Skip to the content
ನೈಸರ್ಗಿಕ ಸಂಪನ್ಮೂಲಗಳು
1. ಒಂದು ಪ್ರದೇಶದ ಮಳೆಯ ಮಾದರಿಯನ್ನು ನಿರ್ಧರಿಸುವ ಅಂಶ
A] ಆ ಪ್ರದೇಶದ ಅಂತರ್ಜಲದ ಮಟ್ಟ
B] ಆ ಪ್ರದೇಶದಲ್ಲಿರುವ ನೀರಿನ ಮೂಲಗಳು
C] ಆ ಪ್ರದೇಶದಲ್ಲಿನ ಮಾರುತಗಳು
D] ಆ ಪ್ರದೇಶದ ಜನಸಾಂದ್ರತೆ
2. ಕೆಳಗಿನ ಯಾವ ಬದಲಾವಣೆಯು ಜಲಮಾಲಿನ್ಯವನ್ನು ಉಂಟುಮಾಡುವುದಿಲ್ಲ
A] ನೀರಿಗೆ ಅನಪೇಕ್ಷಿತ ವಸ್ತುಗಳನ್ನು ಸೇರಿಸುವುದು
B] ನೀರಿನ ಒತ್ತಡ ಹೆಚ್ಚಿಸುವುದು
C] ನೀರಿನ ತಾಪ ಹೆಚ್ಚಿಸುವುದು
D] ನೀರಿನ ಆಕರಗಳಲ್ಲಿನ ಅಪೇಕ್ಷಿತ ವಸ್ತುವನ್ನು ತೆಗೆದು ಹಾಕುವುದು
3. ನೀರಿನ ತಾಪದಲ್ಲಿ ಗಣನೀಯವಾಗಿ ಹೆಚ್ಚಾದಾಗ ಅದು ಜಲಚರ ಜೀವಿಗಳ ಮೇಲೆ ಬೀರುವ ಪರಿಣಾಮ
A] ಮೊಟ್ಟೆ ಇಡುವ ಕ್ರಿಯೆಯನ್ನು ಪ್ರತಿಬಂಧಿಸುತ್ತದೆ
B] ಪಚನ ಕ್ರಿಯೆಯನ್ನು ಉತ್ತೇಜಿಸುತ್ತದೆ
C] ಸಸ್ಯಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ
D] ಪೋಷಕಾಂಶಗಳ ಲಭ್ಯತೆ ಹೆಚ್ಚುತ್ತದೆ
4. ಬಂಡೆಗಳ ಶಿಥಲೀಕರಣದಿಂದ ಮಣ್ಣು ರೂಪಗೊಳ್ಳಲು ಸಹಾಯಕವಾಗುವ ಅಂಶ
A] ಸೂರ್ಯನ ಬಿಸಿಲು
B] ಮಳೆಯ ಪ್ರಮಾಣ
C] ಬಂಡೆಗಳ ಮೇಲೆ ಕಲ್ಲು ಹೂಗಳ ಬೆಳವಣಿಗೆ
D] ಮೇಲಿನ ಎಲ್ಲವೂ ಸರಿ
5. ಮಣ್ಣಿನ ಫಲವತ್ತತೆಯನ್ನು (ಗುಣಮಟ್ಟವನ್ನು) ನಾಶಮಾಡುವ ಪದಾರ್ಥಗಳು
A] ಮಣ್ಣಿಗೆ ಸೇರಿಸುವ ರಾಸಾಯನಿಕ ಗೊಬ್ಬರಗಳು
B] ಮಣ್ಣಿನಲ್ಲಿರುವ ಹ್ಯೂಮಸ್
C] ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳು
D] ಮಣ್ಣಿನಲ್ಲಿರುವ ಎರೆಹುಳಗಳು
6. ಕೆಳಗಿನ ಯಾವ ಪ್ರಕ್ರಿಯೆಯು ಕಾರ್ಬನ್ ಚಕ್ರದಲ್ಲಿ ಕಂಡುಬರುವುದಿಲ್ಲ
A] ದ್ಯುತಿಸಂಶ್ಲೇಷಣ ಕ್ರಿಯೆ
B] ಭಾಷ್ಪೀಕರಣ ಕ್ರಿಯೆ
C] ಉಸಿರಾಟ ಕ್ರಿಯೆ
D] ಫಾಸಿಲ್ ಇಂಧನಗಳ ದಹನ ಕ್ರಿಯೆ
7. ಕೆಳಗಿನ ಯಾವ ಅನಿಲಗಳ ಗುಂಪು ಹಸಿರುಮನೆ ಪರಿಣಾಮಕ್ಕೆ ಕಾರಣವಾಗಿವೆ
A] ಅಮೋನಿಯಾ , ಕಾರ್ಬನ್ ಮೊನಾಕ್ಸೈಡ್
B] ನೈಟ್ರೋಜನ್ ಆಕ್ಸೈಡ್ , ಸಲ್ಫರ್ ಆಕ್ಸೈಡ್
C] ಮೀಥೇನ್ , ಕಾರ್ಬನ್ ಡೈ ಆಕ್ಸೈಡ್
D] ಅಮೋನಿಯಾ , ಓಝೋನ್
8. ಪ್ರಸ್ತುತ ಜಾಗತಿಕ ಪರಿಸರದ ಮೇಲೆ ಪರಿಣಾಮ ಬೀರುತ್ತಿರುವ ಜ್ವಲಂತ ಸಮಸ್ಯೆ ಎಂದರೆ-
A] ಹಸಿರು ಮನೆ ಪರಿಣಾಮ
B] ಜಾಗತಿಕ ತಾಪಮಾನದ ಹೆಚ್ಚಳ
C] ಓಝೋನ್ ಪದರು ತೆಳುವಾಗುವಿಕೆ
D] ಮೇಲಿನ ಎಲ್ಲವು ಸರಿ
9. ಓಝೋನ್ ಪದರಿನ ಸವೆತಕ್ಕೆ ಕಾರಣವಾದ ಮಾಲಿನ್ಯಕಾರಕಗಳು -
A] ವಾಹನಗಳು ಹೊರಸೂಸುವ ಹೊಗೆ
B] ಫಾಸಿಲ್ ಇಂಧನಗಳ ದಹನ ಉತ್ಪನ್ನಗಳು
C] ಕ್ಲೋರೋಫ್ಲೋರೋ ಕಾರ್ಬನ್ ಗಳ ಅತಿಯಾದ ಬಳಕೆ
D] ಕೈಗಾರಿಕೆಗಳು ಹೊರಸೂಸುವ ಹೊಗೆ
10. ವಾತಾವರಣದಲ್ಲಿನ ಮುಕ್ತ ರೂಪದ ನೈಟ್ರೋಜನ್ ಅನ್ನು ಸ್ಥಿರೀಕರಿಸುವ ರೈಜೋಬಿಯಂ ಬೆಕ್ಟೀರಿಯಾಗಳನ್ನು ಹೊಂದಿರುವ ಸಸ್ಯ
A] ಕಡಲೆ
B] ಗೋಧಿ
C] ಜೋಳ
D] ಭತ್ತ
Ready to send