Skip to the content
ಸೂಕ್ಷ್ಮಜೀವಿಗಳು : ಮಿತ್ರ ಮತ್ತು ಶತ್ರು
1. ಬ್ರೆಡ್ ಗಳ ಮೇಲೆ ಬೆಳೆಯುವ ಬೂಸ್ಟಗಳು ಈ ಗುಂಪಿಗೆ ಸೇರಿದ ಜೀವಿಗಳು
A] ಬ್ಯಾಕ್ಟೀರಿಯಾ
B] ವೈರಸ್
C] ಶಿಲೀಂದ್ರಗಳು
D] ಪ್ರೋಟೋಜೋವಾ
2. ಬೇರೊಂದು ಜೀವಕೋಶದೊಳಗೆ ಮಾತ್ರ ಸಂತಾನೋತ್ಪತ್ತಿ ನಡೆಸುವ ಸೂಕ್ಷ್ಮಜೀವಿ
A] ಬ್ಯಾಕ್ಟೀರಿಯಾ
B] ವೈರಸ್
C ] ಯೀಸ್ಟ್
D] ಅಮೀಬ
3. ಸೂಕ್ಷ್ಮಜೀವಿಗಳು ಎಲ್ಲಿ ಕಂಡುಬರುತ್ತವೆ ?
A] ಶೀತಪ್ರದೇಶಗಳಲ್ಲಿ
B] ಮರಭೂಮಿಯಲ್ಲಿ
C] ಜೌಗು ಪ್ರದೇಶಗಳಲ್ಲಿ
D] ಎಲ್ಲ ಬಗೆಯ ಪರಿಸರಗಳಲ್ಲಿ
4. ಏಕಕೋಶಜೀವಿಗಳಿಂದ ಬರುವ ಹಾಗೂ ಸೊಳ್ಳೆಗಳಿಂದ ಹರಡುವ ರೋಗ
A] ಮಲೇರಿಯಾ
B] ಡೆಂಗ್ಯೂ
C] ದಡಾರ
D] ಪೋಲಿಯೋ
5. ಶಶಿ A ಮತ್ತು B ಎಂಬ ಎರಡು ಗುಂಡಿಗಳನ್ನು ತೋಡಿ A ಗುಂಡಿಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಹಾಗೂ B ಗುಂಡಿಯಲ್ಲಿ ಹಣ್ಣಿನ ಸಿಪ್ಪೆಗಳನ್ನು ಹಾಕಿ ಮುಚ್ಚುತ್ತಾನೆ . ಇಲ್ಲಿ ಜರಗುವ ಕ್ರಿಯೆ
A] ಗುಂಡಿ A ಯಲ್ಲಿನ ವಸ್ತುಗಳು ಕೊಳೆಯುತ್ತವೆ
B] ಗುಂಡಿ B ಯಲ್ಲಿನ ವಸ್ತುಗಳು ಕೊಳೆಯುತ್ತವೆ
C] ಎರಡೂ ಗುಂಡಿಯಲ್ಲಿನ ವಸ್ತುಗಳು ಕೊಳೆಯುತ್ತವೆ
D] ಎರಡೂ ಗುಂಡಿಯಲ್ಲಿನ ವಸ್ತುಗಳು ಕೊಳೆಯುವುದಿಲ್ಲ
6. ಕೊರೊನಾ ವೈರಸ್ ಸಂಪರ್ಕದಿಂದ ಹರಡುವ ರೋಗವಾಗಿದೆ , ಇದನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮ
A] ಮಾಸ್ಕ ಧರಿಸುವುದು
B] ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳುವುದು
C] ಬೇರೊಬ್ಬರಿಂದ ಅಂತರ ಕಾಯ್ದುಕೊಳ್ಳುವುದು
D] ಮೇಲಿನ ಎಲ್ಲವೂ ಸರಿ
7. ಯೀಸ್ಟ್ ಜೀವಿಗಳಿಂದ ಜರಗುವ ‘ಹುದುಗುವಿಕೆ’ ಕ್ರಿಯೆಯನ್ನು ಅನ್ವೇಷಿಸಿದ ವಿಜ್ಞಾನಿ
A] ಅಲೆಕ್ಸಾಂಡರ್ ಫ್ಲೆಮಿಂಗ್
B] ಲೂಯಿಸ್ ಪಾಶ್ಚರ್
C] ಎಡ್ವರ್ಡ ಜೆನ್ನರ್
D] ರಾಬರ್ಟ ಕಾಚ್
8. ರೋಗಕಾರ ಸೂಕ್ಷ್ಮ ಜೀವಿಗಳನ್ನು ಕೊಲ್ಲುವ ಅಥವಾ ಅವುಗಳ ಬೆಳವಣಿಗೆಯನ್ನು ಪ್ರತಿಬಂಧಿಸುವ ಔಷಧಿಗಳು -
A] ಸಂರಕ್ಷಕಗಳು
B] ಪ್ರತಿಉತ್ಕರ್ಷಕಗಳು
C] ಪ್ರತಿಜೈವಿಕಗಳು
D] ಪ್ರತಿಕಾಯಗಳು
9. ಹಣ್ಣು , ತರಕಾರಿ ಹಾಗೂ ಹಾಲು - ಇವುಗಳನ್ನು ಸಂರಕ್ಷಿಸಲು ರೆಫ್ರಿಜರೇಟರ್ ಗಳಲ್ಲಿ ಇಡಲಾಗುತ್ತದೆ , ಕಾರಣ
A] ಇದು ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ
B] ಇಲ್ಲಿ ಸೂಕ್ಷ್ಮಜೀವಿಗಳು ಕೊಲ್ಲಲ್ಪಡುತ್ತವೆ
C] ಇದು ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆಯುತ್ತದೆ
D] ಇದರಲ್ಲಿ ರಾಸಾಯನಿಕ ಸಂರಕ್ಷಕಗಳಿವೆ
10. ಕೆಳಗಿನ ಯಾವ ಕ್ರಿಯೆಯು ಸೂಕ್ಷ್ಮಜೀವಿಗಳಿಂದ ನಡೆಯುವುದಿಲ್ಲ
A] ಹುದುಗುವಿಕೆ
B] ಆಹಾರ ವಿಷಮಯವಾಗುವಿಕೆ
C] ನೈಟ್ರೋಜನ್ ಸ್ಥಿರೀಕರಣ
D] ಪಾಶ್ಚರೀಕರಣ
Ready to send