಟ್ರೋಲ್
B] ಸೀಮೆ ಎಣ್ಣೆ
C] ಕೋಕ್
D] ಪ್ಯಾರಾಫಿನ್
7. ಮುಲಾಮುಗಳು , ಮೇಣದ ಬತ್ತಿಗಳು , ವ್ಯಾಸಲೀನ್ ಗಳ ತಯಾರಿಕೆಯಲ್ಲಿ ಬಳಸುವ ಪೆಟ್ರೋಲಿಯಂ ನ ಘಟಕ
A] ಬಿಟುಮಿನ
B] ಪ್ಯಾರಾಫಿನ್
C] ಅಪಘರ್ಷಕ ತೈಲ
D] LPG
8. ಸಾಚಿ ಪರಿಸರದ ಬಗ್ಗೆ ಕಾಳಜಿ ಉಳ್ಳವಳಾಗಿದ್ದಾಳೆ . ಅವಳು ತನ್ನ ವಾಹನಕ್ಕೆ ಆಯ್ಕೆ ಮಾಡಿಕೊಳ್ಳುವ ಇಂಧನ
A] ಪೆಟ್ರೋಲ್
B] ಡೀಸಲ್
C] LPG
D] CNG
9. ಲೋಹಗಳ ಉದ್ಧರಣೆಯಲ್ಲಿ ಬಳಸುವ ಕಾರ್ಬನ್ನಿನ ಬಹುತೇಕ ಶುದ್ಧರೂಪದ ವಸ್ತು
A] ಕಲ್ಲಿದ್ದಲು
B] ಕೋಕ್
C] ಬಿಟುಮಿನ
D] ಕಲ್ಲಿದ್ದಿಲ ಅನಿಲ
10. ಭಾರತದ ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆಯ ಸಲಹೆಯಂತೆ ಈ ಕೆಳಗಿನ ಯಾವುದು ಇಂಧನ ಉಳಿತಾಯದ ಕ್ರಮವಾಗಿದೆ
A] ವಾಹನಗಳನ್ನು ಸ್ಥಿರ ಮತ್ತು ಮಿತವಾದ ವೇಗದಲ್ಲಿ ಚಲಾಯಿಸುವುದು
B] ಟ್ರಾಫಿಕ್ ಸಿಗ್ನಲ್ ಅಥವಾ ಕಾಯುವ ಸಂದರ್ಭದಲ್ಲಿ ಇಂಜಿನ್ ಬಂದ ಮಾಡುವುದು
C] ಚಕ್ರಗಳಲ್ಲಿನ ಗಾಳಿಯ ಒತ್ತಡ ಸರಿಯಾಗಿರುವುದನ್ನು ಖಚಿತ ಪಡಿಸುವುದು
D] ಮೇಲಿನ ಎಲ್ಲವು ಸರಿ
Ready to send