Skip to the content
ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು
1. ದ್ಯುತಿ ಉತ್ಸರ್ಜಕ ಡಯೋಡ್ [LED] ನಲ್ಲಿರುವ ತಂತಿಯ ತುದಿಗಳನ್ನು ಬ್ಯಾಟರಿ ತುದಿಗಳಿಗೆ ಅಳವಡಿಸುವ ಸರಿಯಾದ ಕ್ರಮ
A] ಉದ್ದ ತುದಿಯನ್ನು ಋಣಾಗ್ರಕ್ಕೆ , ಗಿಡ್ಡ ತುದಿ ಧನಾಗ್ರಕ್ಕೆ
B] ಉದ್ದ ತುದಿಯನ್ನು ಧನಾಗ್ರಕ್ಕೆ , ಗಿಡ್ಡ ತುದಿ ಋಣಾಗ್ರಕ್ಕೆ
C] ಬೇಕಾದ ತುದಿಗಳಿಗೆ ಸಂಪರ್ಕಿಸಬಹುದು
D] ಗುರುತಿಸಲು ಸಾಧ್ಯವಿಲ್ಲ
2. ಕೆಳಗಿನ ಯಾವ ದ್ರವಗಳಲ್ಲಿ ವಿದ್ಯುತ್ ಹರಿಯುವುದಿಲ್ಲ
A] ನಿಂಬೆರಸ
B] ವಿನೆಗಾರ್
C] ಸಸ್ಯಜನ್ಯ ತೈಲ
D] ನಲ್ಲಿ ನೀರು
3. ವಿದ್ಯುದ್ವಾಹಕ ದ್ರಾವಣದ ಮೂಲಕ ವಿದ್ಯುತ್ ಹಾಯಿಸಿದಾಗ ದ್ರಾವಣದ ಬಣ್ಣ ಬದಲಾದರೆ , ಇದು ವಿದ್ಯುತ್ ಪ್ರವಾಹದ
A] ರಾಸಾಯನಿಕ ಪರಿಣಾಮ
B] ಕಾಂತೀಯ ಪರಿಣಾಮ
C] ಉಷ್ಣೋತ್ಪಾದನ ಪರಿಣಾಮ
D] ಬೆಳಕಿನ ಪರಿಣಾಮ
4. ವಿದ್ಯುತ್ ಪರೀಕ್ಷಕವನ್ನು ಈ ಕೆಳಗಿನ ಯಾವ ದ್ರಾವಣದಲ್ಲಿ ಅದ್ದಿದಾಗ ಪರೀಕ್ಷಕದಲ್ಲಿನ ಬಲ್ಬ್ ಬೆಳಗುತ್ತದೆ
A] ಸಕ್ಕರೆಯ ದ್ರಾವಣ
B] ಉಪ್ಪಿನ ದ್ರಾವಣ
C] ಅಸವಿತ ನೀರು
D] ಜೇನುತುಪ್ಪ
5. ವಿದ್ಯುದ್ವಾರಗಳನ್ನು ನೀರಿನಲ್ಲಿ ಮುಳುಗಿಸಿ ವಿದ್ಯುತ್ ಹರಿಸಿದಾಗ ಧನಾಗ್ರದ ಬಳಿ ಈ ಅನಿಲದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ
A] ನೈಟ್ರೋಜನ್
B] ಹೈಡ್ರೋಜನ್
C] ಆಕ್ಸಿಜನ್
D] ಕಾರ್ಬನ್ ಡೈ ಆಕ್ಸೈಡ್
6. ವಿದ್ಯುಲ್ಲೇಪನ ಕ್ರಿಯೆಯಲ್ಲಿ ತಾಮ್ರದ ಸಲ್ಫೇಟ್ ದ್ರಾವಣಕ್ಕೆ ಸ್ವಲ್ಪ ಪ್ರಮಾಣದ ಸಲ್ಫೂರಿಕ್ ಆಮ್ಲ ಸೇರಿಸಲಾಗುತ್ತದೆ , ಕಾರಣ
A] ದ್ರಾವಣದ ಆಮ್ಲೀಯತೆಯನ್ನು ಹೆಚ್ಚಿಸಲು
B] ದ್ರಾವಣದ ವಾಹಕತೆಯನ್ನು ಹೆಚ್ಚಿಸಲು
C] ಪಡೆಯುವ ತಾಮ್ರದ ಹೊಳಪನ್ನು ಹೆಚ್ಚಿಸಲು
D] ತಾಮ್ರದ ಸಲ್ಫೇಟ್ ಅನ್ನು ವಿಭಜಿಸಲು
7. ಆಹಾರ ಸಂಗ್ರಹಿಸುವ ಲೋಹದ ಕ್ಯಾನ್ ಗಳಲ್ಲಿ ಕಬ್ಬಿಣದ ಮೇಲೆ ಸತುವಿನ ಲೇಪನ ಮಾಡಿರುವ ಉದ್ದೇಶ
A] ತಯಾರಿಕಾ ವೆಚ್ಚ ಕಡಿಮೆ ಮಾಡಲು
B] ಕ್ಯಾನ್ ಹಗುರವಾಗಿರಲು
C] ಕ್ಯಾನ್ ಹೊಳಪಾಗಿ ಕಾಣಲು
D] ಸತುವು ಕಬ್ಬಿಣಕ್ಕಿಂತ ಕಡಿಮೆ ಕ್ರಿಯಾಶೀಲ
8. ಸೈಕಲ್ ರಿಮ್ & ಹ್ಯಾಂಡಲ್ ಗಳು ಹೊಳಪಾಗಿ ಕಾಣಲು ಕಬ್ಬಿಣದ ಮೇಲೆ ಲೇಪನ ಮಾಡಿರುವ ಲೋಹ
A] ಸತು
B] ಕ್ರೋಮಿಯಂ
C] ತಾಮ್ರ
D] ಅಲುಮಿನಿಯಂ
9. ಈ ಕೆಳಗಿನ ಯಾವ ಲೋಹವನ್ನು ವಿದ್ಯುಲ್ಲೇಪನ ಕ್ರಿಯೆಯಲ್ಲಿ ಬಳಸುವುದಿಲ್ಲ
A] ಸೋಡಿಯಂ
B] ಕ್ರೋಮಿಯಂ
C] ಚಿನ್ನ
D] ಸತು
10. ತಾಮ್ರದ ಸಲ್ಫೇಟ್ ದ್ರಾವಣದ ಮೂಲಕ ವಿದ್ಯುತ್ ಹಾಯಿಸಿದಾಗ ಯಾವ ವಿದ್ಯುದ್ವಾರದ ರಾಶಿ ಹೆಚ್ಚಾಗುತ್ತದೆ
A] ಧನಾಗ್ರ
B] ಋಣಾಗ್ರ
C] ಧನಾಗ್ರ ಅಥವಾ ಋಣಾಗ್ರ
D] ಯಾವುದೇ ಬದಲಾವಣೆ ಇರುವುದಿಲ್ಲ
Ready to send