Skip to the content
ವಾಯುಮಾಲಿನ್ಯ ಮತ್ತು ಜಲಮಾಲಿನ್ಯ
1. ಗಾಳಿಯು ಅನೇಕ ಅನಿಲಗಳ ಮಿಶ್ರಣ , ಇವುಗಳಲ್ಲೊಂದು 21% ಇದೆ ಮತ್ತು ಜೀವಿಗಳ ಉಸಿರಾಟಕ್ಕೆ ಅಗತ್ಯವಾಗಿದೆ
A] ನೈಟ್ರೋಜನ್
B] ಓಝೋನ್
C] ಆಕ್ಸಿಜನ್
D] ಅರ್ಗಾನ್
2. ಕೆಳಗಿನ ಯಾವುದು ವಾಯುಮಾಲಿನ್ಯಕ್ಕೆ ಕಾರಣವಲ್ಲ
A] ವಾಹನಗಳ ಹೊಗೆ
B] ಗಾಳಿಯಂತ್ರಗಳು
C] ಉರುವಲುಗಳು
D] ಉಷ್ಣಸ್ಥಾವರಗಳು
3. ದೀಪಾ ವಾಯುಮಾಲಿನ್ಯ ಕಡಿಮೆಗೊಳಿಸಲು ಇಚ್ಛಿಸುತ್ತಾಳೆ , ಹಾಗಾದರೆ ಅವಳು ಪ್ರತಿನಿತ್ಯ ಶಾಲೆಗೆ ಹೋಗಲು ಈ ಕೆಳಗಿನ ಯಾವ ವಾಹನಬಳಸುವುದು ಸೂಕ್ತ
A] ಕಾರ್
B] ರಿಕ್ಷಾ
C] ಸ್ಕೂಟರ್
D] ಬಸ್
4. ಪೆಟ್ರೋಲ್ ಮತ್ತು ಡೀಸಲ್ ಗಳ ಅಪೂರ್ಣದಹನದಿಂದ ಬಿಡುಗಡೆಯಾಗುವ ಮಾಲಿನ್ಯಕಾರಕ ಅನಿಲ
A] ನೈಟ್ರೋಜನ್ ಆಕ್ಸೈಡ್
B] ಕಾರ್ಬನ್ ಡೈ ಆಕ್ಸೈಡ್
C] ಸಲ್ಫರ್ ಆಕ್ಸೈಡ್
D] ಒಝೋನ್
5. ಮಾರ್ಬಲ್ ಕ್ಯಾನ್ಸರ್ ಉಂಟಾಗಲು ಈ ಕೆಳಗಿನ ಯಾವುದು ಕಾರಣವಾಗಿದೆ
A] ಕಾರ್ಬನ್ ಕಣಗಳು
B] ಸ್ಮಾಗ್
C] ಕ್ಲೋರೋಫ್ಲೋರೋ ಕಾರ್ಬನ್
D] ಆಮ್ಲಮಳೆ
6. ಕೆಳಗಿನ ಯಾವುದು ಹಸಿರು ಮನೆ ಪರಿಣಾಮಕ್ಕೆ ಕಾರಣವಲ್ಲ
A] ಕ್ಲೋರೋಫ್ಲೋರೋ ಕಾರ್ಬನ್
B] ಮೀಥೇನ್
C] ನೀರಾವಿ
D] ಕಾರ್ಬನ್ ಡೈ ಆಕ್ಸೈಡ್
7. ಓಝೋನ್ ಪದರಿನ ಸವೆತಕ್ಕೆ ಕಾರಣವಾದ ಮಾಲಿನ್ಯಕಾರಕ
A] ಸಲ್ಫರ್ ಆಕ್ಸೈಡ್ ಗಳು
B] ಕಾರ್ಬನ್ ಡೈ ಆಕ್ಸೈಡ್
C] ಕ್ಲೋರೋಫ್ಲೋರೋ ಕಾರ್ಬನ್
D] ಆಮ್ಲಮಳೆ
8. ಕುಡಿಯಲು ಬಳಸುವ ನೀರಿನಲ್ಲಿನ ರೋಗಾಣುಗಳನ್ನು ನಿರ್ಮೂಲನ ಮಾಡುವ ವಿಧಾನ
A] ಸೋಸುವಿಕೆ
B] ಕುದಿಸುವಿಕೆ
C] ಕ್ಲೋರಿನ್ ಅನಿಲ ಹಾಯಿಸಿವುದು
D] ಕುದಿಸುವಿಕೆ ಅಥವಾ ಕ್ಲೋರಿನ್ ಅನಿಲ ಹಾಯಿಸುವುದು
9. ಕೆಳಗಿನ ಯಾವ ಚಟುವಟಿಕೆಯು ನೀರನ್ನು ಕನಿಷ್ಟ ಮಲಿನಗೊಳಿಸುತ್ತದೆ
A] ಕೈಗಾರಿಕಾ ತ್ಯಾಜ್ಯಗಳನ್ನು ನೀರಿಗೆ ಸೇರಿಸುವುದು
B] ಸಾಬೂನು ಬಳಸದೆ ನದಿಯಲ್ಲಿ ಸ್ನಾನ ಮಾಡುವುದು
C] ಚರಂಡಿ ನೀರನ್ನು ನೀರಿನ ಆಕರಗಳಿಗೆ ಸೇರಿಸುವುದು
D] ನದಿಗಳಲ್ಲಿ ಮಾರ್ಜಕಗಳನ್ನು ಬಳಸಿ ಬಟ್ಟೆ ತೊಳೆಯುವುದು
10. ನೀರು ಮಲಿನಗೊಂಡಿದೆ ಎಂದು ಭೌತಿಕವಾಗಿ ಹೇಗೆ ಗುರುತಿಸುವಿರಿ
A] ನೀರಿನ ಬಣ್ಣದಿಂದ
B] ನೀರಿನ ವಾಸನೆಯಿಂದ
C] ನೀರಿನ ಮೇಲೆ ಬೆಳೆದ ಹಸಿರು ಶೈವಲಗಳಿಂದ
D] ಮೇಲಿನ ಎಲ್ಲವೂ ಸರಿ
Ready to send