Skip to the content
ಹದಿ ಹರೆಯಕ್ಕೆ ಪ್ರವೇಶ
1. ಯಾವ ವಯಸ್ಸಿನ ಆಸುಪಾಸಿನಲ್ಲಿ ತಾರುಣ್ಯಾವಸ್ಥೆ ಪ್ರಾರಂಭವಾಗುತ್ತದೆ
A] 5 ನೇ ವರ್ಷ
B] 11 ನೇ ವರ್ಷ
C] 18 ನೇ ವರ್ಷ
D] 21 ನೇ ವರ್ಷ
2. ಹುಡುಗ ಹಾಗೂ ಹುಡುಗಿಯರು ತಾರುಣ್ಯಾವಸ್ಥೆಯನ್ನು ತಲುಪಿದಾಗ ಈ ಕೆಳಗಿನ ಯಾವುದರಲ್ಲಿ ಬದಲಾವಣೆ ಕಂಡುಬರುತ್ತದೆ
A] ದೈಹಿಕ
B] ಭೌದ್ಧಿಕ
C] ಭಾವನಾತ್ಮಕ
D] ಮೇಲಿನ ಎಲ್ಲವುಗಳಲ್ಲಿ
3. ಹುಡುಗರ ದೇಹದಲ್ಲಿನ ಈ ಕೆಳಗಿನ ಯಾವ ಬದಲಾವಣೆಯು ತಾರುಣ್ಯಾವಸ್ಥೆಯ ಸಂಕೇತವಲ್ಲ
A] ಎತ್ತರದಲ್ಲಿ ಹೆಚ್ಚಳ
B] ತೂಕದಲ್ಲಿ ಹೆಚ್ಚಳ
C] ಆಕಾರದಲ್ಲಿ ಬದಲಾವಣೆ
D] ಧ್ವನಿಯಲ್ಲಿ ಬದಲಾವಣೆ
4. ಹುಡುಗಿಯರಲ್ಲಿ ತಾರುಣ್ಯಾವಸ್ಥೆ ಪ್ರಾರಂಭವಾಗುವುದನ್ನು ಸೂಚಿಸುವ ಅಂಶ
A] ಸ್ತನಗಳ ಬೆಳವಣಿಗೆ
B] ಮೊಡವೆಗಳಾಗುವುದು
C] ಋತುಚಕ್ರದ ಪ್ರಾರಂಭ
D] ಎತ್ತರದಲ್ಲಿನ ಹೆಚ್ಚಳ
5. ಹುಡುಗರಲ್ಲಿ ದ್ವಿತೀಯಕ ಲೈಂಗಿಕ ಲಕ್ಷಣಗಳು ಕಾಣಿಸಿಕೊಳ್ಳಲು ಕಾರಣವಾದ ಹಾರ್ಮೋನ್
A] ಟೆಸ್ಟೋಸ್ಟಿರಾನ್
B] ಈಸ್ಟ್ರೋಜನ್
C] ಥೈರಾಕ್ಸಿನ್
D] ಇನ್ಸೂಲಿನ್
6. ಸ್ತ್ರೀಯರಲ್ಲಿ ಋತುಬಂಧ ಈ ವಯಸ್ಸಿನಲ್ಲಿ ಉಂಟಾಗುತ್ತದೆ
A] 10 ರಿಂದ 15
B] 25 ರಿಂದ 30
C] 45 ರಿಂದ 50
D] ಜೀವಿತಾವಧಿಯ ಕೊನೆಯಲ್ಲಿ
7. ಜನಿಸುವ ಮಗುವಿನ ಲಿಂಗ ನಿರ್ಧರಿಸುವ ಅಂಶ
A] ತಂದೆಯ ವರ್ಣತಂತು
B] ತಾಯಿಯ ವರ್ಣತಂತು
C] ಪ್ರಕೃತಿ ನಿಯಮ
D] ಯಾವುದೂ ಅಲ್ಲ
8. ಕಪ್ಪೆಗಳಲ್ಲಿ ರೂಪಪರಿವರ್ತನೆ ಉಂಟಾಗಲು ಥೈರಾಕ್ಸಿನ್ ಹಾರ್ಮೋನ್ ಅವಶ್ಯಕ. ಹಾಗಾದರೆ ಥೈರಾಕ್ಸಿನ್ ಹಾರ್ಮೋನ್ ಉತ್ಪಾದನೆಯಾಗಲು ನೀರಿನಲ್ಲಿರಬೇಕಾದ ಪೋಷಕಾಂಶ -
A] ಕಬ್ಬಿಣ
B] ನೈಟ್ರೋಜನ್
C] ಕ್ಲೋರಿನ್
D] ಅಯೋಡಿನ್
9. ‘ಡಯಾಬಿಟಿಸ್’ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಈ ಕೆಳಗಿನ ಯಾವ ಹಾರ್ಮೋನ್ ಅತಿ ಕಡಿಮೆ ಪ್ರಮಾಣದಲ್ಲಿ ಸ್ರವಿಕೆಯಾಗುತ್ತಿದೆ
A] ಥೈರಾಕ್ಸಿನ್
B] ಇನ್ಸೂಲಿನ್
C] ಅಡ್ರಿನಾಲಿನ್
D] ಬೆಳವಣಿಗೆ ಹಾರ್ಮೋನ್
10. ತಾರುಣ್ಯಾವಸ್ಥೆಗೆ ತಲುಪಿರುವ ವ್ಯಕ್ತಿಗಳು ಈ ಕೆಳಗಿನ ಯಾವುದನ್ನು ಕಡ್ಡಾಯವಾಗಿ ಪಾಲಿಸಬೇಕು
A] ಮಾದಕ ವಸ್ತುಗಳ ತಿರಸ್ಕಾರ
B] ಸಮತೋಲಿತ ಆಹಾರದ ಸೇವನೆ
C] ವೈಯಕ್ತಿಕ ಶುಚಿತ್ವದ ಪಾಲನೆ
D] ಮೇಲಿನ ಎಲ್ಲವೂ ಸರಿ
Ready to send