Skip to the content
ಧಾತುಗಳ ಆವರ್ತನೀಯ ವರ್ಗೀಕರಣ
1. ಈ ಧಾತುವಿನವರೆಗೆ ಮಾತ್ರ ನ್ಯೂಲೆಂಡ್ ನ ‘ಅಷ್ಟಕ ನಿಯಮ’ ಅನ್ವಯಿಸಲ್ಪಡುತ್ತದೆ.
A] ಆಕ್ಸಿಜನ್
B] ಕ್ಯಾಲ್ಸಿಯಂ
C] ಕೊಬಾಲ್ಟ್
D] ಪೊಟ್ಯಾಷಿಯಂ
2. A , B , C , D ಮತ್ತು E ಎಂದು ಕರೆಯಲ್ಪಡುವ ಧಾತುಗಳ ಪರಮಾಣುಸಂಖ್ಯೆ ಅನುಕ್ರಮವಾಗಿ 2 , 3 , 7 , 10 ಮತ್ತು 30 ಆಗಿವೆ. ಇವುಗಳಲ್ಲಿ ಒಂದೇ ಆವರ್ತಕ್ಕೆ ಸೇರಿದ ಧಾತುಗಳ ಗುಂಪು -
A] A , B , C
B] B , C , D
C] A , D , E
D] B , D , E
3. ಗರಿಷ್ಟ ಪರಮಾಣು ತ್ರೀಜ್ಯ ಹೊಂದಿರುವ ಧಾತು [ ಆವರಣದಲ್ಲಿರುವುದ ಅವುಗಳ ಪರಮಾಣು ಸಂಖ್ಯೆ ]
A] Na (11)
B] Mg (12)
C] K (19)
D] Ca (20)
4. ಪರಮಾಣು ಸಂಖ್ಯೆ = 16 ಇರುವ ಧಾತುವು ಆಮ್ಲೀಯ ಆಕ್ಸೈಡ್ ಉಂಟುಮಾಡುತ್ತದೆ. ಧಾತುವು ಈ ಗುಂಪಿಗೆ ಸೇರಿದ್ದಾಗಿದೆ.
A] ಅಲೋಹಗಳು
B] ಲೋಹಾಭಗಳು
C] ಲೋಹಗಳು
D] ಜಡಾನಿಲಗಳು
5. ಮೆಂಡಲೀವನ ಆವರ್ತಕ ನಿಯಮದ ಪ್ರಕಾರ ಧಾತುಗಳನ್ನು ಆವರ್ತ ಕೋಷ್ಟಕದಲ್ಲಿ ಈ ರೀತಿಯಾಗಿ ಜೋಡಿಸಲಾಗಿದೆ.
A] ಪರಮಾಣು ಸಂಖ್ಯೆಯ ಏರಿಕೆಯ ಕ್ರಮದಲ್ಲಿ
B] ಪರಮಾಣು ಸಂಖ್ಯೆಯ ಇಳಿಕೆಯ ಕ್ರಮದಲ್ಲಿ
C] ಪರಮಾಣು ರಾಶಿಯ ಏರಿಕೆಯ ಕ್ರಮದಲ್ಲಿ
D] ಪರಮಾಣು ರಾಶಿಯ ಇಳಿಕೆಯ ಕ್ರಮದಲ್ಲಿ
6. ಕೆಳಗಿನ ಯಾವಧಾತು ಸುಲಭವಾಗಿ ಎಲೆಕ್ಟ್ರಾನ್ ಕಳೆದುಕೊಳ್ಳತ್ತದೆ.[ಆವರಣದಲ್ಲಿರುವುದ ಅವುಗಳ ಪರಮಾಣು ಸಂಖ್ಯೆ]
A] Na (11)
B] Mg (12)
C] K (19)
D] Ca (20)
7. ಮೆಂಡಲೀವನ ಆವರ್ತಕೋಷ್ಕದಲ್ಲಿ ಇನ್ನೂ ಆವಿಷ್ಕರಿಸದ ಧಾತುಗಳಿಗಾಗಿ ಖಾಲಿ ಸ್ಥಾನ ಬಿಡಲಾಗಿತ್ತು. ಕೆಳಗಿನವುಗಳಲ್ಲಿ ಈ ಸ್ಥಾನದಲ್ಲಿ ತುಂಬಲಾದ ಧಾತುವನ್ನು ಗುರುತಿಸಿ.
A] ಕ್ಲೋರಿನ್ B] ಆಕ್ಸಿಜನ್ C] ಜರ್ಮೇನಿಯಂ D] ಸಿಲಿಕಾನ್
B] ಆಕ್ಸಿಜನ್
C] ಸಿಲಿಕಾನ್
D] ಜರ್ಮೇನಿಯಂ
8. ಇವುಗಳಲ್ಲಿ 2ನೇ ಆವರ್ತದ ಧಾತುಗಳು ಹೊಂದಿರುವ ಅತ್ಯಂತ ಹೊರ ಕವಚ.
A] K-ಕವಚ
B] L-ಕವಚ
C] M-ಕವಚ
D] N-ಕವಚ
9. ಆಕ್ಸಿಜನ್ [O] , ಫ್ಲೋರಿನ್ [F] ಮತ್ತು ನೈಟ್ರೋಜನ್ [N] ಧಾತುಗಳನ್ನು ಆವುಗಳ ಪರಮಾಣು ಗಾತ್ರಾನುಸಾರ ಏರಿಕೆ ಕ್ರಮದಲ್ಲಿ ಜೋಡಿಸಿದಾಗ
A] O , F , N
B] N , O , F
C] F , O , N
D] N , F , O
10. ಒಂದು ಧಾತುವಿನ ಇಲೆಕ್ಟ್ರಾನ್ ವಿನ್ಯಾಸ 2 , 8 ಆಗಿದೆ. ಆಧುನಿಕ ಆವರ್ತ ಕೊಷ್ಟಕದಲ್ಲಿ ಆಧಾತುವಿನ ಸ್ಥಾನ
A] 2 ನೇ ಗುಂಪು
B] 8ನೇ ಗುಂಪು
C] 10ನೇ ಗುಂಪು
D] 18ನೇ ಗುಂಪು
Ready to send