Skip to the content
ಕೆಲಸ ಮತ್ತು ಶಕ್ತಿ
1. ಕೆಳಗಿನ ಯಾವ ಸಂದರ್ಭದಲ್ಲಿ ಕೆಲಸ ನಡೆದಿದೆ ಎಂದು ಹೇಳುವಿರಿ
A] ವ್ಯಕ್ತಿಯು ಮೇವಿನ ಹೊರೆಯನ್ನು ತಲೆಯ ಮೇಲೆ ಹೊತ್ತು ನಿಂತಿದ್ದಾನೆ
B] ಮಹಿಳೆಯು ನೀರಿನ ಕೊಡವನ್ನು ತಲೆಯ ಮೇಲೆ ಹೊತ್ತು ನಿಂತಿದ್ದಾಳೆ
C] ಎತ್ತುಗಳು ಚಕ್ಕಡಿಯನ್ನು ಎಳೆಯುತ್ತಿವೆ
D] ವ್ಯಕ್ತಿಯು ಗೋಡೆಯನ್ನು ತಳ್ಳುತ್ತಿದ್ದಾನೆ
2. ಒಬ್ಬ ವ್ಯಕ್ತಿಯು ಒಂದು ಕಾಯದ ಮೇಲೆ 5 N ಬಲ ಪ್ರಯೋಗಿಸಿದಾಗ ಅದು 10 M ದೂರ ಚಲಿಸುತ್ತದೆ . ಇಲ್ಲಿ ನಡೆದ ಕೆಲಸ ಎಷ್ಟು ?
A] 15 J
B] 25 J
C] 50 J
D] 100 J
3. ಎತ್ತರದಿಂದ ಕಾಯವೊಂದು ಸ್ವತಂತ್ರವಾಗಿ ಬೀಳುತ್ತಿದೆ , ಅದು ಭೂಮಿಗೆ ಹತ್ತಿರ ಬಂದಾಗ -
A] ಹೆಚ್ಚು ಪ್ರಚ್ಛನ್ನ ಶಕ್ತಿ ಹಾಗೂ ಕಡಿಮೆ ಚಲನ ಶಕ್ತಿ ಹೊಂದಿರುತ್ತದೆ
B] ಹೆಚ್ಚು ಚಲನ ಶಕ್ತಿ ಹಾಗೂ ಕಡಿಮೆ ಪ್ರಚ್ಛನ್ನ ಶಕ್ತಿ ಹೊಂದಿರುತ್ತದೆ
C] ಕೇವಲ ಪ್ರಚ್ಛನ್ನ ಶಕ್ತಿಯನ್ನು ಹೊಂದಿರುತ್ತದೆ
D] ಕೇವಲ ಚಲನ ಶಕ್ತಿಯನ್ನು ಹೊಂದಿರುತ್ತದೆ
4. ಧ್ವನಿವರ್ಧಕದಲ್ಲಾಗುವ ಶಕ್ತಿಯ ಪರಿವರ್ತನೆಯ ವಿಧ
A] ವಿದ್ಯುತ್ ಶಕ್ತಿಯು ಶಬ್ದ ವಾಗಿ ಬದಲಾಗುವುದು
B] ಶಬ್ದವು ವಿದ್ಯುತ್ ಶಕ್ತಿಯಾಗಿ ಬದಲಾಗುವುದು
C] ಶಬ್ದವು ಯಾಂತ್ರಿಕ ಶಕ್ತಿಯಾಗಿ ಬದಲಾಗುವುದು
D] ಯಾಂತ್ರಿಕ ಶಕ್ತಿಯು ಶಬ್ದವಾಗಿ ಬದಲಾಗುವುದು
5. ಚಲಿಸುತ್ತಿರುವ ಕಾರಿನ ವೇಗವನ್ನು ದ್ವಿಗುಣಗೊಳಿಸಿದಾಗ ಅದರ ಚಲನಶಕ್ತಿಯು -
A] ಎರಡರಷ್ಟು ಹೆಚ್ಚಾಗುತ್ತದೆ
B] ನಾಲ್ಕರಷ್ಟು ಹೆಚ್ಚಾಗುತ್ತದೆ
C] ಅರ್ಧದಷ್ಟಾಗುತ್ತದೆ
D] ಮೊದಲಿನಷ್ಟೇ ಇರುತ್ತದೆ
6. ಒಂದು ಕಾಯದ ಪ್ರಚ್ಛನ್ನ ಶಕ್ತಿಯು -
A] ಅದರ ಸ್ಥಾನವನ್ನು ಅವಲಂಬಿಸಿರುತ್ತದೆ
B] ಅದರ ವಿನ್ಯಾಸವನ್ನು ಅವಲಂಬಿಸಿರುತ್ತದೆ
C] ಅದರ ಸ್ಥಾನ & ವಿನ್ಯಾಸ ಎರಡನ್ನೂ ಅವಲಂಬಿಸಿರುತ್ತದೆ
D] ಅದರ ರಾಶಿ & ವೇಗಗಳನ್ನು ಅವಲಂಬಿಸಿರುತ್ತದೆ
7. ಸಮ ವೇಗದಿಂದ ಚಲಿಸುತ್ತಿರುವ ಬೈಕ್ , ಕಾರ & ಲಾರಿ ಇವುಗಳಲ್ಲಿ ಯಾವುದರ ಚಲನ ಶಕ್ತಿ ಹೆಚ್ಚು
A] ಬೈಕ್
B] ಕಾರು
C] ಲಾರಿ
D] ಮೂರು ಸಮಾನ ಚಲನ ಶಕ್ತಿ ಹೊಂದಿವೆ
8. ಕೆಲಸ ನಡೆದಿದೆ ಎಂದು ಹೇಳಬಾಕಾದರೆ -
A] ಕಾಯದ ಮೇಲೆ ಬಲ ಪ್ರಯೋಗವಾಗಿರಬೇಕು
B] ಕಾಯವು ಸ್ಥಾನಪಲ್ಲಟ ಗೊಂಡಿರಬೇಕು
C] A ಮತ್ತು B
D] A ಅಥವಾ B
9. ಕೆಳಗಿನ ಯಾವುದು ಪ್ರಚ್ಛನ್ನ ಶಕ್ತಿಗೆ ಉದಾಹರಣೆಯಾಗಿದೆ
A] ಆಣೆಕಟ್ಟಿನಲ್ಲಿ ಸಂಗ್ರಹಿಸಿದ ನೀರು
B] ಸಿಲಿಂಡರ್ ಗಳಲ್ಲಿ ಸಂಗ್ರಹಿಸಿದ ಅನಿಲ
C] ಕೀಲಿಕೊಟ್ಟ ಆಟಿಕೆ ಗೊಂಬೆ
D] ಮೇಲಿನ ಎಲ್ಲವೂ ಸರಿ
10. ಕೆಳಗಿನ ಯಾವುದು ಸಾಮರ್ಥ್ಯದ ಮೂಲಮಾನ ಅಲ್ಲ -
A] Nm/s
B] J/s
C] ವ್ಯಾಟ್ (W)
D] kWh
Ready to send