Skip to the content
ನಮ್ಮ ಸುತ್ತಲಿನ ದ್ರವ್ಯಗಳು ಶುದ್ಧವೇ?
1. ಈ ಕೆಳಗಿನವುಗಳಲ್ಲಿ ಯಾವುದು ರಾಸಾಯನಿಕ ಬದಲಾವಣೆಯಾಗಿದೆ
A] ಮಂಜುಗಡ್ಡೆ ಕರಗುವುದು
B] ಕಬ್ಬಿಣ ತುಕ್ಕುಹಿಡಿಯುವುದು
C] ನೀರಿನಲ್ಲಿ ಉಪ್ಪನ್ನು ಕರಗಿಸುವುದು
D] ಕಬ್ಬಿಣವನ್ನು ತಂತಿಯಾಗಿ ಬದಲಾಯಿಸುವುದು
2. ಈ ದ್ರಾವಣದ ಮೂಲಕ ಬೆಳಕಿನ ಪುಂಜವನ್ನು ಹಾಯಿಸಿದಾಗ ಟಿಂಡಾಲ್ ಪರಿಣಾಮ ಗೋಚರಿಸುತ್ತದೆ.
A] ಸಕ್ಕರೆಯ ದ್ರಾವಣ
B] ಉಪ್ಪಿನ ದ್ರಾವಣ
C] ಹಾಲು
D] ಕಾಪರ್ ಸಲ್ಫೇಟ್ ದ್ರಾವಣ
3. ಒಂದೇ ಬಗೆಯ ಪರಮಾಣುಗಳುಳ್ಳ X ಎಂಬ ವಸ್ತು ಹೊಳಪನ್ನು ಹಾಗೂ ವಾಹಕತೆಯ ಗುಣ ಹೊಂದಿದೆ, ಆ ವಸ್ತುವು
A] ಉತ್ಪತನಗೊಳ್ಳುವ ವಸ್ತು
B] ಸಂಯುಕ್ತ ವಸ್ತು
C] ಅಲೋಹೀಯ ವಸ್ತು
D] ಲೋಹೀಯ ವಸ್ತು
4. 360 g ನೀರಿನಲ್ಲಿ 40 g ಉಪ್ಪನ್ನು ಬೆರೆಸಿ ತಯಾರಿಸಿದ ದ್ರಾವಣದ ಸಾರತೆ 10 % , ದ್ರಾವಣದ ಸಾರತೆಯನ್ನು 20 % ಗೆ ಹೆಚ್ಚಿಸಲು ಅಷ್ಟೇ ನೀರಿಗೆ ಸೇರಿಸಬೇಕಾದ ಉಪ್ಪಿಣ ಪ್ರಮಾಣ -
A] 60 g
B] 80 g
C] 120 g
D] 160 g
5. ಯಾವ ಎರಡು ಮಿಶ್ರಣದ ಘಟಕಗಳನ್ನು ಬೇರ್ಪಡಿಸಲು ಈ ಕೆಳಗಿನ ಸಾಧನವನ್ನು ಬಳಸುತ್ತಾರೆ
A] ಮಿಶ್ರಣಗೊಳ್ಳದ ಎರಡು ದ್ರವಗಳನ್ನು ಪ್ರತ್ಯೇಕಿಸಲು
B] ಬೆರಕೆಯಾಗುವ ಎರಡು ದ್ರವಗಳನ್ನು ಪ್ರತ್ಯೇಕಿಸಲು
C] ಭಿನ್ನ ಸಾಂದ್ರತೆಯ ಘಟಕಗಳನ್ನು ಪ್ರತ್ಯೇಕಿಸಲು
D] ಆವಿಶೀಲ ಘಟಕಗಳನ್ನು ಬೇರ್ಪಡಿಸಲು
6. ಸೋಡಿಯಂ ಕ್ಲೋರೈಡ್ ಮತ್ತು ಅಮೋನಿಯಂ ಕ್ಲೋರೈಡ್ ಗಳನ್ನು ಒಳಗೊಂಡಿರುವ ಮಿಶ್ರಣದಿಂದ ಅಮೋನಿಯಂ ಕ್ಲೋರೈಡ್ ಪ್ರತ್ಯೇಕಿಸಲು ಸೂಕ್ತವಾದ ವಿಧಾನ
A] ಅಸವನ ವಿಧಾನ
B] ಸೆಂಟ್ರಿಫ್ಯುಗೇಷನ್ ವಿಧಾನ
C] ಭಾಷ್ಪೀಕರಣ ವಿಧಾನ
D] ಉತ್ಪತನ ವಿಧಾನ
7. ಈ ಕೆಳಗಿನವುಗಳಲ್ಲಿ ಸಮರೂಪವಲ್ಲದ ಮಿಶ್ರಣ ಗುರುತಿಸಿ
A] ಸೋಡಾನೀರು
B] ಮಣ್ಣು ಮಿಶ್ರಿತ ನೀರು
C] ಉಪ್ಪು ಬೆರಸಿದ ನೀರು
D] ಸಕ್ಕರೆ ಬೆರೆಸಿದ ನೀರು
8. ಟಿಂಚರ್ ಐಯೋಡಿನ ಒಂದು ನಂಜು ನಿರೋಧಕ ದ್ರಾವಣ . ಇದನ್ನು ತಯಾರಿಲು ಐಯೋಡಿನ್ ಅನ್ನು ಇದರೊಂದಿಗೆ ಬೆರಸುತ್ತಾರೆ
A] ನೀರಿನಲ್ಲಿ
B] ಸೋಡಿಯಂ ಹೈಡ್ರಾಕ್ಸೈಡ್ ನಲ್ಲಿ
C] ಪೊಟ್ಯಾಷಿಯಂ ಅಯೋಡೈಡ್ ನಲ್ಲಿ
D] ಅಲ್ಕೋಹಾಲ್ ನಲ್ಲಿ
9. ಸಮರೂಪ ಮಿಶ್ರಣಗಳ ಲಕ್ಷಣಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಯನ್ನು ಗುರುತಿಸಿ
A] ಮಿಶ್ರಣದ ಘಟಕಗಳು ಬರಿಗಣ್ಣಿಗೆ ಕಾಣುತ್ತವೆ
B] ಮಿಶ್ರಣದ ಘಟಕಗಳು ಬರಿಗಣ್ಣಿಗೆ ಕಾಣುವುದಿಲ್ಲ
C] ಟಿಂಡಾಲ್ ಪರಿಣಾಮ ಉಂಟುಮಾಡುತ್ತದೆ
D] ಸೋಸುವಿಕೆ ವಿಧಾನದಿಂದ ಘಟಕಗಳನ್ನು ಬೇರ್ಪಡಿಸಬಹುದು
10. ಕೆಳಗಿನ ಯಾವ ಸಂದರ್ಭದಲ್ಲಿ ಸೆಂಟ್ರಿಫ್ಯುಗೇಷನ್ ವಿಧಾನವನ್ನು ಬಳಸುವುದಿಲ್ಲ
A] ಹಾಲಿನಿಂದ ಕೆನೆಯನ್ನು ಬೇರ್ಪಡಿಸಲು
B] ಒದ್ದೆ ಬಟ್ಟೆಯಿಂದ ನೀರನ್ನು ಹೊರತೆಗೆಯಲು
C] ರಕ್ತದಲ್ಲಿನ ಘಟಕಗಳನ್ನು ಬೇರ್ಪಡಿಸಲು
D] ಬಣ್ಣಗಳಲ್ಲಿನ ಘಟಕಗಳನ್ನು ಬೇರ್ಪಡಿಸಲು
Ready to send