Skip to the content
ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ ?
1. ಸ್ಪೈರೋಗೈರಾ ಸಸ್ಯದಲ್ಲಿ ಸಂತಾನೋತ್ಪತ್ತಿಯ ವಿಧಾನ
A] ವಿದಳನ
B] ಬಹುವಿದಳನ
C] ತುಂಡರಿಕೆ
D] ಮೊಗ್ಗುವಿಕೆ
2. ಕಾಯಜ ರೀತಿ ಸಂತಾನೋತ್ಪತ್ತಿಯಲ್ಲಿ ಪಾಲ್ಗೊಳ್ಳುವ ಸಸ್ಯದ ಭಾಗಗಳು
A] ಎಲೆ , ಕಾಂಡ , ಹೂವು
B] ಬೇರು , ಎಲೆ , ಕಾಂಡ
C] ಕಾಂಡ , ಹೂವು , ಬೀಜ
D] ಬೇರು , ಕಾಂಡ , ಹೂವು
3. ಬೀಜ ಮೊಳೆಯುವಿಕೆಯ ಈ ಚಿತ್ರದಲ್ಲಿ A , B , C ಎಂದು ಗುರುತಿಸಿದ ಭಾಗಗಳು ಕ್ರಮವಾಗಿ ಹೀಗಿವೆ
A] ಬೀಜದಳ , ಪ್ರಥಮ ಕಾಂಡ , ಪ್ರಥಮ ಮೂಲ
B] ಪ್ರಥಮ ಕಾಂಡ , ಪ್ರಥಮ ಮೂಲ , ಬೀಜದಳ
C] ಪ್ರಥಮ ಕಾಂಡ , ಬೀಜದಳ ,ಪ್ರಥಮ ಮೂಲ
D] ಪ್ರಥಮ ಮೂಲ , ಬೀಜದಳ , ಪ್ರಥಮ ಕಾಂಡ
4. ಕೆಳಗಿನ ಯಾವ ರಚನೆಯು ಹೆಣ್ಣು ಸಂತಾನೋತ್ಪತ್ತಿವ್ಯೂಹದಲ್ಲಿ ಕಂಡುಬರುವದಿಲ್ಲ
A] ಪ್ರೋಸ್ಟೇಟ್ ಗ್ರಂಥಿ
B] ಅಂಡಾಶಯ
C] ಫೆಲೋಪಿಯನ್ ನಾಳ
D] ಗರ್ಭಕೋಶ
5. ಕೆಳಗಿನ ಏಕಕೋಶ ಜೀವಿಯೊಂದರಲ್ಲಿ ಜರಗುತ್ತಿರುವ ಸಂತಾನೋತ್ಪತ್ತಿಯ ವಿಧಾನವನ್ನು ಗುರುತಿಸಿ
A] ಬಹುವಿದಳನ
B] ದ್ವಿವಿದಳನ
C] ತುಂಡರಿಕೆ
D] ಮೊಗ್ಗುವಿಕೆ
6. ಗರ್ಭಧಾರಣೆಯ ಸಮಯದಲ್ಲಿ ತಾಯಿ ಹಾಗೂ ಭ್ರೂಣದೊಂದಿಗೆ ಸಂಪರ್ಕ ಕಲ್ಪಿಸುವ ರಚನೆ
A] ಅಂಡಾಶಯ
B] ಅಂಡನಾಳ
C] ಫೇಲೋಪಿಯನ್ ನಾಳ
D] ಪ್ಲಾಸೆಂಟಾ[ಜರಾಯು]
7. ಪ್ರತಿಯೊಂದು ಜೀವಿಯು ಸಂತಾನೋತ್ತಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶ
A] ಜೀವಿಯು ಜೀವಂತವಾಗಿರಲು
B] ದೇಹದ ಶಕ್ತಿಯ ಅಗತ್ಯತೆಗಳನ್ನು ಪೂರೈಸಲು
C] ಬೆಳವಣಿಗೆಯನ್ನು ನಿರ್ವಹಿಸಲು
D] ತನ್ನ ಸಂತತಿಯನ್ನು ಮುಂದುವರೆಸಲು
8. ಮೊಗ್ಗುವಿಕೆ ವಿಧಾನದಿಂದ ಸಂತೋನೋತ್ಪತ್ತಿ ಕೈಗೊಳ್ಳುವ ಏಕಕೋಶ ಜೀವಿ
A] ಹೈಡ್ರಾ
B] ಯೀಸ್ಟ್
C] ಲಿಶ್ಮೇನಿಯಾ
D] ಪ್ಲಾಸ್ಮೋಡಿಯಂ
9. ಹೆಣ್ಣು ಸಂತಾನೋತ್ಪತ್ತಿ ವ್ಯೂಹದ ಈ ಚಿತ್ರದಲ್ಲಿ A ,B , C ಎಂದು ಗುರುತಿಸಿದ ಭಾಗಗಳು ಕ್ರಮವಾಗಿ ಹೀಗಿವೆ
A] ಗರ್ಭಕೋಶ , ಅಂಡಾಶಯ , ಅಂಡನಾಳ
B] ಅಂಡಾಶಯ , ಅಂಡನಾಳ , ಗರ್ಭಕೋಶ
C] ಅಂಡನಾಳ, ಅಂಡಾಶಯ , ಗರ್ಭಕೋಶ
D] ಅಂಡಾಶಯ , ಗರ್ಭಕೋಶ , ಅಂಡನಾಳ
10. ಲೈಂಗಿಕ ಸಂಪರ್ಕದಿಂದ ಹರಡುವ ರೋಗಗಳ ಗುಂಪನ್ನು ಗುರುತಿಸಿ
A] ಗೊನೋರಿಯಾ , ಸಿಫಿಲಿಸ್ , ಪ್ರಜನಾಂಗಗಳ ಗುಳ್ಳೆಗಳು
B] ಸಿಫಿಲಿಸ್, ಕಾಲಾ ಅಜಾರ್, ಏಡ್ಸ್
C] ಗೊನೋರಿಯಾ , ಸಿಫಿಲಿಸ್ , ಮಲೇರಿಯಾ
D] ಏಡ್ಸ್ , ಕಾಲಾ ಅಜಾರ್ , ಮಲೇರಿಯಾ.
Ready to send