Skip to the content
ವಿದ್ಯುಚ್ಛಕ್ತಿ
1. ಒಂದು ಏಕಮಾನ ಆವೇಶವನ್ನು ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ತರುವಲ್ಲಿ ನಡೆದ ಕೆಲಸವನ್ನು ಹೀಗೆ ಕರೆಯುವರು,
A] ವಿದ್ಯುತ್ ಪ್ರವಾಹ
B] ವಿದ್ಯುತ್ ವಿಭವ
C] ವಿಭವಾಂತರ
D] ವಿದ್ಯುತ್ ಸಾಮರ್ಥ್ಯ
2. ವಿದ್ಯುದಾವೇಶಗಳನ್ನು ಅಳೆಯಲು ಬಳಸುವ ಅಂತರಾಷ್ಟ್ರೀಯ ಏಕಮಾನ
A] ಅಂಪೇರ್
B] ವೋಲ್ಟ್
C] ಜೌಲ್
D] ಕೂಲಮ್
3. ವಿದ್ಯುತ್ ಕೋಶದ ಧ್ರುವಗಳ ನಡುವಿನ ವಿಭವಾಂತರವನ್ನು ಅಳೆಯಲು ಬಳಸುವ ಸಾಧನ
A] ವೋಲ್ಟ್ ಮೀಟರ್
B] ಅಮ್ಮೀಟರ್
C] ರಿಯೋಸ್ಟ್ಯಾಟ್
D] ಗ್ಯಾಲ್ವನೋಮೀಟರ್
4. 1∙5V ಇರುವ ಎರಡು ವಿದ್ಯುತ್ ಕೋಶಗಳನ್ನು ವಾಹಕಕ್ಕೆ ಸಂಪರ್ಕಿಸಿದೆ. ಇದರ ಮೂಲಕ 5C ಆವೇಶಗಳು ಚಲಿಸದಾಗ ಆಗುವ ಕೆಲಸ
A] 5 J
B] 7∙5 J
C] 15 J
D] 50 J
5. ಓಮ್ ನ ನಿಯಮದನ್ವಯ ವಿದ್ಯುತ್ ರೋಧ R=
A] V x I
B] V+I
C] V/I
D] V-I
6. a,b,c ಎಂಬ ಮೂರು ರೋಧಗಳನ್ನು ಸರಣಿಯಲ್ಲಿ ಜೋಡಿಸಲಾಗಿದೆ. a ಮತ್ತು b ಗಳ ರೋಧ ತಲಾ 2Ω ಹಾಗೂ ಮಂಡಲದ ಒಟ್ಟು ರೋಧ 12Ω.ಆದರೆ c ನ ರೋಧ ಎಷ್ಟು ?
A] 12Ω
B] 8Ω
C] 6Ω
D] 4Ω
7. ಒಂದು ವಾಹಕದ ರೋಧ r ಎಂದು ಭಾವಿಸಿ, ಆ ವಾಹಕದ ಉದ್ದವನ್ನು ದ್ವಿಗುಣಗೊಳಿಸಿದಾಗ ಅದರ ರೋಧ =
A] r/2
B] r
C] 2r
D] 4r
8. ಕೆಳಗೆ ಕೊಡಲಾದ ವಿದ್ಯುನ್ಮಂಡಲದ ಒಟ್ಟು ರೋಧ
A] 2 Ω
B] 22 Ω
C] 6 Ω
D] 12 Ω
9. ವಿದ್ಯುತ್ ಮಂಡಲದಲ್ಲಿ ರೋಧವನ್ನು ಅಗತ್ಯಾನುಸಾರ ಬದಲಾಯಿಸಲು ಬಳಸುವ ಸಾಧನ
A] ವೋಲ್ಟ್ ಮೀಟರ್
B] ಅಮ್ಮೀಟರ್
C] ರಿಯೋಸ್ಟ್ಯಾಟ್
D] ಗ್ಯಾಲ್ವನೋಮೀಟರ್
10. ಹಲವು ರೋಧಗಳನ್ನು ಸರಣಿಯಲ್ಲಿ ಜೋಡಿಸಿದಾಗ ಅವುಗಳ ಒಟ್ಟು ರೋಧವು ಇದಕ್ಕೆ ಸಮನಾಗಿರುತ್ತದೆ
A] ಎಲ್ಲ ರೋಧಗಳ ಒಟ್ಟು ಮೊತ್ತ
B] ಎಲ್ಲ ರೋಧಗಳ ಗುಣಲಬ್ಧ
C] ಅವುಗಳಲ್ಲಿನ ಗರಿಷ್ಟ ರೋಧ
D] ಅವುಗಳಲ್ಲಿನ ಕನಿಷ್ಟ ರೋಧ
11.ಒಂದು ಮಂಡಲದಲ್ಲಿ 1 Ω, 2 Ω , 3 Ω ಇರುವ ಮೂರು ರೋಧಗಳನ್ನು ಸಮಾಂತರ ಕ್ರಮದಲ್ಲಿ ಜೋಡಿಸಿದೆ , ಆಗ ಮಂಡಲದ ಒಟ್ಟು ರೋಧವು
A] 3 Ω ಗಿಂತ ಹೆಚ್ಚು
B] 1 Ω ಗಿಂತ ಕಡಿಮೆ
C] 2 Ω ಆಗಿರುತ್ತದೆ
D] 1 Ω ಮತ್ತು 3 Ω ಗಳ ನಡುವೆ ಇರುತ್ತದೆ
12. 220 V ವಿದ್ಯುತ್ತಿನ ಮೂಲಕ್ಕೆ ಅಳವಡಿಸಿದ ಬಲ್ಬ್ 0.5 A ನಷ್ಟು ವಿದ್ಯುತ್ ಪ್ರವಾಹವನ್ನು ಬಳಸಿಕೊಳ್ಳುತ್ತಿದೆ. ಆ ಬಲ್ಬ್ ನ ಸಾಮರ್ಥ್ಯ
A] 55 W
B] 440 W
C] 110 W
D] 5 W
13. ಈ ಕೆಳಗಿನ ಕೋಷ್ಟಕ ಗಮನಿಸಿ , ಇವುಗಳಲ್ಲಿ ಯಾವ ಲೋಹವು ಉತ್ತಮ ವಾಹಕವಾಗಿದೆ
A] ತಾಮ್ರ
B] ಕಬ್ಬಿಣ
C] ಬೆಳ್ಳಿ
D] ಅಲುಮಿನಿಯಂ
14. ಒಂದು ವಾಹಕದಲ್ಲಿ 2A ನಷ್ಟು ವಿದ್ಯುತ್ ಪ್ರವಹಿಸುತ್ತಿದೆ. ಅದರ ಉದ್ದವನ್ನು ದ್ವಿಗುಣಗೊಳಿಸಿದಾಗ ಅದರಲ್ಲಿ ಪ್ರವಹಿಸುತ್ತಿರುವ ವಿದ್ಯುತ್ ಪ್ರವಾಹದ ಪರಿಮಾಣ
A] 2A
B] 0.5 A
C] 1 A
D] 4 A
15. ಒಂದೇ ಲೋಹದಿಂದ ಮಾಡಿದ ಈ ಕೆಳಗಿನ ಯಾವ ತಂತಿಯ ರೋಧವು ಅತ್ಯಂತ ಗರಿಷ್ಟವಾಗಿದೆ
A] ಉದ್ದ 1m , ದಪ್ಪ 2 mm
B] ಉದ್ದ 2 m , ದಪ್ಪ 2 mm
C] ಉದ್ದ 1m , ದಪ್ಪ 4 mm
D] ಉದ್ದ 2 m , ದಪ್ಪ 4 mm
Ready to send