ಪ್ರೌಢಹಂತದಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡ ಮಾಧ್ಯಮದ ಸಂಪನ್ಮೂಲಗಳು ತುಂಬಾ ವಿರಳ . ಇದರಿಂದಾಗಿ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನದಿಂದ ವಂಚಿತರಾಗುತ್ತಿದ್ದಾರೆ . ವಿಜ್ಞಾನದ ವಿವಿಧ ಪರಿಕಲ್ಪಣೆಗಳನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳದೆ ವಿಷಯದಲ್ಲಿ ಕಠಿಣತೆಯನ್ನು ಅನುಭವಿಸುತ್ತಿದ್ದಾರೆ. ಇದರಿಂದಾಗಿ ಪ್ರೌಢಹಂತದ ನಂತರದ ಶಿಕ್ಷಣದಲ್ಲಿ ವಿಜ್ಞಾನ ಕ್ಷೇತ್ರವನ್ನು ಆಯ್ಕೆಮಾಡಲು ಹಿಂಜರಿಯುತ್ತಿದ್ದಾರೆ. ಮಾತೃಭಾಷೆಯಲ್ಲಿ ವಿಜ್ಞಾನ ವಿಷಯದ ಪರಿಕಲ್ಪಣೆಗಳನ್ನು ಸ್ಪಷ್ಟವಾಗಿ ಅರಿತುಕೊಂಡರೆ ಮುಂದೆ ಯಾವುದೇ ಮಾಧ್ಯಮದಲ್ಲೂ ಅಭ್ಯಸಿಸುವುದು ಸುಲಭ ಎಂಬ ಅಚಲ ನಂಬಿಕೆಯಿಂದ ನಮ್ಮ ಈ ಪ್ರಯತ್ನ