Skip to the content
ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ
1. ಮಾನವನಲ್ಲಿ ಉತ್ಪತ್ತಿಯಾಗುವ ಗಂಡು ಲಿಂಗಾಣು
A] ಅಂಡಾಣು
B] ಯುಗ್ಮ
C] ವೀರ್ಯಾಣು
D] ಪಿಂಡ
2. ಕೆಳಗಿನ ಯಾವುದು ಹೆಣ್ಣು ಸಂತಾನೋತ್ಪತ್ತಿಯ ಭಾಗವಲ್ಲ -
A] ಅಂಡಾಶಯಗಳು
B] ವೃಷಣಗಳು
C] ಅಂಡನಾಳ
D] ಗರ್ಭಾಶಯ
3. ಕಪ್ಪೆಗಳಲ್ಲಿ ಗಂಡು ಮತ್ತು ಹೆಣ್ಣು ಲಿಂಗಾಣುಗಳು ಸಂಯೋಗಗೊಳ್ಳುವುದು
A] ಹೆಣ್ಣಿನ ದೇಹದ ಹೊರಗೆ
B] ಹೆಣ್ಣಿನ ದೇಹದ ಒಳಗೆ
C] ಗಂಡಿನ ದೇಹದ ಒಳಗೆ
D] ಹೆಣ್ಣು ಅಥವಾ ಗಂಡಿನ ದೇಹದ ಒಳಗೆ
4. ರೇಷ್ಮೆ ಹುಳಗಳು ಪ್ರೌಢಾವಸ್ಥೆಗೆ ತಲುಪಿ ಚಿಟ್ಟೆಗಳಾಗಿ ಬದಲಾಗುವ ಕ್ರಿಯೆ
A] ನಿಶೇಚನ
B] ಮೊಗ್ಗುವಿಕೆ
C] ನೆಲೆಗೊಳ್ಳುವಿಕೆ
D] ರೂಪಪರಿವರ್ತನೆ
5. ಈ ಕೆಳಗಿನ ಯಾವ ಪ್ರಾಣಿಗಳ ಮೊಟ್ಟೆಗಳು ಕವಚವನ್ನು ಹೊಂದಿರುವುದಿಲ್ಲ
A] ಕೋಳಿ & ನವಿಲು
B] ಕಪ್ಪೆ & ಮೀನು
C] ಹಾವು & ಹಲ್ಲಿ
D] ಆಮೆ & ಮೊಸಳೆ
6. ಮಾನವನಲ್ಲಿ ಫಲಿತ ಅಂಡವು ಭ್ರೂಣವಾಗಿ ನೆಲೆಗೊಳ್ಳುವ ಭಾಗ
A] ಅಂಡಾಶಯ
B] ಗರ್ಭಾಶಯ
C] ಅಂಡನಾಳ
D] ದೇಹದ ಹೊರಗೆ
7. ಈ ಕೆಳಗಿನವುಗಳಲ್ಲಿ ಜರಾಯುಜ ಪ್ರಾಣಿಗಳು
A] ಕಪ್ಪೆ , ಹಾವು , ಹಲ್ಲಿ
B] ಮೀನು , ಮೊಸಳೆ , ಆಮೆ
C] ಬೆಕ್ಕು , ನಾಯಿ , ಹಸು
D] ಕೀಟಗಳು , ಮೀನು , ಕಪ್ಪೆ
8. ಕೀಟಗಳಲ್ಲಿ ಕಂಡು ಬರುವ ರೂಪಪರಿವರ್ತನೆಯ ಹಂತಗಳ ಸರಿಯಾದ ಕ್ರಮ
A] ಮೊಟ್ಟೆ → ಪ್ಯೂಪ → ಲಾರ್ವಾ → ಪ್ರೌಢ ಕೀಟ
B] ಮೊಟ್ಟೆ → ಲಾರ್ವಾ → ಪ್ಯೂಪ → ಪ್ರೌಢ ಕೀಟ
C] ಪ್ಯೂಪ → ಮೊಟ್ಟೆ → ಲಾರ್ವಾ → ಪ್ರೌಢ ಕೀಟ
D] ಲಾರ್ವಾ → ಮೊಟ್ಟೆ → ಪ್ಯೂಪ → ಪ್ರೌಢ ಕೀಟ
9. ಮೊಗ್ಗುವಿಕೆ ವಿಧಾನದಿಂದ ಸಂತಾನೋತ್ಪತ್ತಿ ನಡೆಸುವ ಜೀವಿಗಳು
A] ಅಮೀಬ
B] ಹೈಡ್ರಾ
C] ಯೀಸ್ಟ್
D] ಹೈಡ್ರಾ & ಯೀಸ್ಟ್
10. ಕಪ್ಪೆಗಳ ಸಂತಾನೋತ್ಪತ್ತಿ ಕ್ರಮಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ
A] ಆಂತರಿಕ ನಿಶೇಚನ ಕೈಗೊಳ್ಳುವ ಅಂಡಜಗಳು
B] ಬಾಹ್ಯ ನಿಶೇಚನ ಕೈಗೊಳ್ಳುವ ಅಂಡಜಗಳು
C] ಆಂತರಿಕ ನಿಶೇಚನ ಕೈಗೊಳ್ಳುವ ಜರಾಯುಜಗಳು
D] ಬಾಹ್ಯ ನಿಶೇಚನ ಕೈಗೊಳ್ಳುವ ಜರಾಯುಜಗಳು
Ready to send