Skip to the content
ಬೆಳಕು
1. ಬೆಳಕಿನ ಪ್ರತಿಫಲನದ ಮೊದಲನೇಯ ನಿಯಮದ ಪ್ರಕಾರ
A] ಪತನ ಕೋನವು ಪ್ರತಿಫಲನ ಕೋನಕ್ಕಿಂತ ಹೆಚ್ಚಾಗಿರುತ್ತದೆ
B] ಪತನ ಕೋನವು ಪ್ರತಿಫಲನ ಕೋನಕ್ಕಿಂತ ಕಡಿಮೆ ಇರುತ್ತದೆ
C] ಪತನ ಕೋನವು ಪ್ರತಿಫಲನ ಕೋನಕ್ಕೆ ಸಮನಾಗಿರುತ್ತದೆ
D] ಪತನ ಕೋನವು ಪ್ರತಿಫಲನ ಕೋನಕ್ಕಿಂತ ಹೆಚ್ಚು ಅಥವಾ ಕಡಿಮೆ ಇರುತ್ತದೆ
2. ಸಮತಲ ದರ್ಪಣದಲ್ಲಿ ಉಂಟಾಗುವ ಪ್ರತಿಬಿಂಬದ ಲಕ್ಷಣ
A] ನೇರ ಮತ್ತು ವಸ್ತುವಿಗಿಂತ ದೊಡ್ಡದು
B] ನೇರ ಮತ್ತು ವಸ್ತುವಿನಷ್ಟೆ ಗಾತ್ರ
C] ತಲೆಕೆಳಗಾದ ಮತ್ತು ವಸ್ತುವಿಗಿಂತ ಚಿಕ್ಕದು
D] ತಲೆಕೆಳಗಾದ ಮತ್ತು ವಸ್ತುವಿಗಿಂತ ದೊಡ್ಡದು
3. ಈ ಕೆಳಗಿನ ಯಾವ ವಸ್ತುವಿನಿಂದ ಅನಿಯತ ಪ್ರತಿಫಲನ ಉಂಟಾಗುತ್ತದೆ
A] ಕಾಗದ
B] ಕನ್ನಡಿ
C] ಹೊಸ ಸ್ಟೀಲ ಪಾತ್ರೆ
D] ನಿಂತ ನೀರು
4. ಒಂದು ಹಾಳೆಯ ಮೇಲೆ A , O , P , M , X , Z ಎಂಬ ಅಕ್ಷರಗಳನ್ನು ಬರೆದು ಕನ್ನಡಿಯ ಮುಂದೆ ಹಿಡಿದಾಗ ಯಾವ ಅಕ್ಷರಗಳು ಭಿನ್ನವಾಗಿ ಕಾಣುವುದು
A] A , O
B] O , M
C] P , Z
D] M , X
5. ಈ ಕೆಳಗಿನ ಯಾವ ಕಾಯವು ಸ್ವಯಂ ಪ್ರಕಾಶಿತ ಕಾಯವಲ್ಲ
A] ಸೂರ್ಯ
B] ಚಂದ್ರ
C] ಮೇಣದ ಜ್ವಾಲೆ
D] ಟ್ಯೂಬ ಲೈಟ್
6. ಅತಿ ಹೆಚ್ಚಿನ ಸಂಖ್ಯೆಯ ಪ್ರತಿಬಿಂಬಗಳನ್ನು ಪಡೆಯಲು ದರ್ಪಣಗಳ ನಡುವಿನ ಕೋನ ಎಷ್ಟಿರಬೇಕು ?
A] 45 ಡಿಗ್ರಿ
B] 60 ಡಿಗ್ರಿ
C] 90 ಡಿಗ್ರಿ
D] 120 ಡಿಗ್ರಿ
7. ಕೆಲಿಡಿಯೋ ಸ್ಕೋಪ್ ಸಾಧನವನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತದೆ
A] ಆಕಾಶ ಕಾಯಗಳನ್ನು ವೀಕ್ಷಿಸಲು
B] ದೂರದ ವಸ್ತುಗಳನ್ನು ವೀಕ್ಷಿಸಲು
C] ಅವಿತುಕುಳಿತ ಶತ್ರುಗಳನ್ನು ಪತ್ತೆ ಹಚ್ಚಲು
D] ವಸ್ತ್ರ ವಿನ್ಯಾಸಕಾರರು ಹೊಸ ಕಲ್ಪನೆಗಳನ್ನು ಪಡೆಯಲು
8. ಬೆಳಕು ಏಳು ಬಣ್ಣಗಳಾಗಿ ವಿಭಜನೆಗೊಳ್ಳುವ ವಿದ್ಯಮಾನ
A] ಬೆಳಕಿನ ಪ್ರತಿಫಲನ
B] ಬೆಳಕಿನ ಚದುರುವಿಕೆ
C] ಬೆಳಕಿನ ಬಾಗುವಿಕೆ
D] ಬೆಳಕಿನ ವ್ಯತೀಕರಣ
9. ಕಣ್ಣಿಗೆ ವಿಶಿಷ್ಟ ಬಣ್ಣ ನೀಡುವ ಕಣ್ಣಿನ ಭಾಗ
A] ಕಾರ್ನಿಯಾ
B] ಮಸೂರ
C] ಐರಿಷ್
D] ಅಕ್ಷಿಪಟಲ
9. ಕಣ್ಣಿನಲ್ಲಿ ಪ್ರತಿಬಿಂಬ ಉಂಟಾಗುವ ಭಾಗ
A] ಮಸೂರ
B] ಅಕ್ಷಿಪಟಲ
C] ಕಾರ್ನಿಯಾ
D] ಐರಿಷ್
10. ಗೂಬೆಯು ರಾತ್ರಿ ಸ್ಪಷ್ಟವಾಗಿ ನೋಡುತ್ತದೆ ಆದರೆ ಹಗಲಿನಲ್ಲಿ ಕುರುಡಾಗಿರುತ್ತದೆ , ಕಾರಣ ಅದರ ಕಣ್ಣಿನಲ್ಲಿ
A] ಹೆಚ್ಚು ಶಂಕು ಕೋಶಗಳಿರುತ್ತವೆ
B] ಹೆಚ್ಚು ಕಂಬಿಕೋಶಗಳಿರುತ್ತವೆ
C] ಕಡಿಮೆ ಕಂಬಿಕೋಶಗಳಿರುತ್ತವೆ
D] ಕಂಬಿ ಮತ್ತು ಶಂಕು ಕೋಶಗಳು ಸಮನಾಗಿರುತ್ತವೆ
11. ರವಿಯ ಬಳಿ ವಿವಿಧ ಬಂಗಿಗಳಲ್ಲಿರುವ 32 ಸ್ಥಿರ ಚಿತ್ರಗಳ ಕಟ್ಟು ಇದೆ. ಇದರಲ್ಲಿನ ಚಿತ್ರಗಳು ಚಲಿಸುವಂತೆ ಭಾಸವಾಗಲು ಆ ಕಟ್ಟಿನಲ್ಲಿರುವ ಎಲ್ಲ ಚಿತ್ರಗಳನ್ನು ಚಲಿಸಲು ತೆಗೆದುಕೊಳ್ಳಬೇಕಾದ ಸಮಯ
A] 2 ಸೆಕೆಂಡಿನೊಳಗೆ
B] 6 ಸೆಂಡುಗಳು
C] 12 ಸೆಕೆಂಡಗಳು
D] 32 ಸೆಕೆಂಡಗಳು
12. ಪುಸ್ತಕಗಳನ್ನು ನಿರಾಯಾಸವಾಗಿ ಓದಬೇಕಾದರೆ ಪುಸ್ತಕವನ್ನು ಕಣ್ಣಿನಿಂದ ಎಷ್ಟು ದೂರದಲ್ಲಿ ಹಿಡಿಯಬೇಕು
A] 2.5 cm
B] 12.5 cm
C] 25 cm
D] 1 m
13. ಜೀವಸತ್ವ A ನ ಕೊರತೆಯಿಂದ ಕಣ್ಣಿನಲ್ಲಿ ಕಾಣಿಸಿಕೊಳ್ಳುವ ತೊಂದರೆ
A] ಸಮೀಪ ದೃಷ್ಟಿದೋಷ
B] ದೂರ ದೃಷ್ಟಿದೋಷ
C] ಕಣ್ಣಿನ ಮಸೂರ ಮಸುಕಾಗುವುದು
D] ಇರುಳುಗುರುಡು
14. ದೃಷ್ಟಿವಿಕಲ ವ್ಯಕ್ತಿಗಳು ಓದಲು , ಬರೆಯಲು ಬಳಸುವ ಲಿಪಿಯನ್ನು ಬಳಕೆಗೆ ತಂದವರು
A] ಲೂಯಿಸ್ ಬ್ರೌನ್
B] ಲೂಯಿಸ್ ಬ್ರೈಲ್
C] ಹೆಲೆನ್ ಕೆಲ್ಲರ
D] ರವೀಂದ್ರ ಜೈನ್
15. ಕಣ್ಣಿನ ಆರೈಕೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹವ್ಯಾಸ ಒಳ್ಳೆಯದು
A] ಮಂದ ಬೆಳಕಿನಲ್ಲಿ ಓದುವುದು
B] ಪ್ರಕಾಶಮಾನವಾದ ಬೆಳಕಿನಲ್ಲಿ ಓದುವುದು
C] ಪುಸ್ತಕವನ್ನು ನಿರ್ಧಿಷ್ಟ ಅಂತರದಲ್ಲಿ ಹಿಡಿದು ಓದುವುದು
D] ಮೊಬೈಲ್ , ಟಿವಿ ಗಳನ್ನು ಅತಿಯಾಗಿ ವೀಕ್ಷಿಸುವುದು
Ready to send