Skip to the content
ಕೆಲವು ನೈಸರ್ಗಿಕ ವಿದ್ಯಮಾನಗಳು
1. ಉಣ್ಣೆಯೊಂದಿಗೆಉಜ್ಜಿದಾಗ ಈ ಕೆಳಗಿನ ಯಾವ ವಸ್ತುಗಳು ಆವೇಶಗೊಳ್ಳುವುದಿಲ್ಲ
A] ಪ್ಲಾಸ್ಟಿಕ್ ರಿಫಿಲ್
B] ಬಲೂನ್
C] ಸ್ಟೀಲ್ ಚಮಚ
D] ಅಳಿಸುವ ರಬ್ಬರ್
2. ಆವೇಶ ಭರಿತ X ಮತ್ತು Y ವಸ್ತುಗಳನ್ನು ಪರಸ್ಪರ ಹತ್ತಿರ ತಂದಾಗ ಅವು ಒಂದನ್ನೊಂದು ವಿಕರ್ಷಿಸುತ್ತವೆ , ಅವು ಹೊಂದಿರುವ ಆವೇಶ
A] X ಧನಾವೇಶ , Y ಋಣಾವೇಶ
B] X ಋಣಾವೇಶ , Y ಧನಾವೇಶ
C] A ಅಥವಾ B
D] ಎರಡೂ ಒಂದೇ ರೀತಿಯ ಆವೇಶ
3. ವಿದ್ಯುದ್ದರ್ಶಕ ಎಂಬ ಉಪಕರಣವನ್ನು ಕೆಳಗಿನ ಯಾವುದನ್ನು ತಿಳಿಯಲು ಬಳಸುತ್ತಾರೆ
A] ಕಾಯದಲ್ಲಿನ ಆವೇಶ
B] ಕಾಯದ ತಾಪ
C] ಕಾಯದ ರಚನೆ
D] ಕಾಯದ ಭೌತಸ್ಥಿತಿ
4. ಒಂದು ಕಾಯದಲ್ಲಿನ ವಿದ್ಯುದಾವೇಶಗಳನ್ನು ಬೇರೊಂದು ಕಾಯಕ್ಕೆ ವರ್ಗಾಯಿಸಲು ಆ ಕಾಯಗಳನ್ನು ಇದರಿಂದ ಸಂಪರ್ಕಿಸಬೇಕು
A] ಹತ್ತಿಯ ದಾರ
B] ಪ್ಲಾಸ್ಟಿಕ್ ಕಡ್ಡಿ
C] ತಾಮ್ರದ ತಂತಿ
D] ರಬ್ಬರ್ ಎಳೆ
5. ಮಿಂಚಿನಿಂದ ರಕ್ಷಿಸಿಕೊಳ್ಳಲು ಅತ್ಯಂತ ಸುರಕ್ಷಿತ ಸ್ಥಳ
A] ಬಯಲಿನಲ್ಲಿ ನಿಲ್ಲುವುದು
B] ಮರದ ಕೆಳಗೆ ನಿಲ್ಲುವುದು
C] ಎತ್ತರದ ಕಟ್ಟಡ ಮೇಲೆ ನಿಲ್ಲುವುದು
D] ಮನೆಯೊಳಗೆ ಇರುವುದು
6. ಕೆಳಗಿನ ಯಾವ ನೈಸರ್ಗಿಕ ವಿದ್ಯಮಾನ ಸಂಭವಿಸುವುದನ್ನು ಮುಂಚಿತವಾಗಿಯೇ ಊಹಿಸಲು ಸಾಧ್ಯವಿಲ್ಲ
A] ಭೂಕಂಪಗಳು
B] ಗುಡುಗು-ಮಿಂಚು
C] ಚಂಡಮಾರುತಗಳು
D] ಪ್ರವಾಹಗಳು
7. ಭೂಕಂಪದ ತೀವ್ರತೆಯನ್ನು ಅಳೆಯುವ ಮಾನ
A] ಡೆಸಿಬಲ್
B] ಸೈಸ್ಮಿಕ
C] ರಿಕ್ಟರ್
D] ಮೀಟರ್
8. ಭೂಮಿಯ ಯಾವ ಬಾಗವು ಭೂಕಂಪನಗಳುಂಟಾಗಲು ಕಾರಣವಾಗಿದೆ
A] ಭೂತೊಗಟೆ
B] ಮ್ಯಾಂಟಲ್
C] ಹೊರ ತಿರುಳು
D] ಒಳ ತಿರುಳು
9. ಕೆಳಗಿನ ಯಾವ ತೀವ್ರತೆಯ ಭೂಕಂಪವು ಜೀವಹಾನಿ ಉಂಟುಮಾಡಬಲ್ಲದು
A] 1 ರಿಂದ 3
B] 3 ರಿಂದ 5
C] 7 ಕ್ಕಿಂತಕಡಿಮೆ
D] 7 ಕ್ಕಿಂತ ಹೆಚ್ಚು
10. ಕೇಂದ್ರೀಯ ಕಟ್ಟಡ ಸಂಶೋಧನಾ ಕೇಂದ್ರವನ್ನು ಯಾವ ನಗ್ರದಲ್ಲಿ ಸ್ಥಾಪಿಸಲಾಗಿದೆ
A] ಲಡಾಕ್
B] ರೂರ್ಕಿ
C] ಜೈಸಲ್ಮೇರ
D] ಡೆಹ್ರಾಡೂನ
Ready to send