Skip to the content
ಜೀವಕೋಶ - ರಚನೆ ಮತ್ತು ಕಾರ್ಯಗಳು
1. ಈ ಕೆಳಗಿನ ಯಾವುದರ ಗಾತ್ರ ಉಳಿದವುಗಳಿಗಿಂತ ತುಂಬಾ ಚಿಕ್ಕದು
A] ನರಕೋಶ
B] ಬ್ಯಾಕ್ಟೀರಿಯ
C] ಅಮೀಬ
D] ಬಿಳಿ ರಕ್ತ ಕಣ
2. ಆನೆ ಮತ್ತು ಇರುವೆ ಜೀವಕೋಶಗಳಿಂದ ಮಾಡಲ್ಪಟ್ಟಿವೆ , ಆದರೂ ಅವುಗಳ ಗಾತ್ರದಲ್ಲಿನ ವ್ಯತ್ಯಾಸಕ್ಕೆ ಕಾರಣ
A] ಜೀವಕೋಶಗಳ ಆಕಾರ
B] ಜೀವಕೋಶಗಳ ಗಾತ್ರ
C] ಜೀವಕೋಶಗಳ ಸಂಖ್ಯೆ
D] ಜೀವಕೋಶಗಳ ಕಾರ್ಯ
3. ಆನೆ ಮತ್ತು ಇಲಿ ಈ ಪ್ರಾಣಿಗಳಲ್ಲಿ ಜೀವಕೋಶದ ಗಾತ್ರ
A] ಆನೆಯ ಜೀವ ಕೋಶ ದೊಡ್ಡದು
B] ಇಲಿಯ ಜೀವಕೋಶ ಚಿಕ್ಕದು
C] ಎರಡೂ ಒಂದೇ ಗಾತ್ರದ ಜೀವಕೋಶ ಹೊಂದಿವೆ
D] ಜೀವಕೋಶದ ಗಾತ್ರವು ಅದು ನಿರ್ವಹಿಸುವ ಕಾರ್ಯವನ್ನು ಅವಲಂಬಿಸಿವೆ
4. ಈ ಕೆಳಗಿನ ಯಾವುದು ಕೋಶಪೊರೆಯ ಕಾರ್ಯವಾಗಿದೆ
A] ಒಳಬರುವ & ಹೊರ ಹೋಗುವ ವಸ್ತುಗಳನ್ನು ನಿಯಂತ್ರಿಸುತ್ತದೆ
B] ಒಳ ಬರುವ ವಸ್ತುಗಳನ್ನು ಮಾತ್ರ ನಿಯಂತ್ರಿಸುತ್ತದೆ
C] ಹೊರ ಹೋಗುವ ವಸ್ತುಗಳನ್ನು ಮಾತ್ರ ನಿಯಂತ್ರಿಸುತ್ತದೆ
D] ವಸ್ತುಗಳು ಮುಕ್ತವಾಗಿ ಸಾಗಿಸಲ್ಪಡುತ್ತವೆ
5. ಬ್ಯಾಕ್ಟೀರಿಯಾ , ಸಸ್ಯ ಜೀವ ಕೋಶ ಹಾಗೂ ಪ್ರಾಣಿ ಜೀವಕೋಶ ಈ ಮೂರರಲ್ಲಿಯೂ ಕಂಡು ಬರುವ ರಚನೆ
A] ಕೋಶ ಭಿತ್ತಿ
B] ಕೋಶ ಪೊರೆ
C] ಕೋಶ ಕೇಂದ್ರ
D] ಕ್ಲೋರೋಪ್ಲಾಸ್ಟ
6. ವಾತಾವರಣದಲ್ಲಿನ ಉಷ್ಣದ ಏರಿಳಿತ , ಗಾಳಿಯ ವೇಗ , ತೇವಾಂಶ ಮುಂತಾದವುಗಳಿಂದ ರಕ್ಷಿಸಲು ಸಸ್ಯ ಜೀವಕೋಶದಲ್ಲಿ ಕಂಡು ಬರುವ ಭಾಗ
A] ಕೋಶ ಕೇಂದ್ರ
B] ಕೋಶ ಪೊರೆ
C] ಕೋಶ ಭಿತ್ತಿ
D] ಕ್ಲೋರೋಪ್ಲಾಸ್ಟ
7. ಜೀವಕೋಶ ವಿಭಜನೆಗೊಳ್ಳುವಾಗ ಮಾತ್ರ ಕಂಡುಬರುವ ಕೋಶದ ರಚನೆ
A] ರೈಬೋಸೋಮ್
B] ವರ್ಣತಂತುಗಳು
C] ಮೈಟೋಕಾಂಡ್ರಿಯಾ
D] ಗಾಲ್ಗಿ ಸಂಕೀರ್ಣ
8. ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣ ಕ್ರಿಯೆಗೆ ಅಗತ್ಯವಾದ ಕಣದಂಗ
A] ಕ್ಲೋರೋಪ್ಲಾಸ್ಟ
B] ಮೈಟೋಕಾಂಡ್ರಿಯಾ
C] ಕೋಶ ಕೇಂದ್ರ
D] ಗಾಲ್ಗಿ ಸಂಕೀರ್ಣ
9. ಕೆಳಗಿನ ಯಾವ ಜೀವಕೋಶಗಳಲ್ಲಿ ದೊಡ್ಡದಾದ ,ಒಂದೇ ರಸದಾನಿ ಕಂಡುಬರುತ್ತದೆ
A] ಕೆನ್ನೆಯ ಜೀವಕೋಶಗಳಲ್ಲಿ
B] ಈರುಳ್ಳಿಯ ಜೀವಕೋಶಗಳಲ್ಲಿ
C] ಸ್ನಾಯುಕೋಶಗಳಲ್ಲಿ
D] ನರಕೋಶಗಳಲ್ಲಿ
10. ರಶ್ಮಿ ಸೂಕ್ಷ್ಮದರ್ಶಕ ಯಂತ್ರದಲ್ಲಿ ಜೀವಕೋಶವನ್ನು ವೀಕ್ಷಿಸಿದ್ದಾಳೆ , ಅದು ಕೋಶ ಭಿತ್ತಿಯನ್ನು ಹೊಂದಿದೆ ಆದರೆ ಅದು ವ್ಯವಸ್ಥಿತವಾದ ಕೋಶಕೇಂದ್ರವನ್ನು ಹೊಂದಿಲ್ಲ .ಅವಳು ವೀಕ್ಷಿಸಿರಬಹದಾದ ಜೀವಕೋಶ
A] ಪ್ರಾಣಿ ಜೀವಕೋಶ
B] ಸಸ್ಯ ಜೀವಕೋಶ
C] ಅಮೀಬ
D] ಬ್ಯಾಕ್ಟೀರಿಯಾ
Ready to send