Skip to the content
ಕಾರ್ಬನ್ ಮತ್ತು ಅದರ ಸಂಯುಕ್ತಗಳು
1 . ಇವುಗಳಲ್ಲಿ - OH ಕ್ರಿಯಾಗುಂಪನ್ನು ಹೊಂದಿರುವ ಸಂಯುಕ್ತವನ್ನು ಗುರುತಿಸಿ
A] ಬ್ಯೂಟೆನೋನ್
B] ಬ್ಯೂಟೆನಾಲ್
C] ಬ್ಯುಟೆನೋಯಿಕ್ ಆಮ್ಲ
D] ಬ್ಯೂಟೆನ್ಯಾಲ್
2. ಕಾರ್ಬನ್ ಸಂಯುಕ್ತಗಳಲ್ಲಿ ಸಮಾಂಗತೆ ಉಂಟಾಗಲು ಸಂಯುಕ್ತವೊಂದು ಹೊಂದಿರಬೇಕಾದ ಕನಿಷ್ಟ ಕಾರ್ಬನ್ ಪರಮಾಣುಗಳು -
A] ಎರಡು ಪರಮಾಣುಗಳು
B] ಮೂರು ಪರಮಾಣುಗಳು
C] ನಾಲ್ಕು ಪರಮಾಣುಗಳು
D] ಐದು ಪರಮಾಣುಗಳು
3. ಈ ಕೆಳಗೆ ನೀಡಲಾದ ಸಂಯುಕ್ತಗಳಲ್ಲಿ ಪರ್ಯಾಪ್ತ ಹೈಡ್ರೋಕಾರ್ಬನ್ ಸಂಯುಕ್ತಗಳನ್ನು ಗುರುತಿಸಿ
A] i. ಮತ್ತು iii.
B] i. ಮತ್ತು iv.
C] ii. ಮತ್ತು iii.
D] ii. ಮತ್ತು iv.
4. ಈ ಕೆಳಗೆ ನೀಡಲಾದ ಸಂಯುಕ್ತದಲ್ಲಿನ ಕ್ರಿಯಾಗುಂಪನ್ನು ಗುರುತಿಸಿ
A] ಅಲ್ಡಿಹೈಡ್
B] ಕಾರ್ಬಾಕ್ಸಿಲಿಕ್ ಆಮ್ಲ
C] ಕೀಟೋನ್
D] ಅಲ್ಕೋಹಾಲ್
5. ಎಣ್ಣೆಗಳನ್ನು ಪೆಲ್ಲೆಡಿಯಂ ನಂತಹ ಕ್ರಿಯಾವರ್ಧಕ ಬಳಸಿ ಕೊಬ್ಬುಗಳಾಗಿ ಪರಿವರ್ತಿಸುವ ಕ್ರಿಯೆಯು -
A] ಸಂಕಲನ ಕ್ರಿಯೆ
B] ಆದೇಶನ ಕ್ರಿಯೆ
C] ಉತ್ಕರ್ಷಣ ಕ್ರಿಯೆ
D] ಉತ್ಕರ್ಷಣ ಕ್ರಿಯೆ
6. ಸಾಮಾನ್ಯ ಕೊಠಡಿ ತಾಪದಲ್ಲಿ ಕ್ಲೋರಿನ್ ಅಣುವು ಪರ್ಯಾಪ್ತ ಹೈಡ್ರೋಕಾರ್ಬನ್ ಗಳೊಂದಿಗೆ ವರ್ತಿಸುವುದು
A] ಆಕ್ಸಿಜನ್ ಉಪಸ್ಥಿತಿಯಲ್ಲಿ
B] ನೀರಿನ ಉಪಸ್ಥಿತಿಯಲ್ಲಿ
C] ಹೈಡ್ರೋಕ್ಲೋರಿಕ್ ಆಮ್ಲದ ಉಪಸ್ಥಿತಿಯಲ್ಲಿ
D] ಸೂರ್ಯನ ಬೆಳಕಿನ ಉಪಸ್ಥಿತಿಯಲ್ಲಿ
7 . ಖನಿಜ ಆಮ್ಲಗಳಿಗಿಂತ ಕಾರ್ಬಾಕ್ಸಿಲಿಕ್ ಆಮ್ಲಗಳು ಹೆಚ್ಚು ದುರ್ಬಲವಾಗಿವೆ ಕಾರಣ i. ಖನಿಜ ಆಮ್ಲಗಳು ನೀರಿನಲ್ಲಿ ಸಂಪೂರ್ಣ ವಿಯೋಜನೆಗೊಳ್ಳುತ್ತವೆ ii. ಕಾರ್ಬಾಕ್ಸಿಲಿಕ್ ಆಮ್ಲಗಳು ನೀರಿನಲ್ಲಿ ಸಂಪೂರ್ಣ ವಿಯೋಜನೆಗೊಳ್ಳುತ್ತವೆ iii. ಖನಿಜ ಆಮ್ಲಗಳು ನೀರಿನಲ್ಲಿ ಭಾಗಶಃ ವಿಯೋಜನೆಗೊಳ್ಳುತ್ತವೆ iv. ಕಾರ್ಬಾಕ್ಸಿಲಿಕ್ ಆಮ್ಲಗಳು ನೀರಿನಲ್ಲಿ ಭಾಗಶಃ ವಿಯೋಜನೆಗೊಳ್ಳುತ್ತವೆ
A] i. ಮತ್ತು iii.
B] i. ಮತ್ತು iv.
C] ii. ಮತ್ತು iii.
D] ii. ಮತ್ತು iv.
8. ಈ ಕೆಳಗಿನವುಗಳ ಪರಸ್ಪರ ವರ್ತನೆಯಿಂದ ಎಸ್ಟರ್ ಗಳು ಉಂಟಾಗುತ್ತವೆ
A] ಆಮ್ಲ ಮತ್ತು ಪ್ರತ್ಯಾಮ್ಲಗಳ ನಡುವಿನ ವರ್ತನೆಯಿಂದ
B] ಆಮ್ಲ ಮತ್ತು ಅಲ್ಕೋಹಾಲ್ ಗಳ ನಡುವಿನ ವರ್ತನೆಯಿಂದ
C] ಪ್ರತ್ಯಾಮ್ಲ ಮತ್ತು ಅಲ್ಕೋಹಾಲ್ ಗಳ ನಡುವಿನ ವರ್ತನೆಯಿಂದ
D] ಆಮ್ಲ ಮತ್ತು ಅಲ್ಕೀನ್ ಗಳ ನಡುವಿನ ವರ್ತನೆಯಿಂದ
9. ಸಾಬೂನು ಉಂಟುಮಾಡುವ ಮಿಸೆಲ್ ಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳು i. ಹೈಡ್ರೋಕಾರ್ಬನ್ ತುದಿಯು ಎಣ್ಣೆಯ ಹನಿಯ ಕಡೆಗೆ ಇರುತ್ತದೆ ii. ಅಯಾನಿಕ ತುದಿಯು ಎಣ್ಣೆಯ ಹನಿಯ ಕಡೆಗೆ ಇರುತ್ತದೆ iii. ಹೈಡ್ರೋಕಾರ್ಬನ್ ತುದಿಯು ಹೊರಮುಖವಾಗಿರುತ್ತದೆ. iv. ಅಯಾನಿಕ ತುದಿಯು ಹೊರಮುಖವಾಗಿರುತ್ತದೆ.
A] i. ಮತ್ತು iii.
B] i. ಮತ್ತು iv.
C] ii. ಮತ್ತು iii.
D] ii. ಮತ್ತು iv.
10. ಸಮಾಂಗಿಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆ
A] ಅವುಗಳ ಭೌತಗುಣಗಳು ಒಂದೇ ಆಗಿರುತ್ತವೆ
B] ಅವುಗಳ ರಾಸಾಯನಿಕ ಗುಣಗಳು ಒಂದೇ ಆಗಿರುತ್ತವೆ.
C] ಅವುಗಳ ಅಣುಸೂತ್ರ ಒಂದೇ ಆಗಿರುತ್ತದೆ.
D] ಅವುಗಳ ರಚನಾಸೂತ್ರ ಒಂದೇ ಆಗಿರುತ್ತದೆ.
Ready to send