Skip to the content
ನಕ್ಷತ್ರಗಳು ಮತ್ತು ಸೌರಮಂಡಲ
1. ಸಪ್ತರ್ಷಿ ಮಂಡಲದಲ್ಲಿ ಕಂಡು ಬರುವ ನಕ್ಷತ್ರಗಳ ಸಂಖ್ಯೆ
A] 5
B] 7
C] 14
D] 32
2. ಸಪ್ತರ್ಷಿ ಮಂಡಲದ ಸಹಾಯದಿಂದ ಈ ಕೆಳಗಿನ ಯಾವ ಆಕಾಶ ಕಾಯದ ಸ್ಥಾನವನ್ನು ಗುರುತಿಸಲಾಗುತ್ತದೆ
A] ಶುಕ್ರಗ್ರಹ
B] ಸೂರ್ಯ
C] ಧ್ರುವನಕ್ಷತ್ರ
D] ಸೀರಿಯಸ್ ನಕ್ಷತ್ರ
3. ಬೇಟೆಗಾರನ ಚಿತ್ರಾಕೃತಿಯನ್ನು ಹೋಲುವ ನಕ್ಷತ್ರಪುಂಜ
A] ಲುಬ್ಧಕ
B] ಕ್ಯಾಸಿಯೋಪಿಯಾ
C] ಬಿಗ್ ಡಿಪ್ಪರ್
D] ಸಿಂಹಮಂಡಲ
4. ಈ ಕೆಳಗಿನ ಯಾವುದು ಸೌರಮಂಡಲದ ಸದಸ್ಯ ಕಾಯವಲ್ಲ
A] ಚಂದ್ರ
B] ಕ್ಷುದ್ರಗ್ರಹ
C] ಧೂಮಕೇತು
D] ಧ್ರುವನಕ್ಷತ್ರ
5. ಕೆಳಗಿನ ಯಾವ ಗ್ರಹಗಳ ಗುಂಪನ್ನು ಒಳಗ್ರಹಗಳು ಎನ್ನುವರು
A] ಗುರು , ಶನಿ , ಯುರೇನಸ್ , ನೆಪ್ಚೂನ್
B] ಬುಧ , ಶುಕ್ರ , ಭೂಮಿ , ಮಂಗಳ
C] ಮಂಗಳ , ಬುಧ , ಗುರು , ಶನಿ
D] ಧೂಮಕೇತುಗಳು , ಕ್ಷುದ್ರಗ್ರಹಗಳು
6. ಸೂರ್ಯನಿಂದ ಗ್ರಹದ ಅಂತರ ಹೆಚ್ಚಾದಂತೆ ಗ್ರಹದ ಯಾವ ಸ್ವಭಾವದಲ್ಲಿ ಬದಲಾವಣೆಯಾಗುತ್ತದೆ
A] ಪರಿಭ್ರಮಣ ಅವಧಿ ಹೆಚ್ಚುತ್ತದೆ
B] ಗ್ರಹದ ಗಾತ್ರ ಹೆಚ್ಚುತ್ತದೆ
C] ಗ್ರಹದ ಮೇಲ್ಮೈ ತಾಪ ಹೆಚ್ಚುತ್ತದೆ
D] ಭ್ರಮಣಕಾಲ ಹೆಚ್ಚುತ್ತದೆ
7. ಗ್ರಹಗಳು ಸೂರ್ಯನನ್ನು ಪರಿಭ್ರಮಿಸುವಾಗ ಪರಸ್ಪರ ಡಿಕ್ಕಿ ಹೊಡೆಯುವುದಿಲ್ಲ ಏಕೆ ?
A] ಸ್ಥಿರ ವೇಗದಿಂದ ಪರಿಭ್ರಮಿಸುತ್ತವೆ
B] ಪರಿಭ್ರಮಿಸುವ ದಿಕ್ಕು ಬೇರೆ ಬೇರೆಯಾಗಿದೆ
C] ನಿರ್ಧಿಷ್ಟ ಕಕ್ಷೆಗಳಲ್ಲಿ ಪರಿಭ್ರಮಿಸುತ್ತವೆ
D] ಹತ್ತಿರ ಬಂದಾಗ ಪರಸ್ಪರ ವಿಕರ್ಷಿಸುತ್ತವೆ
8. ಈ ಕೆಳಗಿನ ಯಾವ ಗ್ರಹಗಳು ಉಪಗ್ರಹಗಳನ್ನು ಹೊಂದಿಲ್ಲ
A] ಬುಧ ಮತ್ತು ಶುಕ್ರ
B] ನೆಪ್ಚೂನ್ ಮತ್ತು ಯುರೇನಸ್
C] ಮಂಗಳ ಮತ್ತು ಶನಿ
D] ಗುರು ಮತ್ತು ಶನಿ
9. ಶುಕ್ರಗ್ರಹವು ಸಂಜೆ ನಕ್ಷತ್ರದಂತೆ ಕಂಡರೆ ಆಕಾಶದ ಯಾವ ದಿಕ್ಕಿನಲ್ಲಿ ನೀವು ಅದನ್ನು ಕಾಣುವಿರಿ
A] ಪೂರ್ವದಿಕ್ಕಿನಲ್ಲಿ
B] ಪಶ್ಚಿಮ ದಿಕ್ಕಿನಲ್ಲಿ
C] ಉತ್ತರ ದಿಕ್ಕಿನಲ್ಲಿ
D] ದಕ್ಷಿಣ ದಿಕ್ಕಿನಲ್ಲಿ
10. ಈ ಕೆಳಗಿನ ಯಾವ ಗ್ರಹವನ್ನು ‘ಕೆಂಪುಗ್ರಹ’ ಎಂದು ಕರೆಯುವರು
A] ಬುಧ
B] ಶುಕ್ರ
C] ನೆಪ್ಚೂನ್
D] ಮಂಗಳ
11. ಭೂಮಿಯ ಮೇಲೆ ಮಾತ್ರ ಜೀವಿಗಳು ಕಂಡು ಬರಲು ಕಾರಣವಾದ ಅಂಶ
A] ನಿರ್ಧಿಷ್ಟ ತಾಪ ವ್ಯಾಪ್ತಿ
B] ನೀರಿನ ಲಭ್ಯತೆ
C] ಸೂಕ್ತ ವಾತಾವರಣ
D] ಮೇಲಿನ ಎಲ್ಲವೂ ಸರಿ
12. ಒಂದು ಚೆಂಡಿನ ಒಳಭಾಗದಲ್ಲಿ 1300 ಬಟಾಣಿ ಕಾಳುಗಳು ಹಿಡಿಯುತ್ತವೆ . ಈಗ ಚೆಂಡು ಮತ್ತು ಬಟಾಣಿ ಕಾಳಿನ ಗಾತ್ರದ ಅನುಪಾತವನ್ನು ಈ ಕೆಳಗಿನ ಯಾವ ಎರಡು ಗ್ರಹಗಳಿಗೆ ಹೋಲಿಸಬಹುದು
A] ಶನಿ ಮತ್ತು ಭೂಮಿ
B] ಮಂಗಳ ಮತ್ತು ಭೂಮಿ
C] ಗುರು ಮತ್ತು ಭೂಮಿ
D] ಭೂಮಿ ಮತ್ತು ಚಂದ್ರ
13. ಈ ಕೆಳಗಿನ ಯಾವ ಗ್ರಹವು ನೀರಿಗಿಂತ ಕಡಿಮೆ ಸಾಂದ್ರತೆಯನ್ನು ಹೊಂದಿದೆ
A] ಮಂಗಳ
B] ಗುರು
C] ಶನಿ
D] ಶುಕ್ರ
14. ಕೆಳಗಿನ ಯಾವ ಗ್ರಹಗಳಲ್ಲಿ ಸೂರ್ಯ ಪಶ್ಚಿಮದಲ್ಲಿ ಉದಯಿಸಿ ಪೂರ್ವದಲ್ಲಿ ಮುಳುಗಿದಂತೆ ಕಾಣುತ್ತಾನೆ
A] ಶುಕ್ರ ಮತ್ತು ಯುರೇನಸ್
B] ಮಂಗಳ ಮತ್ತು ಗುರು
C] ಗುರು ಮತ್ತು ಶನಿ
D] ಶುಕ್ರ ಮತ್ತು ಶನಿ
15. ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ಉರುಳುತ್ತ ಪರಿಭ್ರಮಿಸುವ ಗ್ರಹ
A] ಗುರು
B] ಶನಿ
C] ಯುರೇನಸ್
D] ನೆಪ್ಚೂನ್
16. ಕ್ಷುದ್ರಗ್ರಹಗಳು ಕೆಳಗಿನ ಯಾವ ಗ್ರಹಗಳ ನಡುವೆ ಕಂಡುಬರುತ್ತವೆ
A] ಬುಧ ಮತ್ತು ಶುಕ್ರ
B] ಮಂಗಳ ಮತ್ತು ಗುರು
C] ಭೂಮಿ ಮತ್ತು ಮಂಗಳ
D] ನೆಪ್ಚೂನ್ ಮತ್ತು ಯುರೇನಸ್
17. ಶೂಟಿಂಗ್ ಸ್ಟಾರ್ ಎಂದರೆ -
A] ಮಿನುಗುವ ನಕ್ಷತ್ರ
B] ಬೀಳುತ್ತಿರುವ ಉಲ್ಕೆ
C] ಚಲಿಸುವ ನಕ್ಷತ್ರ
D] ಪ್ರಕಾಶಮಾನವಾದ ನಕ್ಷತ್ರ
18. ಸೂರ್ಯನ ಸಮೀಪಕ್ಕೆ ಬಂದಂತೆ ಈ ಕೆಳಗಿನ ಯಾವ ಕಾಯಗಳ ಗಾತ್ರ ಮತ್ತು ಆಕಾರ ಬದಲಾಗುತ್ತದೆ
A] ಗ್ರಹಗಳು
B] ಉಪಗ್ರಹಗಳು
C] ಕ್ಷುದ್ರಗ್ರಹಳು
D] ಧೂಮಕೇತುಗಳು
19. ತನ್ನ ಅಕ್ಷದಗುಂಟ ಅತ್ಯಂತ ವೇಗವಾಗಿ ಭ್ರಮಿಸುವ ಗ್ರಹ
A] ಮಂಗಳ
B] ಗುರು
C] ಶುಕ್ರ
D] ಶನಿ
20. ಈ ಕೆಳಗಿನ ಯಾವ ಗ್ರಹವು ಗಾತ್ರದಲ್ಲಿ ಭೂಮಿಗಿಂತ ದೊಡ್ಡದು
A] ಬುಧ
B] ಮಂಗಳ
C] ಶುಕ್ರ
D] ಯುರೇನಸ್
Ready to send