Skip to the content
ಮಾನವನ ಕಣ್ಣು & ವರ್ಣಮಯ ಜಗತ್ತು
1. ಕಣ್ಣಿನ ಮಸೂರದ ಸಂಗಮದೂರದ ಬದಲಾವಣೆಯನ್ನು ನಿಯಂತ್ರಿಸುವ ರಚನೆ -
A] ಕಣ್ಣಿನ ಪಾಪೆ
B] ರೆಟಿನಾ
C] ಸಿಲಿಯೆರಿ ತಂತುಗಳು
D] ವರ್ಣಪಟಲ
2. ವರ್ಗಕೋಣೆಯ ಕೊನೆಯ ಬೆಂಚ್ ನಲ್ಲಿ ಕುಳಿತ ವಿದ್ಯಾರ್ಥಿಗೆ ಕಪ್ಪಹಲಗೆ ಮೇಲೆ ಬರೆದ ಅಕ್ಷರಗಳು ಸ್ಪಷ್ಟವಾಗಿ ಕಾಣುತ್ತವೆ ಆದರೆ ಆತನ ಬೆಂಚ್ ಮೇಲಿರುವ ಪುಸ್ತಕದಲ್ಲಿನ ಅಕ್ಷರಗಳು ಸ್ಪಷ್ಟವಾಗಿ ಕಾಣುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ -
A] ಕಣ್ಣಿನ ದೂರದ ಬಿಂದು ಅನಂತದಲ್ಲಿರುತ್ತದೆ
B] ಕಣ್ಣಿನ ದೂರದ ಬಿಂದು ಸಮೀಪದಲ್ಲಿರುತ್ತದೆ.
C] ಕಣ್ಣಿನ ಸಮೀಪಬಿಂದು ಸಾಮಾನ್ಯಕ್ಕಿಂತ ಹತ್ತಿರದಲ್ಲಿರುತ್ತದೆ.
D] ಕಣ್ಣಿನ ಸಮೀಪ ಬಿಂದು ಸಾಮಾನ್ಯಕ್ಕಿಂತ ದೂರದಲ್ಲಿರುತ್ತದೆ
3. ಕೆಳಗಿನವುಗಳಲ್ಲಿ ಕನ್ನಡಕಗಳಿಂದ ಸರಿಪಡಿಸಲಾಗದ ಕಣ್ಣಿನ ದೋಷವನ್ನು ಗುರುತಿಸಿ
A] ಮಯೋಪಿಯಾ
B] ಪ್ರೆಸ್ಬಿಯೋಪಿಯಾ
C] ಹೈಪರ್ ಮೆಟ್ರೋಪಿಯಾ
D] ಕ್ಯಾಟರಾಕ್ಟ್
4. ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಂದರ್ಭಗಳಲ್ಲಿ ಸೂರ್ಯನು ಕೆಂಪಾಗಿರಲು ಕಾರಣ-
A] ನೀಲಿ ಬಣ್ಣದ ಹೆಚ್ಚು ಚದುರುವಿಕೆ
B] ನೀಲಿ ಬಣ್ಣದ ಕಡಿಮೆ ಚದುರುವಿಕೆ
C] ಕೆಂಪು ಬಣ್ಣದ ಕಡಿಮೆ ಚದುರುವಿಕೆ
D] ಕೆಂಪು ಬಣ್ಣದ ಹೆಚ್ಚು ಚದುರುವಿಕೆ
5. ಆಕಾಶವು ನೀಲಿ ಬಣ್ಣದ್ದಾಗಿ ಕಾಣಲು ಕಾರಣ
A] ಇತರ ಬಣ್ಣಗಳು ನೀಲಿ ಹಾಗೂ ನೇರಳೆ ಬಣ್ಣಗಳಿಗಿಂತ ಹೆಚ್ಚು ಚದುರುತ್ತವೆ
B] ನೇರಳೆ ಹಾಗೂ ನೀಲಿ ಬಣ್ಣಗಳು ಇತರ ಬಣ್ಣಗಳಿಗಿಂತ ಹೆಚ್ಚು ಚದುರುತ್ತವೆ
C] ವಾತಾವರಣದಲ್ಲಿ ನೀಲಿ ಬಣ್ಣವು ಹೆಚ್ಚು ಹೀರಲ್ಪಡುತ್ತದೆ.
D] ವಾತಾವರಣದಲ್ಲಿ ನೇರಳೆ ಬಣ್ಣವು ಹೆಚ್ಚು ಹೀರಲ್ಪಡುತ್ತದೆ.
6. ಕೆಂಪು ಬಣ್ಣವನ್ನು ಬಹುದೂರದಿಂದ ನೋಡಬಹುದು, ಅದಕ್ಕಾಗಿ ಅದನ್ನು ಟ್ರಾಫಿಕ್ ಸಿಗ್ನಲ್ ಗಳಲ್ಲಿ ಬಳಸುತ್ತಾರೆ. ಕಾರಣ ಕೆಂಪು ಬಣ್ಣವು -
A] ಮಂಜು ಹಾಗೂ ಹೊಗೆಯಿಂದ ಗರಿಷ್ಟವಾಗಿ ಚದುರುತ್ತದೆ
B] ಮಂಜು ಹಾಗೂ ಹೊಗೆಯಿಂದ ಕನಿಷ್ಟವಾಗಿ ಚದುರುತ್ತದೆ
C] ಮಂಜು ಹಾಗೂ ಹೊಗೆಯಿಂದ ಹೀರಿಕೊಳ್ಳಲ್ಲಪಡುತ್ತದೆ
D] ಗಾಳಿಯಲ್ಲಿ ವೇಗವಾಗಿ ಚಲಿಸುತ್ತದೆ.
7. ಗಾಜಿನ ಪಟ್ಟಕದ ಮೂಲಕ ಹಾಯ್ದು ಹೋದ ಬಿಳಕಿನ ಕಿರಣಗಳ ರೇಖಾನಕ್ಷೆಯನ್ನು ಕೆಳಗೆ ನೀಡಲಾಗಿದೆ. ಇಲ್ಲಿ W, A ಹಾಗೂ B ಎಂದು ಗುರುತಿಸಿದ ಕಿರಣಗಳ ಬಣ್ಣಗಳು ಅನುಕ್ರಮವಾಗಿ ಹೀಗಿವೆ
A] ಬಿಳಿ , ನೇರಳೆ , ಕೆಂಪು
B] ಬಿಳಿ , ಕೆಂಪು , ನೇರಳೆ
C] ಬಿಳಿ , ಹಸಿರು , ಹಳದಿ
D] ಬಿಳಿ , ಹಳದಿ , ಕೆಂಪು
8. ಬೆಳಕಿನಲ್ಲಿನ ಯಾವ ಬಣ್ಣದ ಕಿರಣವು ಗಾಜಿನ ತ್ರಿಭುಜಪಟ್ಟಕದ ಮೂಲಕ ಹಾಯ್ದು ಹೋದಾಗ ಅತಿ ಹೆಚ್ಚು ಬಾಗುತ್ತದೆ ?
A] ನೇರಳೆ
B] ಹಸಿರು
C] ಹಳದಿ
D] ಕೆಂಪು
9. ಸಾಮಾನ್ಯ ದೃಷ್ಟಿ ಹೊಂದಿರುವ ಯುವ ವಯಸ್ಕರಿಗೆ ಕಣ್ಣಿನ ಕನಿಷ್ಠ ದೃಷ್ಟಿದೂರ.
A] 25 ಮೀ.
B]2.5 ಸೆಂ.ಮೀ.
C] 25 ಸೆಂ.ಮೀ.
D] 2.5 ಮೀ.
10. ನೈಜ ಸೂರ್ಯೋದಯಕ್ಕಿಂತ ಎರಡು ನಿಮಿಷ ಮುಂಚಿತವಾಗಿ ಹಾಗೂ ನೈಜ ಸೂರ್ಯಾಸ್ತವಾದ ಎರಡು ನಿಮಿಷದನಂತರವೂ ನಾವು ಸೂರ್ಯನ್ನು ಕಾಣುತ್ತೇವೆ. ವಾತಾವರದಲ್ಲಿ ಉಂಟಾಗುವ ಬೆಳಕಿನ ಈ ವಿದ್ಯಮಾನವು ಇದಕ್ಕೆ ಕಾರಣವಾಗಿದೆ -
A] ಬೆಳಕಿನ ವ್ಯತೀಕರಣ
B] ಬೆಳಕಿನ ಚದುರುವಿಕೆ
C] ಬೆಳಕಿನ ವಕ್ರೀಭವನ
D] ಬೆಳಕಿನ ಪ್ರತಿಫಲನ
Ready to send