Skip to the content
ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ
1. ನಮ್ಮ ದೈನದಿಂನ ಶಕ್ತಿಯ ಅವಶ್ಯಕತೆಗಳು ಇವುಗಳಿಂದ ಅತಿ ಹೆಚ್ಚು ಪೂರೈಸಲ್ಪಡುತ್ತವೆ.
A] ಭೂಗರ್ಭದಲ್ಲಿನ ಉಷ್ಣದಿಂದ
B] ಸೂರ್ಯನಿಂದ
C] ಕಲ್ಲಿದ್ದಲು & ಪೆಟ್ರೋಲಿಯಂಗಳಿಂದ
D] ಗಾಳಿಯಿಂದ
2. ಕೆಳಗಿನವುಗಳಲ್ಲಿ ಹಸಿರುಮನೆ ಪರಿಣಾಮವನ್ನು ಉಂಟುಮಾಡುವ ಅನಿಲವನ್ನು ಗುರುತಿಸಿ
A] ಸಲ್ಫರ್ ಡೈ ಆಕ್ಸೈಡ್
B] ಕಾರ್ಬನ್ ಡೈ ಆಕ್ಸೈಡ್
C] ಕಾರ್ಬನ್ ಮೋನಾಕ್ಸೈಡ್
D] ನೈಟ್ರೋಜನ್ ಆಕ್ಸೈಡ್
3. ಈ ಕೆಳಗಿನ ಪಾಲುದಾರರಿಂದ ಅರಣ್ಯಗಳಿಗೆ ಗರಿಷ್ಟ ಹಾನಿ ಉಂಟಾಗುತ್ತದೆ.
A] ಕಾಡಿನಲ್ಲಿ & ಕಾಡಿನ ಅಂಚಿನಲ್ಲಿ ವಾಸಿಸುವ ಜನರು
B] ಸರ್ಕಾರದ ಅರಣ್ಯ ಇಲಾಖೆ
C] ಕೈಗಾರಿಕೋದ್ಯಮಿಗಳು
D] ವನ್ಯಜೀವಿ ಹಾಗೂ ಅರಣ್ಯಗಳನ್ನು ಪ್ರೀತಿಸುವವರು
4. ‘ಚಿಪ್ಕೋ ಆಂದೋಲನ’ ಈ ವಿಚಾರವಾಗಿ ಕೈಗೊಳ್ಳಲಾಯಿತು
A] ಗಣಿಗಾರಿಕೆಯನ್ನು ತಡೆಯಲು
B] ಹೊಸ ಅರಣ್ಯತಳಿ ಸಸ್ಯಗಳ ಅಭಿವೃದ್ಧಿ ಕುರಿತು
C] ವನ್ಯಜೀವಿಗಳ ಗಣತಿಗಾಗಿ
D] ಮರಗಳ ಸಂರಕ್ಷಣೆಗಾಗಿ
5. ರಾಜಸ್ಥಾನದ ಅಮೃತಾದೇವಿ ಬೀಷ್ನೋಯಿ ಇವರು ಈ ಮರಗಳ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟರು.
A] ಖೇಜ್ರಿ ಮರಗಳು
B] ಸಾಲ್ ಮರಗಳು
C] ಪೈನ್ ಮರಗಳು
D] ತೇಗದ ಮರಗಳು
6. ಖಾದಿನ್, ಬುಂಧೀಸ್ , ಕುಲ್ಸ್ ಹಾಗೂ ಕಟ್ಟಗಳು ಎಂಬ ಪ್ರಾಚೀನ ರಚನೆಗಳು ಈ ಉದ್ದೇಶಕ್ಕಾಗಿ ನಿರ್ಮಿಸಲಾಗಿದ್ದವು
A] ಆಹಾರ ಸಂಗ್ರಹಣೆ
B] ಮಣ್ಣಿನ ಸಂರಕ್ಷಣೆ
C] ಮಳೆನೀರಿನ ಕೊಯ್ಲು
D] ಇಂಧನಗಳ ಸಂರಕ್ಷಣೆ
7. LPG ಅನಿಲದ ಬದಲಾಗಿ ಸೌರಶಕ್ತಿಯನ್ನು ಬಳಸುವುದು ಪರಿಸರ ರಕ್ಷಣೆಯ ಈ ವಿಧಾನ ವಾಗಿದೆ
A] ನಿರಾಕರಣೆ
B] ಮಿತ ಬಳಕೆ
C] ಮರುಬಳಕೆ
D] ಮರು ಉದ್ದೇಶ
8. ಸ್ವಾತಂತ್ರ್ಯಾನಂತರ ಭಾರತದಲ್ಲಿ ವಿಶಾಲವಾದ ಅರಣ್ಯ ಪ್ರದೇಶಗಳನ್ನು ಏಕಫಸಲಿನ ಕೃಷಿ ಭೂಮಿಯಾಗಿ ಪರಿವರ್ತಿಸಲಾಯಿತು. ಯಾವ ಸಸ್ಯಗಳನ್ನು ಈ ವಿಧಾನದಲ್ಲಿ ಬಳಸಲಾಯಿತು ?
A] ನೀಲಗಿರಿ
B] ಪೈನ್ ಮತ್ತು ತೇಗ
C] ನೀಲಗಿರಿ , ಪೈನ್ ಮತ್ತು ತೇಗ
D] ನೀಲಗಿರಿ ಮತ್ತು ಬೇವು
9. ಅರಣ್ಯಾಧಿಕಾರಿ ಎ ಕೆ ಬ್ಯಾನರ್ಜಿಯವರು ಸಮುದಾಯವನ್ನು ಸಕ್ರೀಯವಾಗಿ ತೊಡಗಿಸಿಕೊಂಡು ನಿರ್ಮಿಸಿದ ಅರಣ್ಯಗಳು
A] ಅರಬಾರಿಯ ಸಾಲ್ ಅರಣ್ಯಗಳು
B] ಪಶ್ಚಿಮ ಘಟ್ಟದ ಕಾಡುಗಳು
C] ದಿ ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ
D] ಖೇಜ್ರಿ ಮರಗಳ ಕಾಡು
10. ನೀರಿನ ಕೊಯ್ಲಿನ ಈ ವಿಧಾನವು ಕರ್ನಾಟಕದಲ್ಲಿ ಪ್ರಚಲಿತವಾಗಿತ್ತು
A] ಖಾದಿನ್ ಗಳು
B] ಕಟ್ಟಗಳು
C] ಕುಲ್ಸ್ ಗಳು
D] ಬುಂಧೀಸ್ ಗಳು
Ready to send