Skip to the content
ಘರ್ಷಣೆ
1. ಹುಡುಗನೊಬ್ಬ ಭಾರವಾದ ಪೆಟ್ಟಿಗೆಯನ್ನು ತಳ್ಳುತ್ತಿದ್ದಾನೆ , ಇಲ್ಲಿ ಉಂಟಾಗುವ ಘರ್ಷಣಾ ಬಲದ ದಿಕ್ಕು
A] ಬಲ ಪ್ರಯೋಗಿಸಿದ ದಿಕ್ಕಿನಲ್ಲಿರುತ್ತದೆ
B] ಬಲದ ದಿಕ್ಕಿಗೆ ವಿರುದ್ಧವಾಗಿರುತ್ತದೆ
C] ಮೇಲ್ಮುಖವಾಗಿರುತ್ತದೆ
D] ಕೆಳಮುಖವಾಗಿರುತ್ತದೆ
2. ಈ ಕೆಳಗಿನ ಯಾವ ಸಂದರ್ಭದಲ್ಲಿ ಘರ್ಷಣಾ ಬಲವು ಗರಿಷ್ಟವಾಗಿರುತ್ತದೆ
A] ಇಳಿಜಾರಿನಲ್ಲಿ ಚಲಿಸುವಾಗ
B] ನುಣುಪಾದ ಮೇಲ್ಮೈ ಮೇಲೆ ಚಲಿಸುವಾಗ
C] ಒರಟಾದ ಮೇಲ್ಮೈ ಮೇಲೆ ಚಲಿಸುತ್ತಿರುವಾಗ
D] ಉರುಳುತ್ತಿರುವಾಗ
3. ಚಾಕುವನ್ನು ಹರಿತಗೊಳಿಸಲು ಈ ಕೆಳಗಿನ ಯಾವ ವಸ್ತುವಿನೊಂದಿಗೆ ಉಜ್ಜಬೇಕು
A] ಕಲ್ಲು
B] ಪ್ಲಾಸ್ಟಿಕ್
C] ಗಾಜು
D] ಮರದ ತುಂಡು
4. ಕೇರಂ ಆಡುವಾಗ ಬೋರ್ಡ ಮೇಲೆ ಟಾಲ್ಕಮ್ ಪೌಡರ ಸಿಂಪಡಿಸಲಾಗುತ್ತದೆ , ಇದು ಘರ್ಷಣಾಬಲವನ್ನು
A] ಹೆಚ್ಚಿಸುತ್ತದೆ
B] ಕಡಿಮೆ ಮಾಡುತ್ತದೆ.
C] ಘರ್ಷಣಾ ಬಲ ಇಲ್ಲದಂತೆ ಮಾಡುತ್ತದೆ
D] ಘರ್ಷಣಾ ಬಲದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ
5. ಕೀಲಿ ಕೊಟ್ಟ ಆಟಿಕೆಯ ಗೊಂಬೆಯು ಈ ಕೆಳಗಿನ ಯಾವ ಮೇಲ್ಮೈ ಮೇಲೆ ಬಹುದೂರದವರೆಗೆ ಚಲಿಸುತ್ತದೆ
A] ಮಣ್ಣಿನ ಮೇಲಮೈ
B] ಸಿಮೆಂಟ ಮೇಲಮೈ
C] ಒರಟಾದ ಕಲ್ಲಿನ ಮೇಲ್ಮೈ
D] ಗಾಜಿನ ಮೇಲ್ಮೈ
6. ಕೆಳಗಿನ ಯಾವ ಸಂದರ್ಭದಲ್ಲಿ ಘರ್ಷಣೆ ಯು ಒಂದು ಪ್ರಯೋಜನಕಾರಿ ಎಂದು ಹೇಳಬಹುದು
A] ಪಾದರಕ್ಷೆಗಳ ತಳ ಸವೆಯುವುದು
B] ಮೇಟ್ಟಿಲುಗಳು ಸವೆದಿರುವುದು
C] ಪೆನ್ಸಿಲ್ ನಿಂದ ಕಾಗದದ ಮೇಲೆ ಬರೆಯುವುದು
D] ಒದ್ದೆ ನೆಲದ ಮೇಲೆ ನಡೆಯುವುದು
6. ಕೆಳಗಿನ ಯಾವ ಸಂದರ್ಭದಲ್ಲಿ ಘರ್ಷಣೆ ಯು ಒಂದು ಕೆಡಕು ಎಂದು ಹೇಳಬಹುದು
A] ಬ್ರೆಕ್ ಹಾಕಿದ ತಕ್ಷಣ ವಾಹನ ನಿಲ್ಲುವುದು
B] ಬೆಂಕಿ ಕಡ್ಡಿ ಗೀರುವುದು
C] ಬಾಲ್ ಬೇರಿಂಗ ಸವೆದು ಹೋಗುವುದು
D] ಗೋಡೆಗೆ ಮೊಳೆ ಹೊಡೆಯುವುದು
8. ಕೆಳಗಿನ ಘರ್ಷಣಾ ಬಲಗಳ ಸರಿಯಾದ ಏರಿಕೆ ಕ್ರಮ
A] ಸ್ಥಾಯಿ ಘರ್ಷಣೆ - ಜಾರು ಘರ್ಷಣೆ - ಉರುಳು ಘರ್ಷಣೆ
B] ಉರುಳು ಘರ್ಷಣೆ - ಜಾರು ಘರ್ಷಣೆ - ಸ್ಥಾಯಿ ಘರ್ಷಣೆ
C] ಸ್ಥಾಯಿ ಘರ್ಷಣೆ - ಉರುಳು ಘರ್ಷಣೆ - ಜಾರು ಘರ್ಷಣೆ
D] ಉರುಳು ಘರ್ಷಣೆ - ಸ್ಥಾಯಿ ಘರ್ಷಣೆ - ಜಾರು ಘರ್ಷಣೆ
9. ಈ ಕೆಳಗಿನವುಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ
A] ಘರ್ಷಣಾಬಲವು ಕಾಯದ ಚಲನೆಯ ದಿಕ್ಕಿಗೆ ವಿರುದ್ದವಾಗಿರುತ್ತದೆ
B] ಘರ್ಷಣಾಬಲವು ಕಾಯದ ಚಲನೆಯ ವೇಗವನ್ನು ಕಡಿಮೆ ಮಾಡುತ್ತದೆ
C] ಘರ್ಷಣಾಬಲವು ಕಾಯದ ಚಲನೆಯ ವೇಗವನ್ನು ಹೆಚ್ಚಿಸುತ್ತದೆ
D ] ಘರ್ಷಣಾಬಲವು ಶಾಖವನ್ನು ಉತ್ಪತ್ತಿ ಮಾಡುತ್ತದೆ
10. ತರಲಗಳಲ್ಲಿ ಚಲಿಸಲು ಸೂಕ್ತ ವಿನ್ಯಾಸ ಹೊಂದಿರುವ ವಾಹನಗಳು
A] ಸೈಕಲ್ , ಬೈಕ್
B] ಕಾರು, ಬಸ್
C] ಹಡಗು , ವಿಮಾನ
D] ಲಾರಿ , ರೈಲು
Ready to send