Skip to the content
ಅಂಗಾಂಶಗಳು
1. ಈ ಕೆಳಗಿನ ಅಂಗಾಂಶದಲ್ಲಿನ ಜೀವಕೋಶಗಳು ನಿರ್ಜೀವಕೋಶಗಳಾಗಿವೆ.
a] ಪೇರಂಕೈಮ
b] ಕೋಲಂಕೈಮ
c] ಸ್ಕ್ಲೀರಂಕೈಮ
d] ಎಪಿಡರ್ಮಿಸ್
2. ಸಸ್ಯದ ಕಾಂಡದ ಸುತ್ತಳತೆಯು ಹೆಚ್ಚಾಗಲು [ದಪ್ಪ] ಕಾರಣವಾದ ವರ್ಧನ ಅಂಗಾಂಶ
a] ತುದಿ ವರ್ಧನ ಅಂಗಾಂಶ
b] ಪಾರ್ಶ್ವ ವರ್ಧನ ಅಂಗಾಂಶ
c] ಅಂತರಗೆಣ್ಣು ವರ್ಧನ ಅಂಗಾಂಶ
d] ಶಾಶ್ವತ ಅಂಗಾಂಶ
3. ಸಣ್ಣಕರಳು ಆಹಾರವನ್ನು ಹೀರಿಕೊಳ್ಳುತ್ತದೆ. ಯಾವ ವಿಧದ ಅನುಲೇಪಕ ಅಂಗಾಂಶವು ಈ ಕಾರ್ಯ ನಿರ್ವಹಿಸುತ್ತದೆ?
a] ಚಪ್ಪಟೆ ಅನುಲೇಪಕ ಅಂಗಾಂಶ
b] ಸ್ತರೀಕೃತ ಅನುಲೇಪಕ ಅಂಗಾಂಶ
c] ಸ್ತಂಭ ಅನುಲೇಪಕ ಅಂಗಾಂಶ
d] ಘನಾಕೃತಿ ಅನುಲೇಪಕ ಅಂಗಾಂಶ
4. ಕೆಳಗಿನವುಗಳಲ್ಲಿ ಯಾವುದು ಹೊರದರ್ಮದ [ಎಪಿಡರ್ಮಿಸ್] ಕಾರ್ಯವಲ್ಲ
a] ರಕ್ಷಣೆ
b] ಅನಿಲಗಳ ವಿನಿಮಯ
c] ನೀರಿನ ಸಾಗಾಣಿಕೆ
d] ಭಾಷ್ಪವಿಸರ್ಜನೆ
5. ಕೊಬ್ಬನ್ನು ಸಂಗ್ರಹಿಸುವ ಅಂಗಾಂಶ
a] ಅಡಿಪೋಸ್ ಅಂಗಾಂಶ
b] ಘನಾಕೃತಿ ಅನುಲೇಪಕ ಅಂಗಾಂಶ
c] ಮೂಳೆ ಹಾಗೂ ಮೃದ್ವಸ್ಥಿ ಅಂಗಾಂಶ
d] ಏರಿಯೋಲಾರ್ ಅಂಗಾಂಶ
6. ಜಲಸಸ್ಯಗಳಲ್ಲಿ ತೇಲಲು ಸಹಾಯಕವಾಗುವಂತೆ ಸಸ್ಯಗಳಿಗೆ ಸಂಪ್ಲವನ ಶಕ್ತಿ (buoyancy)ನೀಡುವ ಅಂಗಾಂಶ
a] ಏರಂಕೈಮ್
b] ಕೋಲಂಕೈಮ್
c] ಕ್ಲೋರಂಕೈಮ
d] ಪೇರಂಕೈಮ
7. ಸಸ್ಯಗಳಲ್ಲಿ ನೀರಿನ ನಷ್ಟ ಹಾಗೂ ಪರೋಪಜೀವಿ ಶಿಲೀಂದ್ರಗಳ ಆಕ್ರಮಣದಿಂದ ರಕ್ಷಿಸುವ ರಚನೆ
a] ಬೇರು ರೋಮಗಳು
b] ಪತ್ರರಂಧ್ರಗಳು
c] ಕ್ಯುಟಿಕಲ್ ಪದರು
d] ನಾಳಕೂರ್ಚಗಳು
8. ಸ್ರವಿಕೆ ಕಾರ್ಯವನ್ನು ನಿರ್ವಹಿಸುವ, ಗ್ರಂಥಿಗಳಲ್ಲಿ ಕಂಡುಬರುವ ಅನುಲೇಪಕ ಅಂಗಾಂಶ
a] ಚಪ್ಪಟೆ ಅನುಲೇಪಕ ಅಂಗಾಂಶ
b] ಸ್ತರೀಕೃತ ಅನುಲೇಪಕ ಅಂಗಾಂಶ
c] ಸ್ತಂಭ ಅನುಲೇಪಕ ಅಂಗಾಂಶ
d] ಘನಾಕೃತಿ ಅನುಲೇಪಕ ಅಂಗಾಂಶ
9. ಈ ಕೆಳಗಿನವುಗಳಲ್ಲಿ ಜೀವಿಯ ಇಚ್ಛೆಗೆ ಒಳಪಟ್ಟು ಕಾರ್ಯ ನಿರ್ವಹಿಸುವ ಸ್ನಾಯುಗಳು
a] ಹೃದಯದ ಸ್ನಾಯುಗಳು
b] ಚಲನಾಂಗಗಳಲ್ಲಿನ ಸ್ನಾಯುಗಳು
c] ಶ್ವಾಸಕೋಶದ ಸ್ನಾಯುಗಳು
d] ಜಠರದ ಸ್ನಾಯುಗಳು
10 . ನೆಲದಮೇಲೆ ಸಸ್ಯಗಳು ಬದುಕುಳಿಯಲು ಸಹಾಯಕವಾದ ಅಂಗಾಂಶವೆಂದರೆ -
a] ವರ್ಧನ ಅಂಗಾಂಶ
b] ವಾಹಕ ಅಂಗಾಂಶ
c] ಹೊರದರ್ಮ ಅಂಗಾಂಶ
d] ಶಾಶ್ವತ ಅಂಗಾಂಶ
11. ಕೆಳಗಿನ ಚಿತ್ರದಲ್ಲಿ ತೋರಿದಂತೆ ರಚನೆಯುಳ್ಳ ಜೀವಕೋಶಗಳು ಈ ಅಂಗಾಂಶದಲ್ಲಿ ಕಂಡುಬರುತ್ತವೆ.
a] ಅನುಲೇಪಕ ಅಂಗಾಂಶ
b] ಸ್ನಾಯು ಅಂಗಾಂಶ
c] ಮೂಳೆ ಹಾಗೂ ಮೃದ್ವಸ್ಥಿ ಅಂಗಾಂಶ
d] ನರ ಅಂಗಾಂಶ
12. ದ್ರವರೂಪದ ಮಾತೃಕೆಯನ್ನು ಹೊಂದಿರುವ ಅಂಗಾಂಶ -
a] ಅಡಿಪೋಸ್ ಅಂಗಾಂಶ
b] ರಕ್ತ ಹಾಗೂ ದುಗ್ಧರಸ
c] ಏರಿಯೋಲಾರ್ ಅಂಗಾಂಶ
d] ಮೃದ್ವಸ್ಥಿ ಅಂಗಾಂಶ
Ready to send