Skip to the content
ಬಲ ಮತ್ತು ಒತ್ತಡ
1. ಮೇಜಿನ ಮೇಲಿರುವ ಪುಸ್ತಕವನ್ನು ಚಲಿಸುವಂತೆ ಮಾಡಲು ನೀವು ಕೈಗೊಳ್ಳುವ ಕ್ರಿಯೆ
A] ತಳ್ಳುವುದು
B] ಎಳೆಯುವುದು
C] ಎತ್ತುವುದು
D] ಮೇಲಿನ ಯಾವುದೇ ಕ್ರಿಯೆ
2. ಒಬ್ಬ ಹುಡುಗನು ಒಂದು ಪೆಟ್ಟಿಗೆಯನ್ನು ತಳ್ಳುತ್ತಿದ್ದಾನೆ , ಅದರ ವೇಗವನ್ನು ಹೆಚ್ಚಿಸಲು ಆತನ ಸ್ನೇಹಿತನು ಯಾವದಿಕ್ಕಿನಲ್ಲಿ ಬಲಪ್ರಯೋಗಿಸಬೇಕು ?
A] ಹುಡುಗ ಪ್ರಯೋಗಿಸುವ ಬಲದ ದಿಕ್ಕಿಗೆ ವಿರುದ್ಧವಾಗಿ
B] ಹುಡುಗ ಪ್ರಯೋಗಿಸುವ ಬಲದ ದಿಕ್ಕಿನಲ್ಲಿಯೇ
C] ಪೆಟ್ಟಿಗೆಯ ಮೇಲ್ಭಾಗದಿಂದ
D] ಪೆಟ್ಟಿಗೆಯ ಪಕ್ಕದ ಬದಿಯಿಂದ
3. ಕಾಯದ ಮೇಲೆ ಬಲ ಪ್ರಯೋಗಿಸಿದಾಗ ಈ ಕೆಳಗಿನ ಯಾವುದರಲ್ಲಿ ಬದಲಾವಣೆ ಕಂಡುಬರುವುದಿಲ್ಲ
A] ಕಾಯದ ವೇಗ
B] ಚಲನೆಯ ದಿಕ್ಕು
C] ಕಾಯದ ಪ್ರಾಕೃತಿಕ ಗುಣ
D] ಕಾಯದ ಆಕಾರ
4. ಈ ಕೆಳಗಿನ ಯಾವುದು ಸಂಪರ್ಕಬಲ
A] ಘರ್ಷಣಾಬಲ
B] ಕಾಂತೀಯ ಬಲ
C] ಸ್ಥಾಯಿ ವಿದ್ಯುತ್ ಬಲ
D] ಗುರುತ್ವ ಬಲ
5. ಎರಡು ಕಾಯಗಳನ್ನು ಪರಸ್ಪರ ಹತ್ತಿರ ತಂದಾಗ ಅವು ವಿಕರ್ಷಿಸುತ್ತವೆ , ಈ ವಿಕರ್ಷಣೆಗೆ ಕಾರಣವಾದ ಬಲ
A] ಸ್ನಾಯುಬಲ
B] ಘರ್ಷಣಾಬಲ
C] ಕಾಂತೀಯ ಬಲ
D] ಗುರುತ್ವ ಬಲ
6. ಒರಟಾದ ಮೇಲ್ಮೈ ಮೇಲಿರುವ ಭಾರವಾದ ಪೆಟ್ಟಿಗೆಯೊಂದನ್ನು ತಳ್ಳಲಾಗುತ್ತಿದೆ , ಪೆಟ್ಟಿಗೆ ಮೇಲೆ ವರ್ತಿಸುತ್ತಿರುವ ಬಲಗಳು
A] ಸ್ನಾಯು ಬಲ ಮಾತ್ರ
B] ಘರ್ಷಣಾಬಲ ಮಾತ್ರ
C] ಸ್ನಾಯುಬಲ ಮತ್ತು ಘರ್ಷಣಾ ಬಲ
D] ಸ್ನಾಯುಬಲ , ಘರ್ಷಣಾಬಲ , ಗುರುತ್ವ ಬಲ
7. ಉಣ್ಣೆ ಬಟ್ಟೆಗೆ ಉಜ್ಜಿದ ಬಲೂನ್ ಗೋಡೆಗೆ ಅಂಟಿಕೊಳ್ಳುತ್ತದೆ , ಇದಕ್ಕೆ ಕಾರಣವಾದ ಬಲ
A] ಘರ್ಷಣಾಬಲ
B] ಕಾಂತೀಯ ಬಲ
C] ಸ್ಥಾಯಿ ವಿದ್ಯುತ್ ಬಲ
D] ಸ್ನಾಯು ಬಲ
8. ಕೆಳಗಿನ ಯಾವ ಸಂದರ್ಭದಲ್ಲಿ ಒತ್ತಡದ ಪ್ರಮಾಣ ಗರಿಷ್ಟವಾಗಿರುತ್ತದೆ
A] ಬಲ & ವಿಸ್ತೀರ್ಣ ಸಮವಿದ್ದಾಗ
B] ಬಲಕ್ಕಿಂತ ವಿಸ್ತೀರ್ಣ ಕಡಿಮೆ ಇದ್ದಾಗ
C] ಬಲಕ್ಕಿಂತ ವಿಸ್ತೀರ್ಣ ಹೆಚ್ಚು ಇದ್ದಾಗ
D] ಬಲ ಪ್ರಯೋಗಿಸದೆ ಇದ್ದಾಗ
9. ಈ ಕೆಳಗಿನ ನೀರಿನ ಸಂಗ್ರಾಹಕದಲ್ಲಿ ಯಾವ ಸ್ಥಾನದಲ್ಲಿ ನೀರಿನ ಒತ್ತಡ ಅಧಿಕವಾಗಿರುತ್ತದೆ
A] ಸ್ಥಾನ A
B] ಸ್ಥಾನ B
C] ಸ್ಥಾನ C
D] ಎಲ್ಲ ಸ್ಥಾನಗಳಲ್ಲಿ ಸಮಾನ ಒತ್ತಡ ಇರುತ್ತದದೆ
10. ವಾಯುಮಂಡಲವು ನಮ್ಮ ತಲೆಯ ಮೇಲೆ ವರ್ತಿಸುವ ಒತ್ತಡದ ಪ್ರಮಾಣ
A] 5 kg
B] 25kg
C] 225 kg
D] 1225 kg
Ready to send