Skip to the content
ನಮ್ಮ ಪರಿಸರ
1. ಈ ಕೆಳಗಿನವುಗಳಲ್ಲಿ ಯಾವುದು ಕೃತಕ ಪರಿಸರ ವ್ಯವಸ್ಥೆಯಾಗಿದೆ ?
A] ಕೆರೆ
B] ಸರೋವರ
C] ಪೈರುಗದ್ದೆ
D] ಅರಣ್ಯ
2. ಕೆಳಗಿನ ಆಹಾರ ಸರಪಳಿಯಲ್ಲಿ ಪ್ರಾಥಮಿಕ ಭಕ್ಷಕರಿಂದ ದ್ವಿತಿಯಕ ಭಕ್ಷಕರಿಗೆ ಶಕ್ತಿಯ ವರ್ಗಾವಣೆಯಾಗಿದೆ, ಇದರ ಅರ್ಥ -
A] ಹುಲ್ಲನ್ನು ಮಿಡತೆ ಸೇವಿಸುವುದು
B] ಮಿಡತೆಯನ್ನು ಕಪ್ಪೆ ಸೇವಿಸುವುದು
C] ಕಪ್ಪೆಯನ್ನು ಹಾವು ಸೇವಿಸುವುದು
D] ಹಾವನ್ನು ಹದ್ದು ಸೇವಿಸುವುದು
3. ಆಹಾರ ಸರಪಳಿಯಲ್ಲಿ ಒಂದು ಪೋಷಣಾ ಸ್ತರದಿಂದ ಇನ್ನೊಂದು ಪೋಷಣಾ ಸ್ತರಕ್ಕೆ ವರ್ಗಾವಣೆಗೊಳ್ಳುವ ಶಕ್ತಿಯರೂಪ
A] ಉಷ್ಣಶಕ್ತಿ
B] ಸೌರಶಕ್ತಿ
C] ರಾಸಾಯನಿಕ ಶಕ್ತಿ
D] ಯಾಂತ್ರಿಕ ಶಕ್ತಿ
4. ದ್ಯುತಿಸಂಶ್ಲೇಷಣೆಕ್ರಿಯೆಗಾಗಿ ಎಲ್ಲ ಹಸಿರು ಸಸ್ಯಗಳು ಬಳಸಿಕೊಳ್ಳುವ ಸೌರಶಕ್ತಿಯ ಶೇಕಡಾ ಪ್ರಮಾಣ
A] 1 %
B] 5 %
C] 8 %
D] 10 %
5. ಆಹಾರ ಸರಪಳಿಯೊಂದರಲ್ಲಿನ ನಾಲ್ಕನೇ ಪೋಷಣಾಸ್ತರದಲ್ಲಿನ ಜೀವಿಯು 5kJ ಶಕ್ತಿಯನ್ನು ಹೊಂದಿದ್ದಾದರೆ, ಉತ್ಪಾದಕ ಸಸ್ಯ ಹೊಂದಿರಬಹುದಾದ ಶಕ್ತಿ
A] 5 kJ
B] 50 kJ
C] 500 kJ
D] 5000 kJ
6. ಚಿತ್ರದಲ್ಲಿ ತೋರಿಸಿದ ವಿವಿಧ ಪೋಷಣಾಸ್ತರಗಳಲ್ಲಿ ಶಕ್ತಿಯ ಲಭ್ಯತೆ ಹೆಚ್ಚಾಗಿರುವ ಪೋಷಣಾಸ್ತರ
A] T1
B] T2
C] T3
D] T4
7. ಕೆಳಗಿನ ಯಾವ ಗುಂಪು ಆಹಾರ ಸರಪಣಿಯನ್ನು ಉಂಟುಮಾಡುವುದಿಲ್ಲ
A] ಹುಲ್ಲು , ಸಿಂಹ , ಮೊಲ , ತೋಳ
B] ಡಿಂಭಕ , ಮಾನವ , ಮೀನು , ಮಿಡತೆ
C] ತೋಳ , ಹುಲ್ಲು , ಕುರಿ , ಹುಲಿ
D] ಕಪ್ಪೆ , ಹಾವು , ಹದ್ದು , ಹುಲ್ಲು , ಮಿಡತೆ
8. ಕೆಳಗಿನ ಆಹಾರ ಸರಪಳಿಯಿಂದ ಜಿಂಕೆಯನ್ನು ತೆಗೆದುಹಾಕುವದರಿಂದ ಪರಿಸರದಲ್ಲಾಗುವ ಬದಲಾವಣೆ
A] ಹುಲಿಗಳ ಸಂಖ್ಯೆ ಹೆಚ್ಚಾಗುವುದು
B] ಹುಲ್ಲುಗಳ ಸಂಖ್ಯೆ ಕಡಿಮೆಯಾಗುವುದು
C] ಹುಲಿಯು ಹುಲ್ಲನ್ನು ಸೇವಿಸಲು ಪ್ರಾರಂಭಿಸುತ್ತದೆ
D] ಹುಲಿಗಳ ಸಂಖ್ಯೆ ಕಡಿಮೆಯಾಗಿ ಹುಲ್ಲುಗಳಸಂಖ್ಯೆ ಹೆಚ್ಚಾಗುವುದು
9. ಕೆಳಗಿನ ಯಾವ ಗುಂಪು ಜೈವಿಕ ವಿಘಟನೆಗೆ ಒಳಗಾಗದ ವಸ್ತುಗಳನ್ನು ಮಾತ್ರ ಹೊಂದಿವೆ
A] ಕಟ್ಟಿಗೆ , ಕಾಗದ , ಚರ್ಮ
B] ಪಾಲಿಥೀನ , ಸಗಣಿ , ಪಿವಿಸಿ
C] ಪ್ಲಾಸ್ಟಿಕ್, ಡಿಡಿಟಿ , ಮಾರ್ಜಕ
D] ಪ್ಲಾಸ್ಟಿಕ್ , ಮಾರ್ಜಕ , ಹುಲ್ಲು
10. ಓಝೋನ್ ಪದರು ತೆಳುವಾಗುವಿಕೆಗೆ ಕಾರಣವಾದ ಮಾಲಿನ್ಯಕಾರಕಗಳೆಂದರೆ
A] ಕ್ಲೋರೋಫ್ಲೋರೋಕಾರ್ಬನ್ ಗಳು
B] ಕೀಟನಾಶಕಗಳು
C] ಮಾರ್ಜಕಗಳು
D] ಕಾರ್ಬನ್ ಡೈ ಆಕ್ಸೈಡ್
Ready to send