Skip to the content
ನಾವು ಏಕೆ ಕಾಯಿಲೆ ಬೀಳುತ್ತೇವೆ ?
1. ಉತ್ತಮ ಆರೋಗ್ಯಕ್ಕೆ ಕಾರಣವಾಗಿರುವ ಅಂಶ
A] ವೈಯಕ್ತಿಕ ಶುಚಿತ್ವ
B] ಸುತ್ತಲಿನ ಪರಿಸರದ ನೈರ್ಮಲ್ಯ
C] A ಅಥವಾ B
D] A ಮತ್ತು B
2. ಉತ್ತಮ ಆರೋಗ್ಯ ಹೊಂದಲು ಕೆಳಗಿನ ಯಾವ ಹವ್ಯಾಸವು ಒಳ್ಳೆಯದಲ್ಲ
A] ನಿಯಮಿತ ವ್ಯಾಯಾಮ
B] ಕರಿದ ಪದಾರ್ಥಗಳ ಅತಿಯಾದ ಸೇವನೆ
C] ಊಟಕ್ಕೆ ಮುಂಚೆ ಕೈ ಹಾಗೂ ತಟ್ಟೆಗಳನ್ನು ತೊಳೆದುಕೊಳ್ಳುವುದು
D] ಶುದ್ಧೀಕರಿಸಿದ ನೀರನ್ನು ಸೇವಿಸುವುದು
3. ಸಾಮಾಜಿಕ ಆರೋಗ್ಯ ಕಾಪಾಡಲು ನೀವು ಕೆಳಗಿನ ಯಾವ ಕಾರ್ಯವನ್ನು ನಿರಾಕರಿಸುತ್ತಿರಾ
A] ನದಿ ನೀರಿನಲ್ಲಿ ಬಟ್ಟೆ ತೊಳೆಯುವುದು
B] ಮನೆಯ ಸುತ್ತ ಸೊಳ್ಳೆಗಳು ಬೆಳೆಯದಂತೆ ನೋಡಿಕೊಳ್ಳುವುದು
C] ಬಯಲು ವಿಸರ್ಜನೆ ಬದಲು ಶೌಚಾಲಯ ಬಳಸುವುದು
D] ಸಾವಯವ ಕೃಷಿ ವಿಧಾನ ಬಳಸುವುದು
4. ಕೆಳಗಿನ ಯಾವ ಕಾಯಿಲೆಯು ಸೊಳ್ಳೆಗಳಿಂದ ಪ್ರಸಾರವಾಗುವುದಿಲ್ಲ
A] ಮಲೇರಿಯಾ
B] ಡೆಂಗ್ಯೂ
C] ಚಿಕುನ್ ಗುನ್ಯ
D] ನ್ಯುಮೋನಿಯಾ
5. ಕೆಳಗಿನ ಯಾವ ವ್ಯಕ್ತಿಯ ಸಂಪರ್ಕಕ್ಕೆ ಬಂದಾಗ ನೀವು ರೋಗಕ್ಕೆ ಒಳಗಾಗುವ ಸಂಭವ ಹೆಚ್ಚು -
A] ಅಧಿಕ ರಕ್ತದೊತ್ತಡ ಇರುವ ವ್ಯಕ್ತಿ
B] ಕ್ಯಾನ್ಸರ್ ಪೀಡಿತ ವ್ಯಕ್ತಿ
C] ನೆಗಡಿ & ಕೆಮ್ಮು ಇರುವ ವ್ಯಕ್ತಿ
D] ಸಕ್ಕರೆ ಕಾಯಿಲೆ ಇರುವ ವ್ಯಕ್ತಿ
6. ಕ್ಷಯ ರೋಗಕ್ಕೆ ಕಾರಣವಾದ ಸೂಕ್ಷ್ಮಜೀವಿಗಳು ಮಾನವನ ಈ ಅಂಗವನ್ನು ಹಾಳುಮಾಡುತ್ತವೆ
A] ಶ್ವಾಸಕೋಶ
B] ಯಕೃತ್
C] ಸಣ್ಣ ಕರುಳು
D] ಮೆದುಳು
7. ಕೆಳಗಿನ ಯಾವ ಕಾಯಿಲೆಯು ಸಾಂಕ್ರಾಮಿಕವಲ್ಲ -
A] ಮಲೇರಿಯಾ
B] ರಾತ್ರಿ ಕುರುಡು
C] ನ್ಯಮೋನಿಯಾ
D] ಕಾಮಾಲೆ
8. ಆ್ಯಂಟಿಬಯೋಟಿಕ್ ಔಷಧಗಳ ಅತಿಯಾದ ಸೇವನೆ ಒಳ್ಳೆಯದಲ್ಲ , ಕಾರಣ
A] ಇವು ಹಾನಿಕಾರಕ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತವೆ
B] ದೇಹದ ಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತವೆ
C] ಇವು ಉಪಯುಕ್ತ ಸೂಕ್ಷ್ಮಜೀವಿಗಳನ್ನೂ ಸಹ ಕೊಲ್ಲುತ್ತವೆ
D] ಇವು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿವೆ
9. ಬ್ಯಾಕ್ಟೀರಿಯಾಗಳನ್ನು ನಿರೋಧಿಸುವ ಔಷಧಗಳನ್ನು ತಯಾರಿಸುವುದಕ್ಕಿಂತ ವೈರಸ್ ಗಳನ್ನು ನಿರೋಧಿಸುವ ಔಷಧಗಳನ್ನು ತಯಾರಿಸುವುದು ಅತ್ಯಂತ ಕಷ್ಟಕರವಾಗಿದೆ. ಕಾರಣ
A] ಅವು ತಮ್ಮ ಸುತ್ತ ರಕ್ಷಣಾತ್ಮಕ ಹೊದಿಕೆ ಹೊಂದಿವೆ
B] ಅವು ಸಜೀವ ಹಾಗೂ ನಿರ್ಜೀವ ಲಕ್ಷಣಗಳೆರಡನ್ನೂ ಹೊಂದಿವೆ
C] ಅವು ತಮ್ಮ ಜೀವನ ಕ್ರಿಯೆಗಳಿಗೆ ನಮ್ಮ ದೇಹದ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತವೆ
D] ಅವು ತಮ್ಮ ಸ್ವಂತ ಜೀವರಾಸಾಯನಿಕಗಳನ್ನು ಉತ್ಪಾದಿಸಬಲ್ಲವು
10. ಪೋಲಿಯೋ ಲಸಿಕೆಯು ಇದನ್ನು ಒಳಗೊಂಡಿದೆ
A] ದುರ್ಬಲ ಗೊಳಿಸಿದ ಪೋಲಿಯೋ ವೈರಸ್ ಗಳು
B] ಪ್ರಬಲ ಪೋಲಿಯೋ ವೈರಸ್ ಗಳು
C] ಪೋಲಿಯೋ ವೈರಸ್ ಗಳನ್ನು ಕೊಲ್ಲುವ ರಾಸಾಯನಿಕಗಳು
D] ಆ್ಯಂಟಿಬಯೋಟಿಕ್ ಔಷಧ
Ready to send