Skip to the content
ಬಲ ಮತ್ತು ಚಲನೆಯ ನಿಯಮಗಳು
1. ಬಲ ಪ್ರಯೋಗಿಸಿದಾಗ ಕಾಯದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಕೆಳಗೆ ನೀಡಲಾದ ಹೇಳಿಕೆಗಳಲ್ಲಿ ತಪ್ಪಾದ ಹೇಳಿಕೆ ಗುರುತಿಸಿ
A] ಕಾಯದ ವೇಗದಲ್ಲಿ ಬದಲಾವಾಣೆಯಾಗುತ್ತದೆ
B] ಕಾಯದ ಚಲನೆಯ ದಿಕ್ಕು ಬದಲಾಗುತ್ತದೆ
C] ಕಾಯದ ತಾಪ ಹೆಚ್ಚಾಗುತ್ತದೆ
D] ಕಾಯದ ಆಕಾರದಲ್ಲಿ ಬದಲಾಗುತ್ತದೆ
2. ಬಲೂನ್ ಅನ್ನು ನಿಮ್ಮ ಎರಡೂ ಕೈಗಳಿಂದ ಒತ್ತಿದಾಗ ಅದರ ಆಕಾರದಲ್ಲಿ ಬದಲಾವಣೆಯಾಗುತ್ತದೆ ಕಾರಣ -
A] ಬಲೂನಿನ ಮೇಲೆ ಸಂತುಲಿತ ಬಲಗಳು ವರ್ತಿಸುತ್ತವೆ
B] ಬಲೂನಿನ ಮೇಲೆ ಅಸಂತುಲಿತ ಬಲಗಳು ವರ್ತಿಸುತ್ತವೆ
C] ಬಲೂನಿನ ಮೇಲೆ ಘರ್ಷಣಾ ಬಲ ವರ್ತಿಸುತ್ತದೆ
D] ಬಲೂನಿನ ಮೇಲೆ ಗುರುತ್ವ ಬಲ ವರ್ತಿಸುತ್ತದೆ
3. ಕೆಳಗಿನವುಗಳಲ್ಲಿ ಹೆಚ್ಚು ಜಡತ್ವ ಹೊಂದಿರುವ ಕಾಯ
A] ಕಾರು
B] ಬಸ್ಸು
C] ಸೈಕಲ್
D] ಆಟಿಕೆ ಕಾರು
4. ನೆಲ ಹಾಸನ್ನು (ಕಾರ್ಪೆಟ್ )ದೊಣ್ಣೆಯಿಂದ ಬಡಿದಾಗ ಅದರಲ್ಲಿರುವ ಧೂಳು ಹೊರಬರುತ್ತದೆ ಕಾರಣ
A] ಗುರುತ್ವದ ಪರಿಣಾಮ
B] ಸಂವೇಗದ ಪರಿಣಾಮ
C] ಘರ್ಷಣಾ ಬಲದ ಪರಿಣಾಮ
D] ಜಡತ್ವದ ಪರಿಣಾಮ
5. ಕ್ರಿಕೆಟ್ ಆಟಗಾರನೊಬ್ಬನು ಚೆಂಡನ್ನು ಕ್ಯಾಚ್ ಹಿಡಿಯುವ ಮುನ್ನ ಕೈಯನ್ನು ಹಿಂದಕ್ಕೆ ಎಳೆದುಕೊಳ್ಳಲು ಕಾರಣ
A] ಚೆಂಡಿನ ಸಂವೇಗವನ್ನು ಕಡಿಮೆ ಮಾಡಲು
B] ಚಂಡಿನ ಸಂವೇಗವನ್ನು ಹೆಚ್ಚು ಮಾಡಲು
C] ಚೆಂಡಿನ ಮೇಲೆ ಅಧಿಕ ಬಲ ಪ್ರಯೋಗಿಸಲು
D] ಚೆಂಡಿನ ವೇಗೋತ್ಕರ್ಷ ಹೆಚ್ಚಿಸಲು
6. 2 kg ರಾಶಿಯ ಕಾಯವು 10 m/s ವೇಗವನ್ನು ಗಳಿಸಿಕೊಳ್ಳಲು ಅದರ ಮೇಲೆ ಪ್ರಯೋಗಿಸಬೇಕಾದ ಬಲ
A] 2 N
B] 5 N
C] 10 N
D] 20 N
7. ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ ಧರಿಸುವುದುಕಡ್ಡಾಯ , ಏಕೆಂದರೆ ತಕ್ಷಣ ಬ್ರೆಕ್ ಹಾಕಿದಾಗ ಪ್ರಯಾಣಿಕನು ಮುಂದಕ್ಕೆ ತಳ್ಳಲ್ಪಟ್ಟು ಗಾಯಗಳಾಗುವ ಸಂಭವವಿರುತ್ತದೆ. ಇದನ್ನು ಸಮರ್ಥಿಸುವ ನಿಯಮ -
A] ನ್ಯೂಟನ್ ಚಲನೆಯ ಮೊದಲನೇ ನಿಯಮ
B] ನ್ಯೂಟನ್ ಚಲನೆಯ ಎರಡನೇ ನಿಯಮ
C] ನ್ಯೂಟನ್ ಚಲನೆಯ ಮೂರನೇ ನಿಯಮ
D] ನ್ಯೂಟನ್ ನ ಗುರುತ್ವ ನಿಯಮ
8. ನ್ಯೂಟನ್ ನ ಚಲನೆಯ ಮೂರನೇ ನಿಯಮದನ್ವಯ ಕೆಳಗಿನ ಚಿತ್ರದಲ್ಲಿ A ಸ್ಪ್ರಿಂಗ್ ತ್ರಾಸಿನ ಸೂಚ್ಯಾಂಕ 15 kg ಆಗಿದ್ದರೆ , B ಸ್ಪ್ರಿಂಗ್ ತ್ರಾಸ ತೋರುವ ಸೂಚ್ಯಾಂಕವು -
A] 5 kg
B] 15 kg
C] 30 kg
D] 0 kg
9. ರಾಕೆಟ್ ಕಾರ್ಯ ನಿರ್ವಹಿಸುವ ತತ್ವವು ಈ ಕೆಳಗಿನ ಪರಿಮಾಣದ ಸಂರಕ್ಷಣೆಯಾಗಿದೆ -
A] ಜಡತ್ವ
B] ರಾಶಿ
C] ಸಂವೇಗ
D] ವೇಗ
10. ಚಲಿಸುತ್ತಿರುವ ರೈಲಿನಲ್ಲಿ ಪ್ರಯಾಣಿಕನು ನಾಣ್ಯವನ್ನು ಮೇಲಕ್ಕೆ ಚಿಮ್ಮಿದಾಗ ಅದು -
A] ಪುನಃ ಅವನ ಕೈ ಸೇರುತ್ತದೆ
B] ಅವನ ಹಿಂದೆ ಬೀಳುತ್ತದೆ
C] ಅವನ ಮುಂದೆ ಬೀಳುತ್ತದೆ
D] ಅವನ ಪಕ್ಕದಲ್ಲಿ ಬೀಳುತ್ತದೆ
Ready to send