Skip to the content
ಶಬ್ದ
1. ಈ ಕೆಳಗಿನ ಯಾವ ವಸ್ತುವಿನಲ್ಲಿ ಶಬ್ದದ ವೇಗ ಗರಿಷ್ಟವಾಗಿರುತ್ತದೆ ?
A] ಗಾಳಿ
B] ನೀರು
C] ಗಾಜು
D] ಕಬ್ಬಿಣ
2. ಮಾಧ್ಯಮದ ತಾಪ ಹೆಚ್ಚಾದಂತೆ ಮಾಧ್ಯಮದಲ್ಲಿನ ಶಬ್ದದ ವೇಗವು -
A] ಹೆಚ್ಚಾಗುತ್ತದೆ
B] ಕಡಿಮೆಯಾಗುತ್ತದೆ
C] ಸ್ಥಿರವಾಗಿರುತ್ತದೆ
D] ಮೊದಲು ಹೆಚ್ಚಾಗಿ ಕ್ರಮೇಣ ಕಡಿಮೆಯಾಗುತ್ತದೆ
3. TV ಯಲ್ಲಿ ನಾವು ಶಬ್ದದ ಪ್ರಮಾಣವನ್ನು ಹೆಚ್ಚಿಸಿದಾಗ ಈ ಕೆಳಗಿನ ಶಬ್ದದ ಗುಣಲಕ್ಷಣಗಳಲ್ಲಿ ಯಾವುದು ಬದಲಾಗುತ್ತದೆ
A] ಶಬ್ದದ ಆವೃತ್ತಿ
B] ಶಬ್ದದ ಪಾರ
C] ಶಬ್ದದ ವೇಗ
D] ಶಬ್ದದ ತರಂಗ ದೂರ
4. ಈ ಕೆಳಗಿನ ಯಾವ ಆವೃತ್ತಿಯ ಶಬ್ದವನ್ನು ಮಾನವ ಕೇಳಬಲ್ಲವನಾಗಿದ್ದಾನೆ
A] 5 Hz
B] 15 Hz
C] 300 Hz
D] 30000 Hz
5. ಶಬ್ದದ ಅನುರಣನ ಅನ್ವಯಿಸಿ ಬಳಸಲಾಗುತ್ತಿರುವ ಸಾಧನ
A] ಸ್ಟೆಥೋಸ್ಕೋಪ್
B] TV
C] ಸೋನಾರ್
D] ಸ್ಕ್ಯಾನರ್
6. ಈ ಕೆಳಗಿನ ತರಂಗದಲ್ಲಿ ತರಂಗದೂರವನ್ನು ಪ್ರತಿನಿಧಿಸುವುದು -
A] AC
B] AE
C] BD
D] AB
7. ಪ್ರತಿಧ್ವನಿ ಉಂಟಾಗಬೇಕಾದರೆ ಕೇಳುಗ ಹಾಗೂ ಪ್ರತಿಫಲಿಸುವ ಮೇಲ್ಮೈ ಇವುಗಳ ನಡುವಿನ ದೂರು
A] 5 m ನಷ್ಟು
B] 10 m ನಷ್ಟು
C] 17 m ಗಿಂತ ಕಡಿಮೆ
D] 17 m ಗಿಂತ ಹೆಚ್ಚು
8. ಕೆಳಗಿನ ಯಾವ ಸಂದರ್ಭಗಳಲ್ಲಿ ಶ್ರವಣಾತೀತ ತರಂಗಗಳನ್ನು ಬಳಸುವುದಿಲ್ಲ
A] ಲೋಹದ ಅಚ್ಚುಗಳಲ್ಲಿನ ಬಿರುಕಗಳನ್ನು ಪತ್ತೆಹಚ್ಚಲು
B] ಯಂತ್ರಗಳಿಗೆ ಬಣ್ಣಗಳನ್ನು ಲೇಪಿಸಲು
C] ಯಂತ್ರಗಳಲ್ಲಿನ ದೋಷ ಪತ್ತೆ ಹಚ್ಚಲು
D] ಯಂತ್ರಗಳ ಬಿಡಿಭಾಗಗಳಲ್ಲಿನ ಕೊಳೆ (ಜಿಡ್ಡು) ತೆಗೆದುಹಾಕಲು
9. ಸೋನಾರ್ ಸಾಧನದಿಂದ ಕಳುಹಿಸಲ್ಪಟ್ಟ ಶ್ರವಣಾತೀತ ತರಂಗಗಳು ಸಾಗರದ ತಳವನ್ನು ಪ್ರತಿಫಲಿಸಿ ಬರಲು 4 ಸೆಕೆಂಡ್ ಕಾಲ ತೆಗೆದುಕೊಂಡರೆ ಸಾಗರದ ಆಳ ಎಷ್ಟು ? [ ಸಮುದ್ರ ನೀರಿನಲ್ಲಿ ಶಬ್ದದ ಜವ = 1500 m/s ]
A] 750 ಮೀಟರ್
B] 1500 ಮೀಟರ್
C] 3000 ಮೀಟರ್
D] 4500 ಮೀಟರ್
10. ಮಾನವನ ಕಿವಿಯಲ್ಲಿ ಶಬ್ದದಿಂದ ಉಂಟಾದ ಕಂಪನಗಳನ್ನು ವಿದ್ಯುತ್ ಸಂಕೇತಗಳಾಗಿ ಪರಿವರ್ತಿಸುವಭಾಗ
A] ಕಿವಿಯ ಆಲಿಕೆ
B] ತಮಟೆ
C] ಮಧ್ಯಕಿವಿಯ ಮೂಳೆಗಳು
D] ಕಾಕ್ಲಿಯಾ
Ready to send