Skip to the content
ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು
1. ಈ ಕೆಳಗಿನ ಯಾವ ಕ್ರಿಯೆಯು ಬಹಿರುಷ್ಣಕ ಕ್ರಿಯೆಯಾಗಿದೆ ?
A] ಕಬ್ಬಿಣದ ಸಲ್ಫೇಟ್ ವಿಭಜನೆ
B] ನೀರಿನೊಂದಿಗೆ ಅರಳಿದ ಸುಣ್ಣದ ವರ್ತನೆ
C] ನೀರಿನ ವಿದ್ಯುದ್ವಿಭಜನೆ
D] ನೀರಿನಲ್ಲಿ ಸೋಡಿಯಂ ಕ್ಲೋರೈಡ್ನಂ ವಿಯೋಜನೆ
2. ಕೆಳಗಿನ ರಾಸಾಯನಿಕ ಕ್ರಿಯೆಗೆ ಸಂಬಂಧಿಸಿದಂತೆ ಯಾವ ಹೇಳಿಕೆಯು ಸರಿಯಾಗಿದೆ ? 3Fe (s) + 4H2O (g) ⇨ Fe3O4 (s) + 4H2 (g)
A] ಕಬ್ಬಿಣವು ಉತ್ಕರ್ಷಣೆ ಹೊಂದಿದೆ
B] ನೀರು ಉತ್ಕರ್ಷಣೆ ಹೊಂದಿದೆ
C] ಕಬ್ಬಿಣವು ಸ್ಫಟಿಕೀಕರಣಗೊಂಡಿದೆ
D] ಇದು ರಾಸಾಯನಿಕ ಸಂಯೋಗ ಕ್ರಿಯೆ
3. ಸ್ಥಾನಪಲ್ಲಟ ಕ್ರಿಯೆಗೆ ಉದಾಹರಣೆ
A] C + O2 ⇨ CO2
B] CH4 + 2O2 ⇨ CO2 + 2H2O
C] Na2SO4 + BaCl2 ⇨ BaSO4 + 2NaCl
D] Pb + CuCl2 ⇨ PbCl2 + Cu
4. ಕೊಬ್ಬಿನ ಪದಾರ್ಥಗಳಲ್ಲಿ ಕಮಟುವಿಕೆಗೆ ಕಾರಣವಾದ ಕ್ರಿಯೆ
A] ಉತ್ಕರ್ಷಣೆ
B] ಅಪಕರ್ಷಣೆ
C] ನಶಿಸುವಿಕೆ
D] ಹೈಡ್ರೊಜನೀಕರಣ
5. ರಾಸಾಯನಿಕ ಕ್ರಿಯೆಯೊಂದರಲ್ಲಿ ಎರಡು ಸಂಯುಕ್ತಗಳಲ್ಲಿನ ಅಯಾನುಗಳು ಪರಸ್ಪರ ವಿನಿಮಯ ಮಾಡಿಕೊಂಡು ಎರಡು ಹೊಸ ಸಂಯುಕ್ತಗಳುಂಟಾಗುವ ಕ್ರಿಯೆ
A] ರಾಸಾಯನಿಕ ಸಂಯೋಗ
B] ರಾಸಾಯನಿಕ ವಿಭಜನೆ
C] ರಾಸಾಯನಿಕ ಸ್ಥಾನಪಲ್ಲಟ
D] ರಾಸಾಯನಿಕ ದ್ವಿಸ್ಥಾನಪಲ್ಲಟ
6. ಕೆಳಗಿನ ಯಾವ ಹೇಳಿಕೆಯು ಅಂತರುಷ್ಣಕ ಕ್ರಿಯೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಯಾಗಿದೆ ?
A] ಕ್ರಿಯೆಯಲ್ಲಿ ಅನಿಲ ಬಿಡುಗಡೆಯಾಗುತ್ತದೆ
B] ಕ್ರಿಯೆಯಲ್ಲಿ ಉಷ್ಣ ಬಿಡುಗಡೆಯಾಗುತ್ತದೆ
C] ಕ್ರಿಯೆಯಲ್ಲಿ ಉಷ್ಣ ಹೀರಿಕೊಳ್ಳಲ್ಪಡುತ್ತದೆ
D] ಕ್ರಿಯೆಯಲ್ಲಿ ಆಕ್ಸಿಜನ್ ಬಿಟ್ಟುಕೊಡುತ್ತದೆ.
7. ಕೆಳಗಿನ ಯಾವ ಸಂದರ್ಭದಲ್ಲಿ ರಾಸಾಯನಿಕ ಕ್ರಿಯೆ ಜರುಗಿದೆ ?
A] ಅಧಿಕ ಒತ್ತಡದಲ್ಲಿ ಅನಿಲವನ್ನು ಸಿಲಿಂಡರ್ನಜಲ್ಲಿ ತುಂಬುವುದು
B] ಗಾಳಿಯನ್ನು ದ್ರವೀಕರಿಸುವುದು.
C] ಬೆಳ್ಳಿಯ ವಸ್ತುಗಳು ಕೆಲವು ಸಮಯದ ನಂತರ ಕಪ್ಪಾಗುವುದು
D] ಪೆಟ್ರೋಲ್ ಅನ್ನು ಗಾಳಿಯಲ್ಲಿ ತೆರೆದಿಡುವುದು.
8. ರಾಸಾಯನಿಕ ಕ್ರಿಯೆ ಜರಗುವಾಗ ಕೆಳಮುಖ ಬಾಣದ ↓ ಚಿಹ್ನೆಯು ಏನ್ನು ಸೂಚಿಸುತ್ತದೆ ?
A] ದ್ರಾವಣದಲ್ಲಿ ಉಷ್ಣ ಕಡಿಮೆಯಾಗುವಿಕೆ
B] ದ್ರಾವಣದಲ್ಲಿ ಅನಿಲದ ವಿಯೋಜನೆ
C] ದ್ರಾವಣದ ತಳದಲ್ಲಿ ಪ್ರಕ್ಷೇಪ ಉಂಟಾಗುವಿಕೆ
D] ದ್ರಾವಣದ ಬಣ್ಣ ಬದಲಾಗುವಿಕೆ
9. AX + BY → AY + BX ಈ ರಾಸಾಯನಿಕ ಕ್ರಿಯೆಯ ವಿಧ
A] ರಾಸಾಯನಿಕ ಸಂಯೋಗ
B] ರಾಸಾಯನಿಕ ವಿಭಜನೆ
C] ರಾಸಾಯನಿಕ ಸ್ಥಾನ ಪಲ್ಲಟ
D] ರಾಸಾಯನಿಕ ದ್ವಿಸ್ಥಾನಪಲ್ಲಟ
10. ಆಕ್ಸೈಡ್ ಅದಿರುಗಳಿಂದ ಲೋಹಗಳನ್ನು ಪ್ರತ್ಯೇಕಿಸಲು ಕೈಗೊಳ್ಳುವ ರಾಸಾಯನಿಕ ಕ್ರಿಯೆ
A] ಉತ್ಕರ್ಷಣ ಕ್ರಿಯೆ
B] ಅಪಕರ್ಷಣ ಕ್ರಿಯೆ
C] ವಿಭಜನ ಕ್ರಿಯೆ
D] ಸ್ಥಾನಪಲ್ಲಟ ಕ್ರಿಯೆ
11. ತಾಮ್ರವು ಈ ಕೆಳಗಿನ ಯಾವ ಲೋಹವನ್ನು ಅದರ ಲವಣದಿಂದ ಸ್ಥಾನಪಲ್ಲಟಗೊಳಿಸುತ್ತದೆ.
(A) ZnSO4
(B) FeSO4
(C) AgNO3
(D) MgSO4
12. PbO + C→ Pb + CO ಈ ಸಮೀಕರಣದಲ್ಲಿ
(A) Pbo ಉತ್ಕರ್ಷಣಗೊಳ್ಳುತ್ತದೆ
(B) C ಉತ್ಕರ್ಷಣಕಾರಿಯಾಗಿದೆ
(C) C ಅಪಕರ್ಷಣಕಾರಿಯಾಗಿದೆ
(D) ಇದು ರೆಡಾಕ್ಸ್ ಕ್ರಿಯೆಯನ್ನು ಪ್ರತಿನಿಧಿಸುವುದಿಲ್ಲ
13. ಕಬ್ಬಿಣದ ಸಲ್ಫೇಟ್ ಅನ್ನು ಅಧಿಕ ತಾಪದಲ್ಲಿ ಕಾಸಿದಾಗ ಕಂದು ಬಣ್ಣದ ಸಂಯುಕ್ತ ಉಂಟಾಗುವುದರ ಜೊತೆಗೆ ಎರಡು ಅನಿಲಗಳು ಬಿಡುಗಡೆಯಾಗುತ್ತವೆ. ಈ ಕ್ರಿಯೆಯ ವಿಧ-
(A) ಸ್ಥಾನಪಲ್ಲಟ ಹಾಗೂ ರೆಡಾಕ್ಸ್ ಕ್ರಿಯೆ
(B) ವಿಭಜನ ಹಾಗೂ ರೆಡಾಕ್ಸ್ ಕ್ರಿಯೆ
(C) ವಿಭಜನ ಹಾಗೂ ಅಂತರುಷ್ಣಕ ಕ್ರಿಯೆ
(D) ವಿಭಜನ ಹಾಗೂ ಬಹಿರುಷ್ಣಕ ಕ್ರಿಯೆ
14. Zn(s) + H2SO4(aq) → ZnSO4(x) + H2(y) ಈ ಕ್ರಿಯೆಯಲ್ಲಿನ ಉತ್ಪನ್ನುಗಳ ಭೌತಿಕ ಸ್ಥಿತಿ X ಮತ್ತು Y ಗಳು ಕ್ರಮವಾಗಿ
(A) X - ಘನ , Y - ಅನಿಲ
(B) X - ಅನಿಲ , Y - ಘನ
(C) X - ಜಲೀಯ , Y - ಅನಿಲ
(D) X - ಜಲೀಯ , Y - ಘನ
15. ಪೊಟ್ಯಾಷಿಯಂ ಅಯೋಡೈಡ್ ನೊಂದಿಗೆ ಸೀಸದ ನೈಟ್ರೇಟ್ ವರ್ತಿಸಿ ಪೋಟ್ಯಾಷಿಯಂ ನೈಟ್ರೇಟ್ ಹಾಗೂ ಸೀಸದ ಅಯೋಡೈಡ್ ಉಂಟಾಗುತ್ತದೆ. ಈ ರಾಸಾಯನಿಕ ಕ್ರಿಯೆಯ ವಿಧ -
(A) ರಾಸಾಯನಿಕ ಸಂಯೋಗ
(B) ರಾಸಾಯನಿಕ ವಿಭಜನೆ
(C) ರಾಸಾಯನಿಕ ಸ್ಥಾನಪಲ್ಲಟ
(D) ರಾಸಾಯನಿಕ ದ್ವಿಸ್ಥಾನಪಲ್ಲಟ
16. ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ಸೋಡಿಯಂ ಹೈಡ್ರಾಕ್ಸೈಡ್ ವರ್ತಿಸಿದಾಗ, ಸೋಡಿಯಂ ಕ್ಲೋರೈಡ್ ನೊಂದಿಗೆ ದೊರೆಯುವ ಇನ್ನೊಂದು ಉತ್ಪನ್ನು -
(A) ಹೈಡ್ರೋಜನ್ ಅನಿಲ
(B) ಕ್ಲೋರಿನ್ ಅನಿಲ
(C) ನೀರು
(D) ಸೋಡಿಯಂ ಹರಳು
Ready to send