Skip to the content
ಸಹಕಾರ ಮತ್ತು ನಿಯಂತ್ರಣ
1. ಸಸ್ಯದ ಕಾಂಡದ ತುದಿಯು ಬೆಳಕಿನತ್ತ ಚಲಿಸುವುದು [ಬೆಳೆಯುವುದು]
A] ಗುರುತ್ವಾನುವರ್ತನೆ
B] ಸ್ಪರ್ಶಾನುವರ್ತನೆ
C] ಜಲಾನುವರ್ತನೆ
D] ಪ್ರಕಾಶಾನುವರ್ತನೆ
2. ಕೆಳಗಿನ ಯಾವ ಹಾರ್ಮೋನ್ ಸಸ್ಯದ ಬೆಳವಣಿಗೆಯೊಂದಿಗೆ ಸಂಬಂಧಿಸಿಲ್ಲ
A] ಅಬ್ಸಿಸಿಕ್ ಆಮ್ಲ
B] ಆಕ್ಸಿನ್
C] ಜಿಬ್ಬರ್ಲಿಸನ್
D] ಸೈಟೋಕೈನಿನ್
3. ಕೆಳಗಿನವುಗಳಲ್ಲಿ ಸರಿ ಹೊಂದದ ಜೋಡಿ ಗುರುತಿಸಿ
A] ಅಡ್ರಿನಾಲಿನ್ - ಅಡ್ರಿನಲ್ ಗ್ರಂಥಿ
B] ಥೈರಾಕ್ಸಿನ್ - ಪಿಟ್ಯುಟರಿ ಗ್ರಂಥಿ
C] ಇನ್ಸೂಲಿನ್ - ಮೇದೋಜೀರಕ ಗ್ರಂಥಿ
D] ಟೆಸ್ಟೋಸ್ಟಿರಾನ್ - ವೃಷಣಗಳು
4. ನರಕೋಶದ ಈ ಭಾಗದಲ್ಲಿ ವಿದ್ಯುದಾವೇಗ ರೂಪದಲ್ಲಿನ ಮಾಹಿತಿಯು ರಾಸಾಯನಿಕ ಸಂಕೇತಗಳಾಗಿ ಪರಿವರ್ತನೆಗೊಳ್ಳುತ್ತವೆ.
A] ಕೋಶಕಾಯ
B] ಡೆಂಡ್ರೈಟ್ ತುದಿ
C] ನರತುದಿ
D] ಅಕ್ಸಾನ್
5. ಸಸ್ಯ ಹಾರ್ಮೋನ್ ಗಳಲ್ಲೊಂದಾದ ಅಬ್ಸಿಸಿಕ್ ಆಮ್ಲದ ಮುಖ್ಯ ಕಾರ್ಯ
A] ಜೀವಕೋಶಗಳ ಉದ್ದವನ್ನು ಹೆಚ್ಚಿಸುತ್ತದೆ
B] ಕೋಶವಿಭಜನೆಯನ್ನು ಉತ್ತೇಜಿಸುತ್ತದೆ.
C] ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ.
D] ಕಾಂಡದ ಉದ್ದವನ್ನು ಹೆಚ್ಚಿಸುತ್ತದೆ
6. ರಕ್ತದೊತ್ತಡ , ಬಾಯಲ್ಲಿ ನೀರೂರುವಿಕೆ ಹಾಗೂ ವಾಂತಿಯಾಗುವಿಕೆಯಂತಹ ಅನೈಚ್ಛಿಕ ಕ್ರಿಯೆಗಳನ್ನು ನಿಯಂತ್ರಿಸುವ ಮಿದುಳಿನ ಭಾಗ
A] ಮುಮ್ಮೆದುಳಿನ ಮೆಡುಲ್ಲಾ
B] ಹಿಮ್ಮೆದುಳಿನ ಮೆಡುಲ್ಲಾ
C] ಮಧ್ಯದ ಮಿದುಳಿನ ಮೆಡುಲ್ಲಾ
D] ಮಿದುಳು ಬಳ್ಳಿಯ ಮೆಡುಲ್ಲಾ
7. ಪರಾಗರೇಣುವಿನ ನಳಿಕೆಯು ಅಂಡಾಣುವಿನ ಕಡೆ ಬೆಳೆಯುವಿಕೆಯು
A] ಗುರುತ್ವಾನುವರ್ತನೆ
B] ಸ್ಪರ್ಶಾನುವರ್ತನೆ
C] ರಾಸಾಯನಿಕಾನುವರ್ತನೆ
D] ಪ್ರಕಾಶಾನುವರ್ತನೆ
8. ಸಸ್ಯಗಳಲ್ಲಿ ಎಲೆಗಳ ಬಾಡುವಿಕೆ ಹಾಗೂ ಉದುರುವಿಕೆಗೆ ಕಾರಣವಾದ ಹಾರ್ಮೋನ್
A] ಆಕ್ಸಿನ್
B] ಜಿಬ್ಬರ್ಲಿಿನ್
C] ಸೈಟೋಕೈನಿನ್
D] ಅಬ್ಸಿಸಿಕ್ ಆಮ್ಲ
9. ಬಾಲಕ/ಬಾಲಕಿ ಪ್ರೌಢಾವಸ್ಥೆಗೆ ತಲುಪಿದಾಗ ದೇಹದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಕಾರಣ ಈ ಹಾರ್ಮೋನ್ ಗಳ ಸ್ರವಿಕೆ
A] ಟೆಸ್ಟೋಸ್ಟಿರಾನ್ ಹಾಗೂ ಥೈರಾಕ್ಸಿನ್
B] ಟೆಸ್ಟೋಸ್ಟಿರಾನ್ ಹಾಗೂ ಈಸ್ಟ್ರೋಜನ್
C] ಥೈರಾಕ್ಸಿನ್ ಹಾಗೂ ಅಡ್ರಿನಾಲಿನ್
D] ಅಡ್ರಿನಾಲಿನ್ ಹಾಗೂ ಇನ್ಸೂಲಿನ್
10. ಕೆಳಗಿನ ನರಕೋಶದ ಚಿತ್ರದಲ್ಲಿ X ಎಂದು ಗುರುತಿಸಿದ ಭಾಗ ಮತ್ತು ಅದರ ಕಾರ್ಯ
A] ಡೆಂಡ್ರೈಟ್ , ಮಾಹಿತಿಯನ್ನು ಇನ್ನೊಂದು ನರಕೋಶಕ್ಕೆ ಸಾಗಿಸುತ್ತದೆ
B] ಕೋಶಕಾಯ , ಮಾಹಿತಿಯನ್ನು ಪರೀಷ್ಕರಿಸುತ್ತದೆ.
C] ಡೆಂಡ್ರೈಟ್ , ಮಾಹಿತಿಯನ್ನು ಸ್ವೀಕರಿಸುತ್ತದೆ
D] ಅಕ್ಸಾನ್ , ಮಾಹಿತಿಯನ್ನು ಇನ್ನೊಂದು ನರಕೋಶಕ್ಕೆ ಸಾಗಿಸುತ್ತ.
Ready to send