Skip to the content
ಗುರುತ್ವ
1. ಕೆಳಗಿನ ಯಾವ ಸಂದರ್ಭವು ಗುರುತ್ವ ಬಲದ ಪರಿಣಾಮವನ್ನು ವಿವರಿಸುವುದಿಲ್ಲ
A] ಸೂರ್ಯನ ಸುತ್ತ ಭೂಮಿಯ ಚಲನೆ
B] ಸಾಗರದಲ್ಲಿ ಉಂಟಾಗುವ ಉಬ್ಬರ ಇಳಿತಗಳು
C] ಕಾಂತವು ಕಬ್ಬಿಣದ ತುಂಡನ್ನು ತನ್ನತ್ತ ಆಕರ್ಷಿಸುವುದು
D] ಭೂಮಿಯ ಸುತ್ತ ಚಂದ್ರನ ಚಲನೆ
2. ಎರಡು ವಸ್ತುಗಳ ನಡುವಿನ ದೂರವನ್ನು ಅರ್ಧದಷ್ಟು ಕಡಿಮೆ ಗೊಳಿಸಿದಾಗ ಅವುಗಳ ನಡುವಿನ ಗುರುತ್ವ ಬಲವು -
A] ಅರ್ಧದಷ್ಟು ಕಡಿಮೆಯಾಗುತ್ತದೆ
B] ಸ್ಥಿರವಾಗಿರುತ್ತದೆ
C] ಎರಡು ಪಟ್ಟು ಹೆಚ್ಚಾಗುತ್ತದೆ
D] ನಾಲ್ಕು ಪಟ್ಟು ಹೆಚ್ಚಾಗುತ್ತದೆ
3. ಕಾಯಗಳ ನಡುವಿನ ದೂರ ಸ್ಥಿರವಾಗಿದ್ದು ಅವುಗಳ ರಾಶಿಯನ್ನು ಅರ್ಧದಷ್ಟು ಕಡಿಮೆ ಮಾಡಿದಾಗ ಅವುಗಳ ನಡುವಿನ ಗುರುತ್ವ ಬಲವು -
A] ನಾಲ್ಕು ಪಟ್ಟು ಕಡಿಮೆಯಾಗುತ್ತದೆ
B] ಅರ್ಧದಷ್ಟಾಗುತ್ತದೆ
C] ಅಷ್ಟೇ ಇರುತ್ತದೆ
D] ಎರಡು ಪಟ್ಟುಹೆಚ್ಚಾಗುತ್ತದೆ
4. ಗುರುತ್ವ ಬಲದ ಪರಿಣಾಮವಾಗಿ ಚಂದ್ರನು ಭೂಮಿಯಸುತ್ತ ಸುತ್ತುತ್ತಾನೆ .ಭೂಮಿಯು ಚಂದ್ರನ ಮೇಲೆ ವರ್ತಿಸುವ ಬಲ F1 , ಹಾಗೂ ಚಂದ್ರ ಭೂಮಿಯ ಮೇಲೆ ವರ್ತಿಸುವ ಬಲ F2 ಆದರೆ -
A] F1 ಗಿಂತ F2 ಅಧಿಕವಾಗಿರುತ್ತದೆ
B] F2 ಗಿಂತ F1 ಅಧಿಕವಾಗಿರುತ್ತದೆ
C] F1 ಮತ್ತು F2 ಎರಡೂ ಸಮವಾಗಿರುತ್ತವೆ
D] F2 ಗಿಂತ F1 ಸ್ವಲ್ಪ ಅಧಿಕವಾಗಿರುತ್ತದೆ
5. ಈ ಕೆಳಗೆ ವಿಶ್ವವ್ಯಾಪಿ ಗುರುತ್ವ ನಿಯಮದ ಸೂತ್ರ ನೀಡಲಾಗಿದೆ , ಈ ಸೂತ್ರದಲ್ಲಿ G ನ ಬೆಲೆಯು
A] ಯಾವಾಗಲೂ ಸ್ಥಿರವಾಗಿರುತ್ತದೆ
B] ಕಾಯದ ರಾಶಿಯನ್ನು ಅವಲಂಬಿಸಿರುತ್ತದೆ
C] ಕಾಯಗಳ ನಡುವಿನ ದೂರವನ್ನು ಅವಲಂಬಿಸಿರುತ್ತದೆ
D] ಕಾಯದ ಸ್ವಭಾವಗಳನ್ನು ಅವಲಂಬಿಸಿರುತ್ತದೆ
6. ಎರಡು ಕಾಯಗಳನ್ನು ನಿರ್ಧಿಷ್ಟ ಎತ್ತರದಿಂದ ಸ್ವತಂತ್ರವಾಗಿ ಬೀಳುವಂತೆ ಮಾಡಿದಾಗ ಅವು ಏಕಕಾಲಕ್ಕೆ ಭೂಮಿಯನ್ನು ತಲುಪುತ್ತವೆ . ಆದರೆ ಒಂದು ಕಾಗದದ ಹಾಳೆ ಹಾಗೂ ಚೆಂಡನ್ನು ಏಕಕಾಲಕ್ಕೆ ಕೆಳಗೆ ಬಿಟ್ಟಾಗ ಚೆಂಡು ಮೊದಲು ಭೂಮಿಯನ್ನು ತಲುಪುತ್ತದೆ ಕಾರಣ -
A] ಚೆಂಡಿನ ರಾಶಿ ಹೆಚ್ಚು
B] ಚೆಂಡಿನ ಮೇಲೆ ವರ್ತಿಸುವ ಗುರುತ್ವ ಬಲ ಹೆಚ್ಚು
C] ಹಾಳೆಯ ಮೇಲೆ ವರ್ತಿಸುವ ಗುರುತ್ವ ಬಲ ಕಡಿಮೆ
D] ಹಾಳೆಯು ಗಾಳಿಯ ಪ್ರತಿರೋಧವನ್ನು ಅನುಭವಿಸುತ್ತದೆ
7. ಚಂದ್ರನ ಮೇಲಿನ ಒಂದು ವಸ್ತುವಿನ ತೂಕವು ಭೂಮಿಯ ಮೇಲಿನ ಅದರ ತೂಕದ 1/6 ನಷ್ಟಿರುತ್ತದೆ . ಭೂಮಿಯ ಮೇಲೆ ಒಂದು ವಸ್ತುವಿನ ತೂಕವು 72 N ಆಗಿದ್ದರೆ , ಚಂದ್ರನ ಮೇಲೆ ಅದರ ತೂಕ -
A] 72 N
B] 12 N
C] 36 N
D] 2 N
8. ಈ ಕೆಳಗಿನ ಯಾವ ಕಾಯವು ಮೇಲ್ಮೈ ಮೇಲೆ ಹೆಚ್ಚು ಒತ್ತಡ ಉಂಟುಮಾಡುತ್ತದೆ
A] ಕಾಯ A
B] ಕಾಯ B
C] ಕಾಯ C
D] ಎಲ್ಲ ಕಾಯಗಳು ಸ್ಥಿರ ಒತ್ತಡ ಉಂಟು ಮಾಡುತ್ತವೆ
9. ಒಂದು ಕಾಯದ ತೂಕವು 18 N ಇದೆ . ಅದನ್ನು ನೀರಿನಲ್ಲಿ ಮುಳುಗಿಸಿದಾಗ ಅದರ ತೂಕ 16 N ಆಗಿದೆ. ಹಾಗಾದರೆ ಕಾಯವನ್ನು ನೀರಿನಲ್ಲಿ ಮುಳುಗಿಸಿದಾಗ ಅದು ಹೊರಚೆಲ್ಲಿದ ನೀರಿನ ತೂಕವು -
A] 2 N
B] 4 N
C] 16 N
D] 18 N
10. ಮೂರು ದ್ರವಗಳ ಸಾಂದ್ರತೆ ಕ್ರಮವಾಗಿ d1 , d2 ಮತ್ತು d3 ಆಗಿದೆ. ಈ ದ್ರವಗಳಲ್ಲಿ ವಸ್ತವೊಂದನ್ನು ಹಾಕಿದಾಗ ಮೊದಲನೆ ದ್ರವದಲ್ಲಿ ಸಂಪೂರ್ಣವಾಗಿ ಮುಳುಗುತ್ತದೆ , ಎರಡನೇ ದ್ರವದಲ್ಲಿ ಅರ್ಧದಷ್ಟು ಮುಳುಗುತ್ತದೆ ಹಾಗೂ ಮೂರನೇ ದ್ರವದಲ್ಲಿ ತೇಲುತ್ತದೆ . ಈ ದ್ರವಗಳ ಸಾಂದ್ರತೆಯನ್ನು ಏರಿಕೆಯ ಕ್ರಮದಲ್ಲಿ ಬರೆದಾಗ -
A] d1 > d2 > d3
B] d1 < d2 < d3
C] d3 > d1 > d2
D] d2 > d1 > d3
Ready to send