Skip to the content
ಆಮ್ಲಗಳು ಮತ್ತು ಪ್ರತ್ಯಾಮ್ಲಗಳು
1. ಒಂದು ದ್ರಾವಣವು ಕೆಂಪು ಲಿಟ್ಮಸ್ ಕಾಗದವನ್ನು ನೀಲಿ ಬಣ್ಣಕ್ಕೆ ತಿರುಗಿಸುತ್ತದೆ. ಅದರ pH ಮೌಲ್ಯ
A] 1
B] 4
C] 5
D] 9
2. ಪ್ರತ್ಯಾಮ್ಲೀಯ ಲವಣವನ್ನು ಪಡೆಯಲು ಪ್ರತ್ಯಾಮ್ಲಕ್ಕೆ ಸೇರಿಸಬೇಕಾದ ಆಮ್ಲ
A] ನೈಟ್ರಿಕ್ ಆಮ್ಲ
B] ಕಾರ್ಬನಿಕ್ ಆಮ್ಲ
C] ಹೈಡ್ರೋಕ್ಲೋರಿಕ್ ಆಮ್ಲ
D] ಸಲ್ಫೂರಿಕ್ ಆಮ್ಲ
3. ನೀರಿನೊಂದಿಗೆ ನಿಧಾನವಾಗಿ ಆಮ್ಲವನ್ನು ಬೆರೆಸಿದಾಗ ಜರಗುವ ಕ್ರಿಯೆ
A] ತಟಸ್ಥೀಕರಣಗೊಳ್ಳುವಿಕೆ
B] ಸ್ಫಟಿಕೀಕರಣಗೊಳ್ಳುವಿಕೆ
C] ಲವಣ ಉಂಟಾಗುವಿಕೆ
D] ಸಾರರಿಕ್ತಗೊಳ್ಳುವಿಕೆ
4. ಒಂದು ದ್ರಾವಣದಲ್ಲಿ ಅದ್ದಿದಾಗ ಕೆಂಪು ಲಿಟ್ಮಸ್ ಕಾಗದವು ನೀಲಿ ಬಣ್ಣಕ್ಕೆ ತಿರುಗುತ್ತದೆ. ಆ ದ್ರಾವಣವು ನೀಲಿ ಲಿಟ್ಮಸ್ ಕಾಗದವನ್ನು ಕೆಂಪು ಬಣ್ಣಕ್ಕೆ ತಿರುಗಿಸುವಂತೆ ಮಾಡಲು ಯಾವುದನ್ನು ದ್ರಾವಣಕ್ಕೆ ಹೆಚ್ಚು ಸೇರಿಸಬೇಕು ?
A] ಅಡುಗೆ ಸೋಡಾ
B] ಹೈಡ್ರೋಕ್ಲೋರಿಕ್ ಆಮ್ಲ
C] ಸುಣ್ಣದ ತಿಳಿನೀರು
D] ಸೋಡಿಯಂ ಹೈಡ್ರಾಕ್ಸೈಡ್
5. ಪುಡಿಮಾಡಿದ ಮೊಟ್ಟೆಯ ಚೂರುಗಳಿಗೆ ಆಮ್ಲ ಬೆರೆಸಿದಾಗ ಬಿಡುಗಡೆಯಾಗುವ ಅನಿಲವನ್ನು ಸುಣ್ಣದ ತಿಳಿನೀರಿನ ಮೂಲಕ ಹಾಯಿಸಿದಾಗ ಬಿಳಿ ಪ್ರಕ್ಷೇಪ ಉಂಟಾಗುತ್ತದೆ. ಈ ಕ್ರಿಯೆಯಲ್ಲಿ ಬಿಡುಗಡೆಯಾದ ಅನಿಲ
A] ಹೈಡ್ರೋಜನ್
B] ಆಕ್ಸಿಜನ್
C] ಕಾರ್ಬನ್ ಡೈ ಆಕ್ಸೈಡ್
D] ಸಲ್ಫರ್ ಡೈ ಆಕ್ಸೈಡ್
6. ನೀರಿನಲ್ಲಿ ಸಂಪೂರ್ಣವಾಗಿ ವಿಯೋಜನೆಗೊಳ್ಳುವ ಆಮ್ಲ
A] ಕಾರ್ಬಾನಿಕ್ ಆಮ್ಲ
B] ಹೈಡ್ರೋಕ್ಲೋರಿಕ್ ಆಮ್ಲ
C] ಫಾಸ್ಫೋರಿಕ್ ಆಮ್ಲ
D] ಅಸಿಟಿಕ್ ಆಮ್ಲ
7. ಶುಷ್ಕ HCl ಅನಿಲ, ಶುಷ್ಕ ಲಿಟ್ಮಸ್ ಕಾಗದದ ಬಣ್ಣ ಬದಲಾಯಿಸುವುದಿಲ್ಲ ಏಕೆಂದರೆ HCl ಅನಿಲವು -
A] ಹೆಚ್ಚು H+ ಅಯಾನುಗಳನ್ನು ಹೊಂದಿರುತ್ತದೆ
B] ಕಡಿಮೆ H+ ಅಯಾನುಗಳನ್ನು ಹೊಂದಿರುತ್ತದೆ
C] ಜಲೀಯ ಸ್ಥಿಯಲ್ಲಿ ಮಾತ್ರ ಆಮ್ಲೀಯ ಗುಣ ಪ್ರದರ್ಶಿಸುತ್ತದೆ
D] ದುರ್ಬಲ ಆಮ್ಲವಾಗಿರುತ್ತದೆ.
8. ವಿದ್ಯುದ್ವಿಭಾಜ್ಯಗಳ ಮೂಲಕ ವಿದ್ಯುತ್ ಹರಿಯುವ ಪ್ರಯೋಗವನ್ನು ಚಿತ್ರದಲ್ಲಿ ತೋರಿಸಿದಂತೆ ಉಪಕರಣಗಳನ್ನು ಜೋಡಿಸಿದೆ. ಈ ಪ್ರಯೋಗಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಯನ್ನು ಗುರುತಿಸಿ.
A] ಬಲ್ಬ್ ಬೆಳಗುವದಿಲ್ಲ ಏಕೆಂದರೆ ವಿದ್ಯುದ್ವಿಭಾಜ್ಯವು ಆಮ್ಲೀಯವಲ್ಲ
B] ಬಲ್ಬ್ ಬೆಳಗುತ್ತದೆ ಏಕೆಂದರೆ NaOH ವಿದ್ಯುದ್ವಾಹಕತೆಗೆ ಬೇಕಾದ ಅಯಾನುಗಳನ್ನು ಉಂಟುಮಾಡುತ್ತದೆ.
C] ಬಲ್ಬ್ ಬೆಳಗುವದಿಲ್ಲ ಏಕೆಂದರೆ ವಿದ್ಯುನ್ಮಂಡಲವು ಪೂರ್ಣಗೊಂಡಿಲ್ಲ
D] ಬಲ್ಬ್ ಬೆಳಗುವದಿಲ್ಲ ಏಕೆಂದರೆ NaOH ದುರ್ಬಲ ವಿದ್ಯುದ್ವಿಭಾಜ್ಯ
9. ಪ್ರಯೋಗವೊಂದರಲ್ಲಿ ಬಿಡುಗಡೆಯಾದ ಅನಿಲವು ಮೇಣದ ಜ್ವಾಲೆಯನ್ನು ಪಾಪ್ ಎಂಬ ಶಬ್ದದೊಂದಿಗೆ ಉರಿಯುವಂತೆ ಮಾಡುತ್ತದೆ. ಇಲ್ಲಿ ಬಿಡುಗಡೆಯಾಗಿರಬಹುದಾದ ಅನಿಲ
A] ಹೈಡ್ರೋಜನ್
B] ಕಾರ್ಬನ್ ಡೈ ಆಕ್ಸೈಡ್
C] ನೈಟ್ರೋಜನ್ ಆಕ್ಸೈಡ್
D] ನೀರಾವಿ
10. 10 ml NaOH ದ್ರಾವಣವು 8 ml HCl ದ್ರಾವಣದಿಂದ ಸಂಪೂರ್ಣವಾಗಿ ತಟಸ್ಥೀಕರಣ ಗೊಳಿಸಲ್ಪಡುತ್ತದೆ. ನಾವು ಇದೇ NaOH ದ್ರಾವಣವನ್ನು 30 ml ನಷ್ಟು ತೆಗೆದುಕೊಂಡರೆ, ಇದನ್ನು ತಟಸ್ಥಗೊಳಿಸಲು ಬೇಕಾದ HCl ದ್ರಾವಣದ ಪ್ರಮಾಣ,
A] 8 ml
B] 10 ml
C] 16 ml
D] 24 ml.
11. ಅಂಧ ವಿದ್ಯಾರ್ಥಿಯು ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ಗುರುತಿಸಲು ಬಳಸಬಹುದಾದ ಸೂಚಕ -
(A) ಲಿಟ್ಮಸ್ ಕಾಗದ
(B) ಅರಿಷಿಣ
(C) ಈರುಳ್ಳಿ
(D) ಕೆಂಪು ಕ್ಯಾಬೇಜ್
12. ಅಮ್ಲೀಯತೆಯ ಏರಿಕೆ ಕ್ರಮದಲ್ಲಿನ ಸರಿಯಾದ ನಿರೂಪಣೆ
(A) ನೀರು < ಹೈಡ್ರೋಕ್ಲೋರಿಕ್ ಆಮ್ಲ < ಅಸಿಟಿಕ ಆಮ್ಲ
(B) ನೀರು < ಅಸಿಟಿಕ ಆಮ್ಲ < ಹೈಡ್ರೋಕ್ಲೋರಿಕ್ ಆಮ್ಲ
(C) ಹೈಡ್ರೋಕ್ಲೋರಿಕ್ ಆಮ್ಲ < ನೀರು < ಅಸಿಟಿಕ ಆಮ್ಲ
(D) ಅಸಿಟಿಕ ಆಮ್ಲ < ಹೈಡ್ರೋಕ್ಲೋರಿಕ್ ಆಮ್ಲ < ನೀರು
13. ಮಣ್ಣಿನ ಮಾದರಿಯನ್ನು ನೀರಿನ ಬೀಕರಿನಲ್ಲಿ ಕಲಕಿ ಸ್ವಲ್ಪ ಸಮಯದ ನಂತರ ದೊರೆಯುವ ತಿಳಿಯಾದ ದ್ರವವನ್ನು ಪರೀಕ್ಷಿಸಿದಾಗ ಅದರ pH 6.2 ಇದೆ. ಹಾಗಾದರೆ ಆ ಮಣ್ಣಿನ ಗುಣ -
(A) ಕ್ಷಾರೀಯ ಗುಣ
(B) ಆಮ್ಲೀಯ ಗುಣ
(C) ತಟಸ್ಥ ಗುಣ
(D) ಉಭಯವರ್ತಿಯ ಗುಣ
14. ಸೋಡಿಯಂ ಕಾರ್ಬೋನೇಟ್ ಒಂದು ಪ್ರತ್ಯಾಮ್ಲೀಯ ಲವಣವಾಗಿದೆ, ಏಕೆಂದರೆ ಈ ಲವಣ ಉಂಟಾಗಿರುವುದು -
(A) ಪ್ರಬಲ ಆಮ್ಲ ಮತ್ತು ದುರ್ಬಲ ಪ್ರತ್ಯಾಮ್ಲಗಳಿಂದ
(B) ಪ್ರಬಲ ಆಮ್ಲ ಮತ್ತು ಪ್ರಬಲ ಪ್ರತ್ಯಾಮ್ಲಗಳಿಂದ
(C) ದುರ್ಬಲ ಆಮ್ಲ ಮತ್ತು ಪ್ರಬಲ ಪ್ರತ್ಯಾಮ್ಲಗಳಿಂದ
(D) ದುರ್ಬಲ ಆಮ್ಲ ಮತ್ತು ದುರ್ಬಲ ಪ್ರತ್ಯಾಮ್ಲಗಳಿಂದ
15. ಆಮ್ಲವಿರುವ ಪ್ರನಾಳಕ್ಕೆ ಪ್ರತ್ಯಾಮ್ಲವನ್ನು ಸೇರಿಸಿದಾಗ -
(A) ಪ್ರನಾಳದ ತಾಪ ಕಡಿಮೆಯಾಗುತ್ತದೆ
(B) ಪ್ರನಾಳದಿಂದ ಅನಿಲ ಬಿಡುಗಡೆಯಾಗುತ್ತದೆ
(C) ಪ್ರನಾಳದಲ್ಲಿ ಪ್ರಕ್ಷೇಪ ಉಂಟಾಗುತ್ತದೆ.
(D) ಲವಣ ಮತ್ತು ನೀರು ಉಂಟಾಗುತ್ತದೆ.
16. ಈ ಕೆಳಗಿನ ಸಂಯುಕ್ತವು ಸ್ಪಟಕೀಕರಣ ನೀರನ್ನು ಹೊಂದಿರುವುದಿಲ್ಲ -
(A) ತಾಮ್ರದ ಸಲ್ಫೇಟ್ ಹರಳು
(B) ಚಲುವೆ ಪುಡಿ
(C) ವಾಷಿಂಗ್ ಸೋಡಾ
(D) ಜಿಪ್ಸಂ
17. ಅಸಿಟಿಕ್ ಆಮ್ಲಕ್ಕೆ ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್ ಸೇರಿಸಿದಾಗ ಅನಿಲ ಬಿಡುಗಡೆಯಾಗುತ್ತದೆ. ಬಿಡುಗಡೆಯಾದ ಅನಿಲದ ಗುಣ
(A) ಮೇಣದ ಜ್ವಾಲೆ ಬಳಿ ತಂದಾಗ ‘ಪಾಪ್’ ಎಂಬ ಶಬ್ದ ಉಂಟುಮಾಡುತ್ತದೆ.
(B) ಘಾಟು ವಾಸನೆಯನ್ನು ಹೊಂದಿದೆ
(C) ಸುಣ್ಣದ ತಿಳಿನೀರಿನಲ್ಲಿ ಹಾಯಿಸಿದಾಗ ಬಿಳಿ ಪ್ರಕ್ಷೇಪ ಉಂಟುಮಾಡುತ್ತದೆ
(D) ಚಲುವೆಕಾರಕ ಗುಣ ಹೊಂದಿದೆ
18. ಕ್ಲೋರ್-ಅಲ್ಕಲಿ ಪ್ರಕ್ರಿಯೆಯಲ್ಲಿ ಬಿಡುಗಡೆಯಾಗುವ ಈ ಅನಿಲವನ್ನು ಸೋಂಕುನಾಶಕವಾಗಿ ಬಳಸುತ್ತಾರೆ.
(A) ಕ್ಲೋರಿನ್
(B) ಆಕ್ಸಿಜನ್
(C) ಹೈಡ್ರೋಜನ್
(D) ಕಾರ್ಬನ್ ಡೈ ಆಕ್ಸೈಡ್
19. ಬೇಕಿಂಗ್ ಪೌಡರ್ ತಯಾರಿಕೆಯಲ್ಲಿ ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್ ನೊಂದಿಗೆ ಬೆರೆಸುವ ಆಮ್ಲ -
(A) ಮೆಥೆನೋಯಿಕ್ ಆಮ್ಲ
(B) ಟಾರ್ಟಾರಿಕ್ ಆಮ್ಲ
(C) ಅಸಿಟಿಕ್ ಆಮ್ಲ
(D) ಲ್ಯಾಕ್ಟಿಕ್ ಆಮ್ಲ
20. ಈ ಕೆಳಗೆ ಆಮ್ಲಗಳು ಮತ್ತು ಅವುಗಳ ಪ್ರಮುಖ ಆಕರಗಳನ್ನು ಕೊಡಲಾಗಿದೆ. ಇವುಗಳಲ್ಲಿ ಸರಿಹೊಂದದ ಜೋಡಿ
(A) ಮೆಥೆನೋಯಿಕ್ ಆಮ್ಲ - ತುರಿಕೆ ಗಿಡ
(B) ಟಾರ್ಟಾರಿಕ್ ಆಮ್ಲ - ನಿಂಬೆ ಹಣ್ಣು
(C) ಆಕ್ಸಾಲಿಕ್ ಆಮ್ಲ - ಟೊಮೆಟೊ
(D) ಲ್ಯಾಕ್ಟಿಕ್ ಆಮ್ಲ - ಮೊಸರು
Ready to send