Skip to the content
ಸಸ್ಯಗಳ ಮತ್ತು ಪ್ರಾಣಿಗಳ ಸಂರಕ್ಷಣೆ
1. ಮರಭೂಮಿಕರಣ ಕ್ರಿಯೆಯಲ್ಲಿ ಈ ಕೆಳಗಿನ ಯಾವ ಬದಲಾವಣೆ ಕಂಡುಬರುತ್ತದೆ
A] ವಾತಾವರಣದಲ್ಲಿನ ಒತ್ತಡ ಹೆಚ್ಚಾಗುವುದು
B] ಫಲವತ್ತಾದ ಮಣ್ಣು ಬರಡಾಗುವುದು
C] ಮಣ್ಣು ಹೆಚ್ಚು ನೀರು ಹಿಡಿದಿಟ್ಟುಕೊಳ್ಳುವುದು
D] ಹೆಚ್ಚು ಪ್ರವಾಹಗಳು ಸಂಭವಿಸುವುದು
2. ಕೆಳಗಿನ ಯಾವುದು ಅರಣ್ಯನಾಶದ ಪರಿಣಾಮ ಅಲ್ಲ
A] ಆಕ್ಸಿಜನ್ ಪ್ರಮಾಣದಲ್ಲಿ ಹೆಚ್ಚಳ
B ] ಕಾರ್ಬನ್ ಡೈ ಆಕ್ಸೈಡ್ ಪ್ರಮಾಣದಲ್ಲಿ ಹೆಚ್ಚಳ
C] ಮಳೆಯ ಪ್ರಮಾಣ ಕುಂಠಿತಗೊಳ್ಳುವುದು
D] ವಾತಾವರಣದ ಉಷ್ಣತೆ ಹೆಚ್ಚಾಗುವುದು
3. ಕೆಳಗಿನ ಯಾವ ಉದ್ಯಮವು ಅರಣ್ಯಗಳ ಉತ್ಪನ್ನಗಳನ್ನು ಅವಲಂಬಿಸಿಲ್ಲ
A] ಮರದ ಆಟಿಕೆಗಳ ತಯಾರಿಕೆ
B] ಪೀಠೋಪಕರಣಗಳ ತಯಾರಿಕೆ
C] ಕಾಗದದ ತಯಾರಿಕೆ
D] ಸಕ್ಕರೆಯ ತಯಾರಿಕೆ
4. ಇತ್ತೀಚೆಗೆ ಕೆಲವು ಕಾಡಾನೆಗಳ ಗುಂಪು ಹಳ್ಳಿಗಳನ್ನು ಪ್ರವೇಶಿಸುತ್ತಿರುವ ಪ್ರಸಂಗಳು ಹೆಚ್ಚಾಗುತ್ತಿವೆ . ಇದಕ್ಕೆ ಅತಿ ಮುಖ್ಯ ಕಾರಣವೆಂದರೆ
A] ಅವುಗಳ ಸ್ವಭಾವದಲ್ಲಿನ ಬದಲಾವಣೆ
B] ಅವು ರೋಗಗಳಿಗೆ ತುತ್ತಾಗುತ್ತಿವೆ
C] ಅರಣ್ಯ ನಾಶದ ಪರಿಣಾಮದಿಂದ
D] ಸಂತಾನೋತ್ಪತ್ತಿಗಾಗಿ ಸ್ಥಳ ಹುಡುಕಲು
5. ಜೀವ ವೈವಿಧ್ಯತೆ ಎಂದರೆ ಒಂದು ಪ್ರದೇಶದಲ್ಲಿ ಕಂಡುಬರುವ
A] ಸಸ್ಯಗಳು ಮಾತ್ರ
B] ಪ್ರಾಣಿಗಳು ಮಾತ್ರ
C] ಸಸ್ಯ ಮತ್ತು ಪ್ರಾಣಿಗಳೆರಡೂ
D] ಸಸ್ಯಗಳು , ಪ್ರಾಣಿಗಳು ಮತ್ತು ಸೂಕ್ಷ್ಮಜೀವಿಗಳು
6. ವನ್ಯ ಜೀವಿಗಳಿಗೆ ಕೃತಕ ಆವಾಸ ಸ್ಥಾನ ಕಲ್ಪಿಸಿ ಅವುಗಳನ್ನು ಸಂರಕ್ಷಿಸುವ ಪ್ರದೇಶ
A] ವನ್ಯಜೀವಿ ಧಾಮ
B] ಪ್ರಾಣಿ ಸಂಗ್ರಹಾಲಯ
C] ರಾಷ್ಟ್ರೀಯ ಉದ್ಯಾನ
D] ಮೀಸಲು ಜೀವಿಗೋಳ
7. ಅಪಾಯದ ಅಂಚಿನಲ್ಲಿರುವ ಪ್ರಾಣಿಗಳೆಂದರೆ
A] ಅಳಿದು ಹೋದ ಪ್ರಾಣಿಗಳು
B] ಭಕ್ಷಕ ಪ್ರಾಣಿಗಳು
C] ಅತಿ ಕಡಿಮೆ ಸಂಖ್ಯೆಯಲ್ಲಿರುವ ಪ್ರಾಣಿಗಳು
D] ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಾಣಿಗಳು
8. ಭಾರತದಲ್ಲಿ ಸಧ್ಯ ಅತಿ ಹೆಚ್ಚು ಅಪಾಯದ ಅಂಚಿನಲ್ಲಿರುವ ಪ್ರಾಣಿಗಳೆಂದರೆ
A] ಹುಲಿ
B] ಆನೆ
C] ಜಿಂಕೆ
D] ಕಾಡೆಮ್ಮೆ
9. ಅಪಾಯದ ಅಂಚಿನಲ್ಲಿರುವ ಎಲ್ಲ ಸಸ್ಯ ಹಾಗೂ ಪ್ರಾಣಿಗಳ ದಾಖಲೆಯನ್ನು ಹೊಂದಿರುವ ಪುಸ್ತಕ
A] ಹಸಿರು ದತ್ತಾಂಶ ಪುಸ್ತಕ
B] ನೀಲಿ ದತ್ತಾಂಶ ಪುಸ್ತಕ
C] ಕೆಂಪು ದತ್ತಾಂಶ ಪುಸ್ತಕ
D] ಹಳದಿ ದತ್ತಾಂಶ ಪುಸ್ತಕ
10. ಕೆಲವು ಹಕ್ಕಿಗಳಲ್ಲಿ ವಲಸೆ ಹೋಗುವ ಪ್ರವೃತ್ತಿ ಕಂಡುಬರುತ್ತದೆ . ಹಕ್ಕಿಗಳು ವಲಸೆ ಹೋಗಲು ಕಾರಣ -
A] ವಾತಾವರಣದಲ್ಲಿನ ಬದಲಾವಣೆ
B] ಆಹಾರಕ್ಕಾಗಿ
C] ಸಂತಾನೋತ್ಪತ್ತಿಗಾಗಿ
D] ಮೇಲಿನ ಎಲ್ಲವೂ ಸರಿ
Ready to send